ನವದೆಹಲಿ:ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ನುರಿತ ಹಾಗೂ ಪರಿಣಿತರನ್ನು ಹೊಂದಿರುವ ಅಮೆರಿಕದಂತಹ ಪ್ರಮುಖ ಟೆಕ್ ಮತ್ತು ಸಾಫ್ಟ್‌ವೇರ್ ಕಂಪನಿಗಳು ಭಾರತದಲ್ಲೂ ಇವೆ. ಲಕ್ಷಾಂತರ ಜನರು ಕೆಲಸ ಮಾಡುವ ಈ ಕಂಪನಿಗಳ ಮಾರುಕಟ್ಟೆ ಮೌಲ್ಯ ಲಕ್ಷಾಂತರ ಕೋಟಿ ರೂಪಾಯಿಗಳಷ್ಟಿದೆ.
ವಿಶ್ವ ಮಟ್ಟದಲ್ಲಿ ಇಂಡಿಯನ್ ಬ್ರ್ಯಾಂಡ್ ಶೈನಿಂಗ್ನ ಭಾರತದ ಟಾಪ್ 7 ಕಂಪನಿಗಳು: ಇದರಲ್ಲಿ ಇನ್ಫೋಸಿಸ್ನ ಸ್ಥಾನವೆಷ್ಟು ಗೊತ್ತೇ? - ಇನ್ಫೋಸಿಸ್ ಮಾರುಕಟ್ಟೆ
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸ್ತುತ ಮಾರುಕಟ್ಟೆ ಬಂಡವಾಳೀಕರಣದ ಮೂಲಕ ದೇಶದ ಮೂರು ದೊಡ್ಡ ಕಂಪನಿಗಳಾಗಿವೆ. ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಅತ್ಯಮೂಲ್ಯ ಕಂಪನಿಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮಾರುಕಟ್ಟೆ ಮೌಲ್ಯ ರೂ. 13 ಲಕ್ಷ ಕೋಟಿ ರೂ.ಯಷ್ಟಾಗಿದೆ.
ಮೌಲ್ಯಯುತ ಕಂಪನಿಗಳು

- ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಮೌಲ್ಯಯುತ ಕಂಪನಿಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಾಗತಿಕ ಕಂಪನಿಗಳ ಪೈಕಿ ಟಾಪ್ 50ರ ಒಳಗೆ ಸ್ಥಾನ ಗಿಟ್ಟಿಸಿಕೊಂಡಿದೆ. ಮಾರುಕಟ್ಟೆಯ ಎಂ - ಕ್ಯಾಪ್ 13.48 ಲಕ್ಷ ಕೋಟಿ ರೂ. ಅಧಿಕವಾಗಿದೆ.
- ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸೇವೆ ಕಂಪನಿಯಾದ ಟಿಸಿಎಸ್ ನಂತರದ ಸ್ಥಾನದಲ್ಲಿದೆ. ಇದರ ಮಾರುಕಟ್ಟೆ ಮೌಲ್ಯ 8.47 ಕೋಟಿ ರೂ.ಗೂ ಹೆಚ್ಚಳವಾಗಿದೆ.
- ಎಚ್‌ಡಿಎಫ್‌ಸಿ ಬ್ಯಾಂಕ್ ಮೂರನೇ ಸ್ಥಾನದಲ್ಲಿದ್ದು, ಇದರ ಮಾರುಕಟ್ಟೆ ಬಂಡವಾಳ ಮೌಲ್ಯ 5.65 ಲಕ್ಷ ಕೋಟಿ ರೂ.ಯಷ್ಟಿದೆ.
- ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕುಗಳ (ಎಫ್‌ಎಂಸಿಜಿ) ಗ್ರಾಹಕ ಉತ್ಪನ್ನಗಳ ಪ್ರಮುಖ ಕಂಪನಿ ಎಚ್‌ಯುಎಲ್ 4ನೇ ಸ್ಥಾನದಲ್ಲಿದೆ. ಇದರ ಎಂ-ಕ್ಯಾಪ್ ಮೌಲ್ಯ 5.15 ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ.
- ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್ 4.02 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯದ ಮೂಲಕ ಐದನೇ ಸ್ಥಾನದಲ್ಲಿದೆ.
- ಅಡಮಾನ ಸಾಲ ನೀಡುವ ಎಚ್‌ಡಿಎಫ್‌ಸಿಯ ಮಾರುಕಟ್ಟೆ ಮೌಲ್ಯ ರೂ. 3.08 ಲಕ್ಷ ಕೋಟಿ ರೂ. ಮುಖೇನ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
- 3.04 ಲಕ್ಷ ಕೋಟಿ ರೂ. ಮಾರುಕಟ್ಟೆಯ ಮೌಲ್ಯದೊಂದಿಗೆ ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ಏಳನೇ ಸ್ಥಾನದಲ್ಲಿದೆ.