ಕರ್ನಾಟಕ

karnataka

ETV Bharat / business

ಆಗಸ್ಟ್​ನಿಂದ ಸ್ಪುಟ್ನಿಕ್ ಲಸಿಕೆ ಉತ್ಪಾದನೆ: ಜಾಗತಿಕ ಪ್ರೊಡಕ್ಷನ್​​  ಪೈಕಿ ಶೇ 70ರಷ್ಟು ಭಾರತದಲ್ಲೇ ತಯಾರಿಕೆ! - ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ

ರಷ್ಯಾದ ಭಾರತೀಯ ರಾಯಭಾರಿ ಸೇಂಟ್ ಪೀಟಸ್​​ಬರ್ಗ್​ನಲ್ಲಿ ಪತ್ರಕರ್ತರೊಂದಿಗೆ ಸಂವಹನ ನಡೆಸಿದರು. ಸ್ಪುಟ್ನಿಕ್ ವಿ, ಎಸ್ -400 ಕ್ಷಿಪಣಿಗಳು ಮತ್ತು ಭಾರತದ ಕೋವಿಡ್​-19 ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ. ರಷ್ಯಾ ಈಗಾಗಲೇ 1,50,000 ಜೊತೆಗೆ 60,000 ಸ್ಪುಟ್ನಿಕ್ ವಿ ಪ್ರಮಾಣವನ್ನು ಭಾರತಕ್ಕೆ ಪೂರೈಸಿದೆ. ಮೇ ಅಂತ್ಯದ ವೇಳೆಗೆ ಇನ್ನೂ ಮೂರು ಮಿಲಿಯನ್ ಸ್ಪುಟ್ನಿಕ್ ವಿ ಪ್ರಮಾಣ ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ಪೂರೈಸಲಾಗುವುದು ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ಹೇಳಿದ್ದಾರೆ.

Sputnik V
Sputnik V

By

Published : May 22, 2021, 5:24 PM IST

ನವದೆಹಲಿ: ಭಾರತವು ರಷ್ಯಾ ಅಭಿವೃದ್ಧಿಪಡಿಸಿ ಕೋವಿಡ್-19 ಲಸಿಕೆ 'ಸ್ಪುಟ್ನಿಕ್ ವಿ'ಯ ಉತ್ಪಾದನೆಯನ್ನು ಆಗಸ್ಟ್‌ನಲ್ಲಿ ಪ್ರಾರಂಭಿಸಲಿದೆ.

ದೇಶವು 850 ಮಿಲಿಯನ್ ಸ್ಪುಟ್ನಿಕ್ ವಿ ಪ್ರಮಾಣ ಉತ್ಪಾದಿಸುವ ನಿರೀಕ್ಷೆಯಿದೆ. ಜಗತ್ತಿನಲ್ಲಿ ಉತ್ಪಾದನೆ ಆಗುವ ಪೈಕಿ ಸ್ಪುಟ್ನಿಕ್ ವಿ ಲಸಿಕೆ ಭಾರತದಲ್ಲೇ ಸುಮಾರು ಶೇ 65-70ರಷ್ಟು ಉತ್ಪಾದನೆಯಾಗಲಿದೆ ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ಹೇಳಿದ್ದಾರೆ.

ರಷ್ಯಾದ ಭಾರತೀಯ ರಾಯಭಾರಿ ಡಿ.ಬಿ.ವೆಂಕಟೇಶ್ ವರ್ಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತವು ರಷ್ಯಾದ ಕೋವಿಡ್​ -19 ಲಸಿಕೆಯ 850 ಮಿಲಿಯನ್ ಡೋಸ್‌ ತಯಾರಿಸಲಿದೆ ಎಂದು ಘೋಷಿಸಿದರು.

ರಷ್ಯಾದ ಭಾರತೀಯ ರಾಯಭಾರಿ ಸೇಂಟ್ ಪೀಟಸ್​​ಬರ್ಗ್​ನಲ್ಲಿ ಪತ್ರಕರ್ತರೊಂದಿಗೆ ಸಂವಹನ ನಡೆಸಿದರು. ಸ್ಪುಟ್ನಿಕ್ ವಿ, ಎಸ್ -400 ಕ್ಷಿಪಣಿಗಳು ಮತ್ತು ಭಾರತದ ಕೋವಿಡ್​-19 ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ. ರಷ್ಯಾ ಈಗಾಗಲೇ 1,50,000 ಜೊತೆಗೆ 60,000 ಸ್ಪುಟ್ನಿಕ್ ವಿ ಪ್ರಮಾಣವನ್ನು ಭಾರತಕ್ಕೆ ಪೂರೈಸಿದೆ. ಮೇ ಅಂತ್ಯದ ವೇಳೆಗೆ ಇನ್ನೂ ಮೂರು ಮಿಲಿಯನ್ ಸ್ಪುಟ್ನಿಕ್ ವಿ ಪ್ರಮಾಣ ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ಪೂರೈಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.

ಭಾರತದಲ್ಲಿ 850 ಮಿಲಿಯನ್ ಸ್ಪುಟ್ನಿಕ್ ವಿ ಡೋಸ್‌ ತಯಾರಿಸುವುದು ಪ್ರಸ್ತುತ ಯೋಜನೆಯಾಗಿದೆ. ವಿಶ್ವದ ನಾನಾ ಕಡೆ ಉತ್ಪತ್ತಿಯಾಗುವ ಒಟ್ಟು ಸ್ಪುಟ್ನಿಕ್ ವಿ ಲಸಿಕೆ ಪ್ರಮಾಣಗಳಲ್ಲಿ ಸುಮಾರು ಶೇ 65-70ರಷ್ಟು ಭಾರತದಿಂದ ಬರಲಿದೆ ಎಂದರು.

ಸ್ಪುಟ್ನಿಕ್ ಭಾರತದಲ್ಲಿ ಮೂರು ಹಂತಗಳಲ್ಲಿ ಉತ್ಪಾದನೆಯಾಗಲಿದೆ. ಮೊದಲನೆಯದಾಗಿ, ರಷ್ಯಾದಿಂದ ಸರಬರಾಜು, ಸಂಪೂರ್ಣವಾಗಿ ತಯಾರಿಸಲ್ಪಟ್ಟಿದೆ. ಇದು ಈಗಾಗಲೇ ಪ್ರಾರಂಭವಾಗಿದೆ. ಎರಡನೆಯದಾಗಿ, ಆರ್‌ಡಿಐಎಫ್ ಬೃಹತ್ ಪ್ರಮಾಣದಲ್ಲಿ ಭಾರತಕ್ಕೆ ಕಳುಹಿಸುತ್ತದೆ. ಇದು ಬಳಕೆಗೆ ಸಿದ್ಧವಾಗಲಿದೆ. ಆದರೆ, ಇದನ್ನು ಭಾರತದ ವಿವಿಧ ಬಾಟಲಿಗಳಲ್ಲಿ ತುಂಬಿಸಬೇಕಾಗುತ್ತದೆ ಎಂದು ರಷ್ಯಾದ ಭಾರತೀಯ ರಾಯಭಾರಿ ವಿವರಿಸಿದರು.

ABOUT THE AUTHOR

...view details