ನವದೆಹಲಿ: ಹ್ಯುಂಡೈ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಎಲೆಕ್ಟ್ರಿಕ್ SUVಯನ್ನು ಪರಿಚಯಿಸಿದ್ದು, ಬೇಸಿಗೆಯಲ್ಲಿ 'ಡ್ರೈವ್ ಇನ್ ಟು ದಿ ಫ್ಯೂಚರ್' ಸ್ಲೋಗನ್ ಮೂಲಕ ಇ-ವಿ ಕಾರಿನ ಟಿವಿ ಜಾಹೀರಾತಿಗೆ ಚಾಲನೆ ನೀಡಿತು.
ಭಾರತದ 15 ಕೋಟಿ ಚಾಲಕರಿಗೆ 8,000 ಎಲೆಕ್ಟ್ರಿಕ್ ಕಾರು! ಇದು ಚೀನಾದ 2 ದಿನದ ಮಾರಾಟ - ಹ್ಯುಂಡೈ ಮೋಟಾರ್
ಬ್ಲೂಮ್‌ಬರ್ಗ್ ಸಂಗ್ರಹಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಕೇವಲ 8,000ಕ್ಕೂ ಅಧಿಕ ಎಲೆಕ್ಟ್ರಿಕ್ ಕಾರುಗಳು ಮಾತ್ರವೇ ಮಾರಾಟವಾಗಿದೆ. 15 ಕೋಟಿ ಚಾಲಕರಿಗೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆಯಾಗಿದೆ. ಚೀನಾ ಎರಡು ದಿನಗಳಲ್ಲಿ ಅದಕ್ಕಿಂತ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುತ್ತಿದೆ. ಹ್ಯುಂಡೈ ಮೋಟಾರ್ ಕಂಪನಿ ಈಚೆಗೆ ಚಾಲನೆ ನೀಡಿದ ತನ್ನ ಎಲೆಕ್ಟ್ರಿಕ್ ಕಾರು ಉತ್ಪನ್ನ ಜಾಹೀರಾತು ಕಾರ್ಯಕ್ರಮದ ವೇಳೆ ಈ ವಿಚಾರ ತಿಳಿದು ಬಂದಿದೆ.
ಭಾರತ ಸುಮಾರು 15 ಕೋಟಿ (150 ಮಿಲಿಯನ್) ಚಾಲಕರನ್ನು ಹೊಂದಿದೆ. ಆಗಸ್ಟ್ ವೇಳೆ ಕೋನಾ ಎಸ್‌ಯುನ 130 ಕಾರುಗಳು ಮಾತ್ರ ಮಾರಾಟ ಆಗಿವೆ. ಸರ್ಕಾರದ ಬದ್ಧತೆಯೂ ಜೊತೆಗಿದ್ದರೂ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಅಧಿಪತ್ಯ ಸ್ಥಾಪಿಸುವುದು ಕಷ್ಟಕರ ಎಂಬ ಸವಾಲುಗಳ ಸಂಕೇತವಾಗಿದೆ ಎಂದಿದೆ.
ಬ್ಲೂಮ್‌ಬರ್ಗ್ ಸಂಗ್ರಹಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಕೇವಲ 8,000ಕ್ಕೂ ಅಧಿಕ ಎಲೆಕ್ಟ್ರಿಕ್ ಕಾರುಗಳು ಮಾತ್ರವೇ ಮಾರಾಟ ಆಗಿವೆ. 15 ಕೋಟಿ ಚಾಲಕರಿಗೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆಯಾಗಿದೆ. ಚೀನಾ ಎರಡು ದಿನಗಳಲ್ಲಿ ಅದಕ್ಕಿಂತ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುತ್ತಿದೆ.