ನವದೆಹಲಿ: ದೇಶದ ಪ್ರತಿಷ್ಠಿತ ಉದ್ಯಮವಾದ ಟಾಟಾ ಸಂಸ್ಥೆಗೆ ಸೇರಿದ್ದ ಆರು ಟ್ರಸ್ಟ್‌ಗಳ ನೋಂದಣಿಯನ್ನು ಆದಾಯ ತೆರಿಗೆ ಇಲಾಖೆ ರದ್ದುಪಡಿಸಿದೆ.
ಟಾಟಾದ 6 ಟ್ರಸ್ಟ್‌ಗಳ ನೋಂದಣಿ ರದ್ದುಪಡಿಸಿದ ಐಟಿ ಇಲಾಖೆ... ಕಾರಣವೇನು ಗೊತ್ತೆ? - ಟಾಟಾ ಟ್ರಸ್ಟ್
ನೋಂದಣಿ ರದ್ದತಿ ಒಪ್ಪಿಗೆಯ ನಿರ್ಧಾರವನ್ನು ಟ್ರಸ್ಟ್‌ಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ. ದತ್ತಿ ಕಾರ್ಯಗಳಿಗಾಗಿ ಟ್ರಸ್ಟ್‌ಗೆ ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠಗೊಳಿಸಲು ಇದೊಂದು ಉತ್ತಮ ನಿರ್ಣಯ ಎಂದು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.
ನೋಂದಣಿ ರದ್ದತಿಯಲ್ಲಿ ಟಾಟಾ ಟ್ರಸ್ಟ್, ಆರ್.ಡಿ. ಟಾಟಾ ಟ್ರಸ್ಟ್, ಟಾಟಾ ಸೋಷಿಯಲ್ ವೆಲ್ಫೇರ್ ಟ್ರಸ್ಟ್, ಟಾಟಾ ಎಜ್ಯುಕೇಷನ್ ಟ್ರಸ್ಟ್, ಸಾರ್ವಜನಿಕ ಸೇವಾ ಟ್ರೆಸ್ಟ್ ಹಾಗೂ ನವಜ್ಬಾಯಿ ರತನ್ ಟಾಟಾ ಟ್ರಸ್ಟ್ ಸೇರಿವೆ. ಈ ಆರು ಟ್ರಸ್ಟ್‌ಗಳು ತಮ್ಮ ನೋಂದಣಿ ಸಂಬಂಧಿತ ಆದಾಯ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಾಗದೇ ಇರುವುದರಿಂದ ರದ್ದಾಗಿವೆ ಎಂದು ಟಾಟಾ ಹೇಳಿದೆ.
ನೋಂದಣಿ ರದ್ದತಿ ಒಪ್ಪಿಗೆ ನಿರ್ಧಾರವನ್ನು (ಕಾನೂನಿನಲ್ಲಿ ಲಭ್ಯವಿರುವ ಒಂದು ಆಯ್ಕೆ) ಟ್ರಸ್ಟ್‌ಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ. ದತ್ತಿ ಕಾರ್ಯಗಳಿಗಾಗಿ ಟ್ರಸ್ಟ್‌ಗೆ ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠಗೊಳಿಸಲು ಇದೊಂದು ಉತ್ತಮ ನಿರ್ಣಯ ಎಂದು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.