ಬೆಂಗಳೂರು: ಹಿಂದಿನ ಸಿಂಡಿಕೇಟ್ ಬ್ಯಾಂಕ್ ಶಾಖೆಗಳ ಐಎಫ್‌ಎಸ್‌ಸಿ ಕೋಡ್ಗಳು 2021ರ ಜುಲೈ 1ರಿಂದ ಬದಲಾಗಿ ಹೊಸದಾಗಿ ಜಾರಿಗೆ ಬರಲಿವೆ. ಗ್ರಾಹಕರು ಹೊಸ ಕೆನರಾ ಐಎಫ್‌ಎಸ್‌ಸಿಯನ್ನು ನೆಫ್ಟ್ / ಆರ್‌ಟಿಜಿಎಸ್ / ಐಎಂಪಿಎಸ್ ಮೂಲಕ ಹಣ ಸ್ವೀಕರಿಸಲು ಬಳಸಬೇಕಾಗುತ್ತದೆ ಎಂದು ಕೆನರಾ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಐಎಫ್‌ಎಸ್‌ಸಿ ಅನ್ನು URL canarabank.com/IFSC.html ಮೂಲಕ ಪಡೆಯಬಹುದು ಅಥವಾ ಕೆನರಾ ಬ್ಯಾಂಕಿನ ವೆಬ್‌ಸೈಟ್‌ಗೆ ಪ್ರವೇಶಿಸಬಹುದು ಅಥವಾ ಯಾವುದೇ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಹಿಂದಿನ (ಇ) -ಸಿಂಡಿಕೇಟ್ ಬ್ಯಾಂಕ್‌ನ ಗ್ರಾಹಕರು ಬದಲಾದ ಐಎಫ್‌ಎಸ್‌ಸಿ / ಎಂಐಸಿಆರ್ ಕೋಡ್‌ಗಳೊಂದಿಗೆ ಹೊಸ ಚೆಕ್ ಪುಸ್ತಕಗಳನ್ನು ಪಡೆಯಬೇಕಾಗುತ್ತದೆ ಎಂದು ಹೇಳಿದೆ.