ಕರ್ನಾಟಕ

karnataka

By

Published : Jan 21, 2021, 12:03 PM IST

ETV Bharat / business

ವಿಶ್ವದ ಅಗ್ರ 300 ಸಹಕಾರಿ ಸಂಸ್ಥೆಗಳಲ್ಲಿ ಭಾರತೀಯ ರಸಗೊಬ್ಬರ ಒಕ್ಕೂಟ 'ಇಫ್ಕೊ' ನಂ.1

ಜಿಡಿಪಿ ಮತ್ತು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಇಫ್ಕೊ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟ (ಐಸಿಎ) ಪ್ರಕಟಿಸಿದ 9ನೇ ವಾರ್ಷಿಕ ವಿಶ್ವ ಸಹಕಾರಿ ಮಾನಿಟರ್ (ಡಬ್ಲ್ಯುಸಿಎಂ) ವರದಿಯ 2020ರ ಆವೃತ್ತಿಯ ಪ್ರಕಾರ, ಇಫ್ಕೋ ಉದ್ಯಮದ ವಹಿವಾಟು ದೇಶದ ಸಂಪತ್ತಿಗೆ ಸಂಬಂಧಿಸಿದೆ ಎಂದು ಹೇಳಿದೆ.

IFFCO
ಇಫ್ಕೊ

ನವದೆಹಲಿ: ಭಾರತೀಯ ರೈತ ರಸಗೊಬ್ಬರ ಸಹಕಾರಿ ಲಿಮಿಟೆಡ್ (ಇಫ್ಕೊ) ಕಳೆದ ಹಣಕಾಸು ವರ್ಷದಲ್ಲಿ ಒಟ್ಟಾರೆ ವಹಿವಾಟು ಶ್ರೇಯಾಂಕದಲ್ಲಿ 125ನೇ ಸ್ಥಾನದಿಂದ 65ನೇ ಸ್ಥಾನಕ್ಕೆ ಜಿಗಿದು, ಈಗ ವಿಶ್ವದ 300 ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಶ್ರೇಯಾಂಕವು ತಲಾವಾರು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಮೇಲಿನ ವಹಿವಾಟಿನ ಅನುಪಾತ ಆಧರಿಸಿದೆ.

ಜಿಡಿಪಿ ಮತ್ತು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಇಫ್ಕೊ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟ (ಐಸಿಎ) ಪ್ರಕಟಿಸಿದ 9ನೇ ವಾರ್ಷಿಕ ವಿಶ್ವ ಸಹಕಾರಿ ಮಾನಿಟರ್ (ಡಬ್ಲ್ಯುಸಿಎಂ) ವರದಿಯ 2020ರ ಆವೃತ್ತಿಯ ಪ್ರಕಾರ, ಇಫ್ಕೋ ಉದ್ಯಮದ ವಹಿವಾಟು ದೇಶದ ಸಂಪತ್ತಿಗೆ ಸಂಬಂಧಿಸಿದೆ ಎಂದು ಹೇಳಿದೆ.

36,000ಕ್ಕೂ ಹೆಚ್ಚು ಸದಸ್ಯ ಸಹಕಾರ ಸಂಘಗಳನ್ನು ಹೊಂದಿರುವ ಇಫ್ಕೊ, ಸುಮಾರು 7 ಬಿಲಿಯನ್ ಡಾಲರ್​ಗಳ ಗುಂಪು ವಹಿವಾಟು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ. ಇಫ್ಕೊ ಮತ್ತು ಅದರ ಸಹವರ್ತಿಗಳಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದೆ ಎಂದು ಇಫ್ಕೊದ ಎಂಡಿ ಡಾ ಯು ಎಸ್ ಅವಸ್ಥಿ ಹೇಳಿದರು.

ಭಾರತೀಯ ಸಹಕಾರಿ ಆಂದೋಲನದಲ್ಲಿ ನಮ್ಮೆಲ್ಲರಿಗೂ ಒಂದು ದೊಡ್ಡ ಸಾಧನೆ. ಇಫ್ಕೊದಲ್ಲಿ ನಾವು ಯಾವಾಗಲೂ ದೇಶಾದ್ಯಂತದ ರೈತರ ಬೆಳವಣಿಗೆಗೆ ಮತ್ತು ಭಾರತೀಯ ಸಹಕಾರಿ ಆಂದೋಲನ ಬಲಪಡಿಸಲು ಬದ್ಧರಾಗಿದ್ದೇವೆ. ಇದುವೇ ನಮ್ಮ ಯಶಸ್ಸಿನ ಕೀಲಿ ಆಗಿರುವುದರಿಂದ ನಾವೀನ್ಯತೆಯನ್ನು ನಾವು ನಂಬುತ್ತೇವೆ. ಈ ದೊಡ್ಡ ಸಾಧನೆಗಾಗಿ ಇಫ್ಕೊ ಮತ್ತು ದೇಶದ ಸಂಪೂರ್ಣ ಸಹಕಾರಿ ಭ್ರಾತೃತ್ವದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ: ಡಾಲರ್​ಗೆ ರೂಪಾಯಿ ಪಂಚ್​: 5 ತಿಂಗಳ ಗರಿಷ್ಠ ಮಟ್ಟಕ್ಕೆ ಜಿಗಿದ ರೂಪಾಯಿ

ಇಂಟರ್​ನ್ಯಾಷನಲ್ ಕೋಆಪರೇಟಿವ್ ಅಲೈಯನ್ಸ್ (ಐಸಿಎ) ಮತ್ತು ಯುರೋಪಿಯನ್ ರಿಸರ್ಚ್ ಇನ್​ಸ್ಟಿಟ್ಯೂಟ್ ಆನ್ ಕೋಆಪರೇಟಿವ್ ಆ್ಯಂಡ್ ಸೋಶಿಯಲ್ ಎಂಟರ್‌ಪ್ರೈಸಸ್ (ಯೂರಿಕ್ಸ್) ವಿಶ್ವ ಸಹಕಾರ ಮಾನಿಟರ್‌ನ 2020 ಆವೃತ್ತಿಯನ್ನು ಗುರುವಾರ ಅಂತಾರಾಷ್ಟ್ರೀಯ ವೆಬಿ‌ನಾರ್​ನಲ್ಲಿ ಬಿಡುಗಡೆ ಮಾಡಿತು.

ವರದಿಯು 9ನೇ ವಾರ್ಷಿಕ ಮತ್ತು ವಿಶ್ವದಾದ್ಯಂತದ ಅತಿದೊಡ್ಡ ಸಹಕಾರಿ ಮತ್ತು ಪರಸ್ಪರರ ಆರ್ಥಿಕ ಮತ್ತು ಸಾಮಾಜಿಕ ಪ್ರಭಾವವನ್ನು ಪರಿಶೋಧಿಸುತ್ತದೆ, ಇದು ಟಾಪ್ 300 ರ ಶ್ರೇಯಾಂಕ, ವಲಯ ಶ್ರೇಯಾಂಕಗಳು ಮತ್ತು ಪ್ರಸ್ತುತ ಜಾಗತಿಕ ಸವಾಲುಗಳಿಗೆ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಒದಗಿಸುತ್ತದೆ ಕೋವಿಡ್ ಮತ್ತು ಹವಾಮಾನ ಬದಲಾವಣೆ.

ABOUT THE AUTHOR

...view details