ಕರ್ನಾಟಕ

karnataka

ETV Bharat / business

ಮನೆಯಲ್ಲೇ ಚಿಕಿತ್ಸೆಗೂ ಐಸಿಐಸಿಐನಿಂದ ವಿಮೆ ಮೊತ್ತ ಕ್ಲೈಮ್.. 15 ದಿನಗಳಲ್ಲಿ ರೈಟ್ಸ್‌ ಇತ್ಯರ್ಥ - ಕೋವಿಡ್ ಆರೋಗ್ಯ ವಿಮೆ

ಆಸ್ಪತ್ರೆಯ ಬದಲು ತಮ್ಮ ಮನೆಗಳಲ್ಲಿ ಎಂತಹದ್ದೆ ಕಾಯಿಲೆಗೆ ಚಿಕಿತ್ಸೆ ಪಡೆಯಲು ಇಚ್ಛಿಸುವ ಗ್ರಾಹಕರಿಗೂ ಐಸಿಐಸಿಐ ಲೊಂಬಾರ್ಡ್​ ವಿಮಾ ಪ್ರಯೋಜನ ನೀಡುತ್ತದೆ. ಇದರಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಗೆ ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.

ICICI Lombard
ಐಸಿಐಸಿಐ

By

Published : Jun 16, 2020, 4:25 PM IST

ಮುಂಬೈ: ಐಸಿಐಸಿಐ ಲೊಂಬಾರ್ಡ್ ಕೋವಿಡ್​-19 ಹೋಮ್​ ಚಿಕಿತ್ಸೆಗೂ ವಿಮಾ ಸೌಲಭ್ಯಗಳನ್ನು ಅನುಮತಿಸುತ್ತಿದೆ. 15 ದಿನಗಳಲ್ಲಿ ಪಾಲಿಸಿದಾರರ ರೈಟ್ಸ್​ ಇತ್ಯರ್ಥಗೊಳಿಸಲಿದೆ.

ಗ್ರಾಹಕರು ವಿಮಾ ಹಕ್ಕು ಪಡೆಯಲು ಆಸ್ಪತ್ರೆ ಮಾತ್ರವಲ್ಲದೇ ಗೃಹ ಚಿಕಿತ್ಸೆಗೂ ಪಾಲಿಸಿ ಕ್ಲೈಮ್​ ಅನ್ವಯಿಸುತ್ತದೆ. ಕೆಲವು ಆಯ್ದ ನೀತಿಗಳ ಸಾಂಕ್ರಾಮಿಕ ರೋಗಕ್ಕಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿಯೂ ಸಹ ಯಾವುದೇ ತರಹದ ಕ್ಲೈಮ್ ಭೋನಸ್ ಪ್ರಯೋಜನ ಪಡೆಯುವ ಅವಕಾಶವಿದೆ.

ಆಸ್ಪತ್ರೆಯ ಬದಲು ತಮ್ಮ ಮನೆಗಳಲ್ಲಿ ಎಂತಹದ್ದೆ ಕಾಯಿಲೆಗೆ ಚಿಕಿತ್ಸೆ ಪಡೆಯಲು ಇಚ್ಛಿಸುವ ಗ್ರಾಹಕರಿಗೂ ಐಸಿಐಸಿಐ ಲೊಂಬಾರ್ಡ್​ ವಿಮಾ ಪ್ರಯೋಜನ ನೀಡುತ್ತದೆ. ಇದರಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಗೆ ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.

ಕೊರೊನಾ ಸಾಂಕ್ರಾಮಿಕ ಮತ್ತು ಅದಕ್ಕೆ ಸಂಬಂಧಿಸಿದ ನಿರ್ಬಂಧಗಳಿಂದಾಗಿ ಗ್ರಾಹಕರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಪ್ರಯೋಜನಗಳು ಒದಗಿಸುತ್ತಿದ್ದೇವೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ಕೋವಿಡ್​-19- ಸಂಬಂಧಿತ ಒಳರೋಗಿಗಳ ರೈಟ್ಸ್​ನ ಹೊಸ ಪಾಲಿಸಿಗಳ ಕಾಯುವ ಅವಧಿಯನ್ನು 15 ದಿನ (ಈ ಹಿಂದೆ 30 ದಿನಗಳು) ಕಡಿಮೆ ಮಾಡಲಾಗಿದೆ. ವಿಮಾದಾರರು ಕಡಿಮೆ ಅವಧಿ ಸೇರಿಸುವುದರಿಂದ ಪ್ರೀಮಿಯಂನಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ಕಡಿಮೆ ಸಮಯದ ರೈಟ್ಸ್​ ಇತ್ಯರ್ಥವು ಸಂಪೂರ್ಣ ಆರೋಗ್ಯ ವಿಮೆ, ಆರೋಗ್ಯವರ್ಧಕ, ಆರೋಗ್ಯ ರಕ್ಷಣೆ ಇತರೆ ಗ್ರೂಪ್​ ಯೋಜನೆಗಳು ಸೇರಿ ಎಲ್ಲಾ ಆರೋಗ್ಯ ಪರಿಹಾರ ನೀತಿಗಳಿಗೆ ಅನ್ವಯಿಸುತ್ತದೆ ಎಂದು ಸ್ಪಷ್ಟನೆ ನೀಡಿದೆ.

ABOUT THE AUTHOR

...view details