ನವದೆಹಲಿ: ವಿಡಿಯೋಕಾನ್ ಸಂಸ್ಥೆಗೆ ಐಸಿಐಸಿಐನಿಂದ ಸಾಲ ನೀಡಿದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಇಂದು ವಿಡಿಯೋಕಾನ್ ಚೇರ್ಮನ್ ವೇಣುಗೋಪಾಲ್ ಧೂತ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು.
ವಿಡಿಯೋಕಾನ್ ಹಗರಣ.. 'ಇಡಿ'ಯಿಂದ ವೇಣು, ಚಂದಾ, ದೀಪಕ್ ಕೋಚಾರ್ ವಿಚಾರಣೆ -
ವಂಚನೆ ಕುರಿತು ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್ ಹಾಗೂ ಚಂದಾ ಪತಿ ದೀಪಕ್ ಅವರನ್ನು ಸಹ ಇಡಿ ವಿಚಾರಣೆ ನಡೆಸಿದೆ. 2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಸಮೂಹಕ್ಕೆ 3,250 ಕೋಟಿ ರೂ. ಸಾಲ ನೀಡಿದ ಹಗರಣ ಇದಾಗಿದೆ.
ವಂಚನೆ ಕುರಿತು ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್ ಹಾಗೂ ಚಂದಾ ಪತಿ ದೀಪಕ್ ಅವರನ್ನು ಸಹ ಇಡಿ ವಿಚಾರಣೆ ನಡೆಸಿದೆ. 2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಸಮೂಹಕ್ಕೆ 3,250 ಕೋಟಿ ರೂ. ಸಾಲ ನೀಡಿದ ಹಗರಣ ಇದಾಗಿದೆ.
ವಂಚನೆ, ಭ್ರಷ್ಟಾಚಾರ ಮತ್ತು ಅಕ್ರಮ ಎಸಗಿದ ಪ್ರಕರಣದಡಿ ಚಂದಾ ಕೊಚ್ಚಾರ್ ಮತ್ತು ಇತರರ ವಿರುದ್ಧ ಸಿಬಿಐ ದೂರು ದಾಖಲಿಸಿ ತನಿಖೆ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಜಾರಿ ನಿರ್ದೇಶನಾಲಯ ಪ್ರಕರಣ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿತ ಆರೋಪಿಗಳನ್ನು ನಾಳೆಯೂ (ಶನಿವಾರ) ವಿಚಾರಣೆಗೆ ಹಾಜರಿ ಆಗುವಂತೆ ಆದೇಶಿಸಿದೆ.