ಮುಂಬೈ: ವಾಟ್ಸ್ಆ್ಯಪ್ ಬ್ಯಾಂಕಿಂಗ್ ಸೇವೆ ವ್ಯಾಪ್ತಿ ವಿಸ್ತರಿಸಿದ ಭಾರತದ 2ನೇ ಅತಿದೊಡ್ಡ ಖಾಸಗಿ ಸಾಲಗಾರ ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ತನ್ನ ಗ್ರಾಹಕರು ಈಗ ಚಾಟ್ ಪ್ಲಾಟ್‌ಫಾರ್ಮ್‌ನಲ್ಲಿ ಸಂದೇಶ ಕಳುಹಿಸುವ ಮೂಲಕ ಸ್ಥಿರ ಠೇವಣಿ (ಎಫ್‌ಡಿ) ತೆರೆಯಬಹುದು ಎಂದು ಹೇಳಿದೆ.
ಇಲ್ಲಿಯವರೆಗೆ ಗ್ರಾಹಕರು ತಮ್ಮ ಎಫ್‌ಡಿ ವಿವರಣೆಯ ಮೆಚ್ಯುರಿಟಿ ದಿನಾಂಕ, ಮೊತ್ತದಂತಹ ಸೇವೆಗಳನ್ನು ವಾಟ್ಸ್ಆ್ಯಪ್ ಮೂಲಕ ಪರಿಶೀಲಿಸಬಹುದು. ಇದಲ್ಲದೇ ಗ್ರಾಹಕರು ಈ ಪ್ಲಾಟ್‌ಫಾರ್ಮ್ ಮೂಲಕ ವಿದ್ಯುತ್, ನೀರು, ಸಿಲಿಂಡರ್, ಮೊಬೈಲ್ ಫೋನ್ ನಂತಹ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಪ್ರಾರಂಭಿಸಬಹುದು ಎಂದು ಬ್ಯಾಂಕ್ ಹೇಳಿದೆ.
ಪ್ರಿಪೇಯ್ಡ್ ಮೊಬೈಲ್ ಫೋನ್‌ಗಳನ್ನು ರೀಚಾರ್ಜ್ ಮಾಡುವ ಸೇವೆಯು ಶೀಘ್ರದಲ್ಲೇ ವಾಟ್ಸ್ಆ್ಯಪ್ನಲ್ಲಿ ಲಭ್ಯವಾಗಲಿದೆ. ಕಾರ್ಪೊರೇಟ್‌ಗಳು ಮತ್ತು ಎಂಎಸ್‌ಎಂಇಗಳಿಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು), ಆಯ್ದ ಕಂಪನಿಗಳೊಂದಿಗೆ ವ್ಯಾಪಾರ ಹಣಕಾಸು ಸೇವೆಗಳನ್ನು ಪರೀಕ್ಷಿಸುತ್ತಿದ್ದೇವೆ. ಅವುಗಳ ಬಳಕೆ ಹೆಚ್ಚಿದ ನಂತರ ಪ್ರಾರಂಭಿಸುವುದಾಗಿ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರು ಉಳಿತಾಯ ಖಾತೆ ಬಾಕಿ, ಕೊನೆಯ ಮೂರು ವಹಿವಾಟುಗಳು, ಕ್ರೆಡಿಟ್ ಕಾರ್ಡ್ ಮಿತಿ, ಪೂರ್ವ ಅನುಮೋದಿತ ತ್ವರಿತ ಸಾಲ ಆಫರ್ನ ವಿವರ, ಕ್ರೆಡಿಟ್ / ಡೆಬಿಟ್ ಕಾರ್ಡ್ ಸುರಕ್ಷಿತ ನಿರ್ಬಂಧ, ತ್ವರಿತ ಉಳಿತಾಯ ಖಾತೆ ಓಪನ್, ಸಾಲ ನಿಷೇಧ ಆಯ್ಕೆ, ಕೆಲವು ಪ್ರಮುಖ ಪತ್ರಿಕೆಗಳು / ನಿಯತಕಾಲಿಕೆಗಳ ಪಿಡಿಎಫ್ ಪ್ರವೇಶಾತಿ, ಹತ್ತಿರದ ಮಳಿಗೆಗಳನ್ನು ಪತ್ತೆ ಮಾಡಬಹುದಾಗಿದೆ.
ಐಸಿಐಸಿಐ ಬ್ಯಾಂಕಿನ ಗ್ರಾಹಕರಲ್ಲದವರೂ ಪ್ರಸ್ತುತ ಕೊಡುಗೆಗಳ ಬಗ್ಗೆ ತಿಳಿಯಲು ವಾಟ್ಸ್ಆ್ಯಪ್ ಸೇವೆಗಳನ್ನು ಸಹ ಬಳಸಬಹುದು. ಹತ್ತಿರದ ಐಸಿಐಸಿಐ ಬ್ಯಾಂಕ್ ಎಟಿಎಂ ಮತ್ತು ಶಾಖೆಗಳನ್ನು ಪತ್ತೆ ಮಾಡಬಹುದು.
- ವಾಟ್ಸ್ಆ್ಯಪ್ ಬ್ಯಾಂಕಿಂಗ್ ಎಲ್ಲಾ 365 ದಿನಗಳ 24/7 ಉಚಿತವಾಗಿ ಲಭ್ಯವಿದೆ. ಹಿಂದಿ ಭಾಷೆಯಲ್ಲಿಯೂ ಲಭ್ಯವಿರಲಿದೆ. ಈ ಸೇವೆ ಪಡೆಯಲು ಕಾರ್ಯವಿಧಾನದ ಹೀಗಿದೆ...
- ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ 8640086400 ಸಂಖ್ಯೆ ಸೇರಿಸಿ, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8640086400 ‘ಹಾಯ್’ ಎಂದು ಸಂದೇಶ ಕಳುಹಿಸಿ
- ಗ್ರಾಹಕರು ಮೊಬೈಲ್ನಲ್ಲಿ ಸುರಕ್ಷಿತ ಮತ್ತು ಸಂವಾದಾತ್ಮಕ ಮೆನುವಿನ ವಾಟ್ಸ್ಆ್ಯಪ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮೂಲಕ ಪಡೆಯುವ ಸಂಭಾಷಣೆ ಪ್ರಾರಂಭಿಸಲು 9542000030ಗೆ ಮಿಸ್ಡ್ ಕಾಲ್ ಅಥವಾ ಎಸ್‌ಎಂಎಸ್ ಒಪಿಟಿನ್ ಮಾಡಬಹುದು
- ಪ್ರತಿ ವಹಿವಾಟಿಗೆ ಸಂಬಂಧಿಸಿದ ಕೀವರ್ಡ್‌ನೊಂದಿಗೆ ವಾಟ್ಸ್ಆ್ಯಪ್ನಲ್ಲಿ ಲಭ್ಯವಿರುವ ಸೇವೆಗಳ ಪಟ್ಟಿಯ ಮೆನು ಕಾಣಿಸುತ್ತದೆ
- ಉದಾ: ಸ್ಥಿರ ಠೇವಣಿ ಖಾತೆ ತೆರೆಯುವುದು, ‘ಸ್ಥಿರ ಠೇವಣಿ’ ಅಥವಾ ‘ಎಫ್‌ಡಿ’ ಎಂದು ಟೈಪ್ ಮಾಡಬೇಕಾಗುತ್ತದೆ. ನಂತರ ಮೊತ್ತ ಮತ್ತು ಅಧಿಕಾರಾವಧಿ ನಮೂದಿಸಿ. ಮೊತ್ತವು 10,000 ರೂ.ಯಿಂದ 1 ಕೋಟಿ ರೂ. ತನಕ ವಿಭಿನ್ನ ಅವಧಿಗಳಿಗೆ ಬಡ್ಡಿದರಗಳು ಮತ್ತು ವಾಯ್ದೆ ತೋರಿಸಲಾಗುತ್ತದೆ.
- ಯುಟಿಲಿಟಿ ಬಿಲ್ ಪಾವತಿಸಲು ‘ಪೇ ಬಿಲ್,’ ‘ವಿದ್ಯುತ್,’ ‘ಗ್ಯಾಸ್’ ಮತ್ತು ‘ಮೊಬೈಲ್ ಪೋಸ್ಟ್‌ಪೇಯ್ಡ್’ ಎಂದು ಟೈಪ್ ಮಾಡಬಹುದು.