ಕರ್ನಾಟಕ

karnataka

ETV Bharat / business

ಕಾರು ಕೊಳ್ಳುವವರ ಕನಿಸಿಗೆ ಬ್ರೇಕ್ ಹಾಕಿದ ಟಾಟಾ, ಮಾರುತಿ, ಹ್ಯುಂಡೈ..! - ಕಾರು ದರ

ಡಿಸೆಂಬರ್​ 3ರಂದು ಮಾರುತಿ ಸುಜುಕಿ, 2020ರ ಜನವರಿ ತಿಂಗಳಿಂದ ಎಲ್ಲ ವಿಧದ ಕಾರುಗಳ ದರದಲ್ಲಿ ಏರಿಕೆ ಆಗಲಿದೆ ಎಂದಿತ್ತು. ಇದರ ಜೊತೆಗೆ ಟಾಟಾ ಮೋಟಾರ್ಸ್​ ಕೂಡ, ಬಿಎಸ್​ ​- 6 ಮಾನದಂಡಗಳಿಗೆ ಅನುಗುಣವಾಗಿ ಎಂಜಿನ್ ಮೇಲ್ದರ್ಜೆಗೆ ಏರಿಸಿದ್ದರಿಂದ ಎಲ್ಲ ಶ್ರೇಣಿಯ ಕಾರುಗಳಲ್ಲಿ ₹ 10,000 ದಿಂದ ₹ 15,000 ವರೆಗೆ ಹೆಚ್ಚಳವಾಗಲಿದೆ ಎಂದು ಘೋಷಿಸಿತ್ತು. ಈಗ ಇವುಗಳ ಸಾಲಿಗೆ ಹ್ಯುಂಡೈ ಕೂಡ ಸೇರ್ಪಡೆ ಆಗಿದೆ.

Hyundai
ಹ್ಯುಂಡೈ

By

Published : Dec 10, 2019, 1:32 PM IST

ನವದೆಹಲಿ: ಟಾಟಾ ಮೋಟಾರ್ಸ್​ ಮತ್ತು ಮಾರುತಿ ಸುಜುಕಿ ಕಾರುಗಳ ದರ ಏರಿಕೆಯ ಬಳಿಕ ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾದ ಹ್ಯುಂಡೈ, ತನ್ನ ವಿವಿಧ ಶ್ರೇಣಿಯ ಕಾರುಗಳ ಬೆಲೆ ವರ್ಧಿಸಲು ನಿರ್ಧರಿಸಿದೆ.

ಕಚ್ಚಾ ಸರಕು ಆಮದು ಮತ್ತು ತಯಾರಿಕಾ ವೆಚ್ಚ ಏರಿಕೆ ಆಗುತ್ತಿರುವುದರಿಂದ ಎಲ್ಲ ಶ್ರೇಣಿಯ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಹ್ಯುಂಡೈ ಮೋಟಾರ್​ ಇಂಡಿಯಾ ಲಿಮಿಟೆಡ್​ (ಎಚ್​​ಎಂಐಎಲ್​) ತಿಳಿಸಿದೆ.

ವಿವಿಧ ಮಾದರಿಗಳ ಮತ್ತು ಇಂಧನ ಪ್ರಕಾರಗಳಿಗೆ ಅನುಗುಣವಾಗಿ ಕಾರುಗಳು ದರ ಏರಿಕೆಯ ವ್ಯಾಪ್ತಿಗೆ ಬರಲಿವೆ. ಇನ್​ಪುಟ್​​ ಮತ್ತು ಸರಕು ಮೌಲ್ಯದಲ್ಲಿನ ಹೆಚ್ಚಳದಿಂದಾಗಿ ನಮ್ಮ ಉತ್ಪನ್ನಗಳ ಏರಿಕೆಯು ಅನಿವಾರ್ಯವಾಗಿ ಹೆಚ್ಚಿಸಬೇಕಿದೆ ಎಂದು ಸ್ಪಷ್ಟನೆ ನೀಡಿದೆ. ಆದರೆ, ಕಾರುಗಳು ಎಷ್ಟು ದರದಲ್ಲಿ ಹೆಚ್ಚಳವಾಗಲಿವೆ ಎಂಬುದರ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಈ ತಿಂಗಳ ಕೊನೆಯಲ್ಲಿ ಬೆಲೆ ಏರಿಕೆಯ ವಿವರಗಳನ್ನು ಹಂಚಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ABOUT THE AUTHOR

...view details