ಕರ್ನಾಟಕ

karnataka

ETV Bharat / business

ಸ್ಮಾರ್ಟ್​ ಯುಗದ ಟ್ರೆಂಡ್: ಕಾರು ಖರೀದಿಗೂ ಆನ್​ಲೈನ್ ಬುಕ್ಕಿಂಗ್

ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಅಸ್ತಿತ್ವದಲ್ಲಿರುವ ಚಿಲ್ಲರೆ ಮಾರಾಟ ಜಾಲಕ್ಕೆ ಹೆಚ್ಚುವರಿಯಾಗಿ ಆನ್‌ಲೈನ್ ಮಾರಾಟ ವೇದಿಕೆಯನ್ನು ಗ್ರಾಹಕರಿಗೆ ಕಲ್ಪಿಸುತ್ತಿದೆ. ಗ್ರಾಹಕರು 'ಕ್ಲಿಕ್ ಟು ಬೈ' ವೆಬ್​ಸೈಟ್​ಗೆ ಭೇಟಿ ನೀಡಿ ಹ್ಯುಂಡೈ ಕಾರುಗಳನ್ನು ಬುಕ್ಕಿಂಗ್ ಮಾಡಬಹುದು ಎಂದು ತಿಳಿಸಿದೆ.

Online car booking
ಆನ್​ಲೈನ್ ಕಾರು ಖರೀದಿ

By

Published : Jan 17, 2020, 11:02 PM IST

ನವದೆಹಲಿ: ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಅಸ್ತಿತ್ವದಲ್ಲಿರುವ ಚಿಲ್ಲರೆ ಮಾರಾಟ ಜಾಲಕ್ಕೆ ಹೆಚ್ಚುವರಿಯಾಗಿ ಆನ್‌ಲೈನ್ ಮಾರಾಟ ವೇದಿಕೆಯನ್ನು ಆರಂಭಿಸಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯು ತನ್ನ 'ಕ್ಲಿಕ್ ಟು ಬೈ' ಸರಳ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನು ಹೊಂದಿರುವ ಮೊದಲ ಆನ್‌ಲೈನ್ ಮಾರಾಟ ವೇದಿಕೆಯಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಡಿದೆ.

ಹೊಸ ಹ್ಯುಂಡೈ ಕಾರುಗಳ ಖರೀದಿಗೆ ನವಪೀಳಿಗೆಯ ಡಿಜಿಟಲ್ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಭಾರತದ ಮೊದಲ ಆನ್‌ಲೈನ್ ಮಾರಾಟ ವೇದಿಕೆಯನ್ನು ಕಂಪನಿ ಒದಗಿಸುತ್ತಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಎಂಡಿ ಮತ್ತು ಸಿಇಒ ಎಸ್.ಎಸ್. ಕಿಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ದಶಕದಿಂದ ಚಿಲ್ಲರೆ ಮಾರಾಟವು ಗಮನಾರ್ಹ ಬದಲಾವಣೆಯನ್ನು ಯುವ ಸಮುದಾಯದಲ್ಲಿ ಕಂಡುಬಂದಿದೆ. ಆನ್​ಲೈನ್​ ಮೂಲಕ ತಕ್ಷಣ ಪ್ರಕ್ರಿಯೆಗೆ ಮುಂದಾಗಿತ್ತಿದ್ದಾರೆ. ಹ್ಯುಂಡೈ ಪ್ರಸ್ತುತ ದೆಹಲಿ-ಎನ್​ಸಿಆರ್​ನ ಕೆಲ ಆಯ್ದ ವಿತರಕರ ಮೂಲಕ ಆನ್​ಲೈನ್​ ಮಾರಾಟಕ್ಕೆ ತೆರೆದುಕೊಳ್ಳುತ್ತಿದೆ. ಕಂಪನಿಯ ಎಲ್ಲ ಶ್ರೇಣಿಯ ಕಾರುಗಳನ್ನು 'ಕ್ಲಿಕ್​ ಟು ಬೈ' ವೆಬ್​ಸೈಟ್​ಗೆ ಭೇಟಿ ನೀಡಿ ಖರೀದಿಸಬಹುದು ಎಂದು ತಿಳಿಸಿದೆ.

ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರಸ್ತುತ 560 ಮಿಲಿಯನ್​ ಇಂಟರ್​ನೆಟ್​ ಬಳಕೆದಾರರು ಇದ್ದಾರೆ. 2020ರಲ್ಲಿ ಶೇ 70ಕ್ಕೂ ಅಧಿಕ ಇಂಟರ್​ನೆಟ್​ ಬಳಕೆದಾರರು ಆನ್​ಲೈನ್​ ಮೂಲಕ ವಸ್ತು ಮತ್ತು ಸೇವೆಗಳನ್ನು ಪಡೆಯಲಿದ್ದಾರೆ ಎಂದು ಹೇಳಿದೆ.

ABOUT THE AUTHOR

...view details