ಕರ್ನಾಟಕ

karnataka

ETV Bharat / business

'ಮೇಡ್ ಇನ್ ಇಂಡಿಯಾ' ಎಫೆಕ್ಟ್​: ಜಗತ್ತಿಗೆ 2 ಲಕ್ಷ ಎಸ್‌ಯುವಿ ಕಾರು ರಫ್ತು ಮಾಡಿದ ಹ್ಯುಂಡೈ - ಹ್ಯುಂಡೈ ಕಾರು ರಫ್ತು

ಕ್ರೆಟಾ 2,00,000 ರಫ್ತು ಮೈಲಿಗಲ್ಲು ಅನ್ನು ಹ್ಯುಂಡೈ ತನ್ನ ಅನಿರ್ದಿಷ್ಟ ಅವಧಿಯಲ್ಲಿ ಸಾಧಿಸಿದೆ. 'ಮೇಕ್ ಇನ್ ಇಂಡಿಯಾ, ಮೇಡ್ ಫಾರ್ ದಿ ವರ್ಲ್ಡ್'ಗೆ ಕಂಪನಿ ಬದ್ಧವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾದ ಎಂಡಿ/ ಸಿಇಒ ಎಸ್.ಎಸ್. ಕಿಮ್ ಹೇಳಿದರು.

Hyundai
ಹ್ಯುಂಡೈ

By

Published : Oct 15, 2020, 9:38 PM IST

ನವದೆಹಲಿ: ಕೇಂದ್ರದ 'ಮೇಕ್ ಇನ್ ಇಂಡಿಯಾ' ಅಭಿಯಾನದ ಹೆಚ್ಚಿಸುತ್ತಿರುವ ಆಟೋಮೊಬೈಲ್ ದೈತ್ಯ ಹ್ಯುಂಡೈ ಮೋಟರ್ ಇಂಡಿಯಾ (ಎಚ್‌ಎಂಐಎಲ್), ಎರಡು ಲಕ್ಷ ಯೂನಿಟ್ 'ಮೇಡ್-ಇನ್-ಇಂಡಿಯಾ' ಕಾಂಪ್ಯಾಕ್ಟ್ ಎಸ್‌ಯುವಿ ಕ್ರೆಟಾ ಕಾರುಗಳನ್ನು ರಫ್ತು ಮಾಡಿದೆ ಎಂದು ಹೇಳಿದೆ.

ಕ್ರೆಟಾ 2,00,000 ರಫ್ತು ಮೈಲಿಗಲ್ಲು ಅನ್ನು ಹ್ಯುಂಡೈ ತನ್ನ ಅನಿರ್ದಿಷ್ಟ ಅವಧಿಯಲ್ಲಿ ಸಾಧಿಸಿದೆ. 'ಮೇಕ್ ಇನ್ ಇಂಡಿಯಾ, ಮೇಡ್ ಫಾರ್ ದಿ ವರ್ಲ್ಡ್'ಗೆ ಕಂಪನಿ ಬದ್ಧವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾದ ಎಂಡಿ/ ಸಿಇಒ ಎಸ್.ಎಸ್. ಕಿಮ್ ಹೇಳಿದರು.

ತಮಿಳುನಾಡಿನ ಹ್ಯುಂಡೈನ ಅತ್ಯಾಧುನಿಕ ಘಟಕವು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತದೆ. ನಮ್ಮ ಗ್ರಾಹಕರಿಗೆ ಸಂತೋಷದ ಜೀವನ ನಡೆಸಲು ಗುಣಮಟ್ಟದ ಸಮಯ ಒದಗಿಸುತ್ತಿದೆ ಎಂದರು.

ಕಾಂಪ್ಯಾಕ್ಟ್ ಎಸ್‌ಯುವಿ 2015ರಲ್ಲಿ ಬಿಡುಗಡೆ ಆಗಿತ್ತು. ಸಿವೈ 2019ರಲ್ಲಿ ಹ್ಯುಂಡೈ ಮೋಟರ್ ಇಂಡಿಯಾ ದೇಶದ ನಿರ್ದಿಷ್ಟ ಆದ್ಯತೆ ಮತ್ತು ಬೇಡಿಕೆಗೆ ಅನುಗುಣವಾಗಿ 792 ಕಸ್ಟಮೈಸ್ ರೂಪಾಂತರಗಳೊಂದಿಗೆ 1,81,200 ಯುನಿಟ್‌ಗಳನ್ನು ರಫ್ತು ಮಾಡಿದೆ.

ಭಾರತದ ಪ್ರಯಾಣಿಕರ ಕಾರು ರಫ್ತು ವಹಿವಾಟಿನಲ್ಲಿ ಸಿವೈ -2019ರ ಅವಧಿಯಲ್ಲಿ ಕಂಪನಿಯು ಶೇ 26ರಷ್ಟು ರಫ್ತು ಪಾಲು ಹೊಂದಿತ್ತು. ಹ್ಯುಂಡೈ 2020ರಲ್ಲಿ ಮೂರು ದಶಲಕ್ಷ ವಾಹನ ರಫ್ತು ಮೈಲಿಗಲ್ಲು ಮೀರಿದ್ದು, 88 ದೇಶಗಳಿಗೆ ಕಾರುಗಳನ್ನು ರಫ್ತು ಮಾಡಿದೆ.

ಪ್ರಸ್ತುತ ಕಂಪನಿಯು 10 ಮಾದರಿಗಳನ್ನು ರಫ್ತು ಮಾಡುತ್ತಿದೆ. ಅಟೋಸ್ (ಸ್ಯಾಂಟ್ರೊ), ಗ್ರ್ಯಾಂಡ್ ಐ 10, ಕ್ಸೆಂಟ್, ಗ್ರ್ಯಾಂಡ್ ಐ 10 (ನಿಯೋಸ್) ಮತ್ತು ಗ್ರ್ಯಾಂಡ್ ಐ 10 (ಔರಾ), ಎಲೈಟ್ ಐ 20, ಐ 20 ಆಕ್ಟಿವ್, ಆಕ್ಸೆಂಟ್ (ವೆರ್ನಾ) ವೆನ್ಯೂ ಮತ್ತು ನ್ಯೂ ಕ್ರೆಟಾ ಸೇರಿವೆ.

ABOUT THE AUTHOR

...view details