ನವದೆಹಲಿ :ಹ್ಯುಂಡೈ ಮೋಟರ್ ಇಂಡಿಯಾ ತನ್ನ 7 ಆಸನಗಳ ಪ್ರೀಮಿಯಂ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಅಲ್ಕಾಜರ್ ವಿನ್ಯಾಸಗಳನ್ನು ಅನಾವರಣಗೊಳಿಸಿದೆ.
ಜಾಗತಿಕ ಸೆನ್ಸೆಬಲ್ ವಿನ್ಯಾಸದ ಆಧಾರದ ಮೇಲೆ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹ್ಯುಂಡೈ ಪ್ರಕಟಣೆಯಲ್ಲಿ ಹೇಳಿದೆ. ತಾಂತ್ರಿಕ ಎಂಜಿನಿಯರಿಂಗ್, ಸ್ಟೈಲಿಂಗ್ ಮತ್ತು ತಂತ್ರಜ್ಞಾನದ ಹಲವು ಪ್ರಮುಖ ವಿನ್ಯಾಸ ಅಂಶಗಳನ್ನು ಆಧುನಿಕವಾಗಿ ಕಾಣುವಂತೆ ಅಳವಡಿಸಿಕೊಳ್ಳಲಾಗಿದೆ.