ಕರ್ನಾಟಕ

karnataka

ETV Bharat / business

ಕ್ವಾರಂಟೈನ್​ಗೆ 1,000 ಕೊಠಡಿ ನೀಡಿದ ಹೋಟೆಲ್​, ರೆಸ್ಟೋರೆಂಟ್​ಗಳು ​ ​ - ಕೋವಿಡ್

ಪೂರ್ವ ಮತ್ತು ಈಶಾನ್ಯ ಭಾಗದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಉನ್ನತ ಸಂಸ್ಥೆಯಾದ ಎಚ್​ಆರ್​ಎಇಐ, ಪಶ್ಚಿಮ ಬಂಗಾಳ ಸರ್ಕಾರಕ್ಕೆ 645 ಹೋಟೆಲ್ ಕೊಠಡಿಗಳನ್ನು ಕೊಲ್ಕತ್ತಾ ಮತ್ತು ಇತರ ಜಿಲ್ಲೆಗಳಲ್ಲಿ ಒದಗಿಸಲು ನಿರ್ಧರಿಸಿದೆ. ಸಿಲಿಗುರಿ, ಈಶಾನ್ಯ ಮತ್ತು ಉತ್ತರ ಬಂಗಾಳದ ಹಬ್ ಸೆಂಟರ್ ಅನ್ನು ಈ ಹೋಟೆಲ್​​ಗಳು ಒಳಗೊಂಡಿವೆ.

quarantine
ಕ್ವಾರಂಟೈನ್​

By

Published : Apr 2, 2020, 8:18 PM IST

ಹೈದರಾಬಾದ್​: ಕೋವಿಡ್​ 19 ಸೋಂಕಿತರ ಕ್ವಾರಂಟೈನ್​ಗೆ ಅಗತ್ಯವಾದಷ್ಟು ಕೊಠಡಿಗಳನ್ನ ನೀಡಲು ಈಶಾನ್ಯ ಭಾರತದ ಹೋಟೆಲ್ ಮತ್ತು ರೆಸ್ಟೋರೆಂಟ್​ ಅಸೋಸಿಯೇಷನ್​ (ಎಚ್​ಆರ್​ಇಎಐ) ಒಪ್ಪಿಕೊಂಡಿದೆ.

ಈ ಸೇವೆಯು ಪಶ್ಚಿಮ ಬಂಗಾಳದಿಂದ ಆರಂಭವಾಗಿದ್ದು, ಶೀಘ್ರದಲ್ಲೇ ಇದು ಇಡೀ ಪೂರ್ವ ಮತ್ತು ಈಶಾನ್ಯ ಭಾರತಕ್ಕೆ ಅನ್ವಯವಾಗಲಿದೆ.

ಪೂರ್ವ ಮತ್ತು ಈಶಾನ್ಯ ಭಾಗದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಉನ್ನತ ಸಂಸ್ಥೆಯಾದ ಎಚ್​ಆರ್​ಎಇಐ, ಪಶ್ಚಿಮ ಬಂಗಾಳ ಸರ್ಕಾರಕ್ಕೆ 645 ಹೋಟೆಲ್ ಕೊಠಡಿಗಳನ್ನು ಕೊಲ್ಕತ್ತಾ ಮತ್ತು ಇತರ ಜಿಲ್ಲೆಗಳಲ್ಲಿ ಒದಗಿಸಲು ನಿರ್ಧರಿಸಿದೆ. ಸಿಲಿಗುರಿ, ಈಶಾನ್ಯ ಮತ್ತು ಉತ್ತರ ಬಂಗಾಳದ ಹಬ್ ಸೆಂಟರ್ ಗಳನ್ನ ಇದು ಒಳಗೊಂಡಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ.

ಕೋವಿಡ್​-19 ಏಕಾಏಕಿಯಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇತರ ರಾಜ್ಯಗಳು ಮತ್ತು ದೇಶಗಳಿಂದ ಹಿಂದಿರುಗಿದ ಹೆಚ್ಚಿನ ಸಂಖ್ಯೆಯ ಜನರಿಗೆ ಕೊಠಡಿಗಳ ಹಂಚಿಕೆ ಮತ್ತು ವಸತಿಗೆ ಅನುಕೂಲ ಮಾಡಿಕೊಂಡುವಂತೆ ಹೋಟೆಲ್ ಮಾಲೀಕ ಸದಸ್ಯರನ್ನು ಒತ್ತಾಯಿಸಿದ್ದಾರೆ. ಸೋಂಕಿತರೇ ಸ್ವಯಂ ಪ್ರೇರಿತರಾಗಿ ಕೊಠಡಿಗಳಿಗೆ ಹೋಗಬೇಕು ಎಂಬುದನ್ನು ಖಚಿತಪಡಿಸಿದ್ದೇವೆ. ಈ ಬಗ್ಗೆ ರಾಜ್ಯ ಪ್ರವಾಸೋದ್ಯಮ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಚರ್ಚಿಸಿದ್ದೇವೆ. ಅವರು ನಮ್ಮ ಪ್ರಸ್ತಾಪಗಳನ್ನು ಒಪ್ಪಿಕೊಂಡಿದ್ದಾದೆ ಎಂದು ಸಂಘದ ಗೌರವ ಕಾರ್ಯದರ್ಶಿ ಸುರೇಶ್ ಪೋದ್ದಾರ್ ಅವರು ಟಿವಿ ಭಾರತ್‌ಗೆ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಮುಂದಿನ ದಿನಗಳಲ್ಲಿ ಈಗಿನ ಹಂಚಿಕೆಯ ಕೊಠಡಿಗಳನ್ನು 1,000ಕ್ಕೆ ಹೆಚ್ಚಿಸಲು ಎಚ್‌ಆರ್‌ಇಐ ಯೋಜಿಸಿದೆ. ಶೀಘ್ರದಲ್ಲೇ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ಹೋಟೆಲ್ ಮಾಲೀಕರನ್ನು ಈ ಪ್ರಕ್ರಿಯೆಯಲ್ಲಿ ಸೇರಿಸಲಾಗುವುದು ಎಂದು ಪೋದ್ದಾರ್ ಹೇಳಿದರು.

ಸಾಲ್ಟಲೇಕ್, ರಾಜರಹತ್, ನ್ಯೂಟೌನ್ ಮತ್ತು ಮಹಾನಗರದ ಇತರ ಭಾಗಗಳಲ್ಲಿನ ವಿವಿಧ ಹೋಟೆಲ್‌ಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಕೊಠಡಿಗಳು ಈಗ ಲಭ್ಯವಿದೆ. ಕೋಲ್ಕತ್ತಾದ ಮಿತಿಗಳನ್ನು ಮೀರಿ ಸಿಲಿಗುರಿಗೆ ಒತ್ತು ನೀಡಿದೆ. ಅಲ್ಲಿ ಇನ್ನೂ 25 ಕೊಠಡಿಗಳನ್ನು ಕ್ಯಾರೆಂಟೈನ್ ಉದ್ದೇಶವಾಗಿ ಬಳಸಲು ಮೀಸಲಿಡಲಾಗಿದೆ. ವೈದ್ಯರು ಮತ್ತು ದಾದಿಯರಂತಹ ವಸತಿ ವೈದ್ಯಕೀಯ ಸಿಬ್ಬಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾದವರು ಅವರ ಮನೆಗಳು ಮತ್ತು ಕುಟುಂಬಗಳಿಂದ ಪ್ರತ್ಯೇಕವಾಗಿ ಉಳಿಯಬೇಕು ಎಂದಿದ್ದಾರೆ.

ABOUT THE AUTHOR

...view details