ಕರ್ನಾಟಕ

karnataka

ETV Bharat / business

ವರ್ಷಕ್ಕೆ 1 ಲಕ್ಷ ಕಾರು ತಯಾರಿಸುವ ಪ್ಯಾಕ್ಟರಿ ಮುಚ್ಚಿದ ಹೋಂಡಾ: ಬಹುಬೇಡಿಕೆಯ ಈ ಎರಡೂ ಕಾರು ಕಣ್ಮರೆ! - ಸಿಆರ್​ ವಿ ಕಾರು ಉತ್ಪನ್ನ ಬಂದ್

ಉತ್ಪಾದನೆ ಮತ್ತು ಪೂರೈಕೆ ಸರಪಳಿ ದಕ್ಷತೆ ಹೆಚ್ಚಿಸುವ ಮೂಲಕ ಕಾರ್ಯಾಚರಣೆಗಳ ಸುಸ್ಥಿರತೆ ಕಾಪಾಡಿಕೊಳ್ಳಲು, ದೇಶೀಯ ಮಾರಾಟ ಮತ್ತು ರಫ್ತುಗಳಿಗೆ ತಕ್ಷಣದ ಪರಿಣಾಮ ಬೀರುವಂತೆ ರಾಜಸ್ಥಾನದ ತಪುಕರ ಸ್ಥಾವರದಲ್ಲಿ ವಾಹನಗಳು ಮತ್ತು ಘಟಕಗಳ ಉತ್ಪಾದನಾ ಕಾರ್ಯಾಚರಣೆ ಕ್ರೋಢೀಕರಿಸಲು ಕಂಪನಿ ನಿರ್ಧರಿಸಿದೆ ಎಂದು ಎಚ್‌ಸಿಐಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

Honda
ಹೋಂಡಾ

By

Published : Dec 23, 2020, 6:12 PM IST

ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇರುವ ತನ್ನ ಉತ್ಪಾದನಾ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಔಪಚಾರಿಕವಾಗಿ ಪ್ರಕಟಿಸಿದೆ.

1997ರಲ್ಲಿ ಶುರುವಾದ ಉತ್ಪಾದನೆ ಘಟಕದ ವ್ಯಾಪಾರ ದಕ್ಷತೆ ಹೆಚ್ಚಿಸಲು ಹಾಗೂ ಉತ್ಪಾದನಾ ಕಾರ್ಯಾಚರಣೆ ಮರು ಜೋಡಣೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಾಹನ ತಯಾರಕರು ತಿಳಿಸಿದ್ದಾರೆ.

ಗ್ರೇಟರ್ ನೋಯ್ಡಾ ಘಟಕ ಮುಚ್ಚುವುದರೊಂದಿಗೆ ಸಿಆರ್-ವಿ ಮತ್ತು ಸಿವಿಕ್ ಮಾದರಿ ಕಾರುಗಳ ತಯಾರಿಕೆ ಕೊನೆಗೊಳ್ಳಲಿದೆ. ಈ ಎರಡೂ ಮಾದರಿ ಕಾರುಗಳನ್ನು ಇದೇ ಸ್ಥಾವರದಲ್ಲಿ ತಯಾರಿಸಲಾಗುತ್ತಿತ್ತು.

ಉತ್ಪಾದನೆ ಮತ್ತು ಪೂರೈಕೆ ಸರಪಳಿ ದಕ್ಷತೆ ಹೆಚ್ಚಿಸುವ ಮೂಲಕ ಕಾರ್ಯಾಚರಣೆಗಳ ಸುಸ್ಥಿರತೆ ಕಾಪಾಡಿಕೊಳ್ಳಲು, ದೇಶೀಯ ಮಾರಾಟ ಮತ್ತು ರಫ್ತುಗಳಿಗೆ ತಕ್ಷಣದ ಪರಿಣಾಮ ಬೀರುವಂತೆ ರಾಜಸ್ಥಾನದ ತಪುಕರ ಸ್ಥಾವರದಲ್ಲಿ ವಾಹನಗಳು ಮತ್ತು ಘಟಕಗಳ ಉತ್ಪಾದನಾ ಕಾರ್ಯಾಚರಣೆಯನ್ನು ಕ್ರೋಢೀಕರಿಸಲು ಕಂಪನಿ ನಿರ್ಧರಿಸಿದೆ ಎಂದು ಎಚ್‌ಸಿಐಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಬ್ಯಾಂಕ್​ಗಳ ಮುಖ್ಯಸ್ಥರ ಜತೆ RBI ಗವರ್ನರ್ ಸಭೆ: 'ಎಚ್ಚರಿಕೆಯಿಂದ ಇರುವಂತೆ' ಕಿವಿಮಾತು

ಕಳೆದ ಮೂರು ತಿಂಗಳಲ್ಲಿ ಮಾರಾಟದ ಏರಿಕೆಯ ಹೊರತಾಗಿಯೂ ಈಗಿನ ಮಾರುಕಟ್ಟೆ ಪರಿಸ್ಥಿತಿಗಳು ಉದ್ಯಮಕ್ಕೆ ಅನಿರೀಕ್ಷಿತವಾಗಿವೆ. ಕೋವಿಡ್​-19 ಪರಿಣಾಮವು ನಮ್ಮ ಕಾರ್ಯಾಚರಣೆಯನ್ನು ಬಲಪಡಿಸಲು ಬಲವಂತವಾಗಿ ನೂಕುತ್ತಿದೆ. ಅದನ್ನು ಸಾಧಿಸಲು ಎಚ್‌ಸಿಐಎಲ್ ತನ್ನ ಸಂಯೋಜನೆ ನಿರ್ಧರಿಸಿದೆ. ತಪುಕರ ಸ್ಥಾವರವನ್ನು ಏಕೀಕೃತ ಉತ್ಪಾದನಾ ನೆಲೆಯನ್ನಾಗಿ ಮಾಡುವ ಮೂಲಕ ಉತ್ಪಾದನಾ ಕಾರ್ಯಾಚರಣೆಗಳಿಗೆ ಇಳಿಯಲಿದೆ ಎಂದು ಎಚ್‌ಸಿಐಎಲ್ ಅಧ್ಯಕ್ಷ ಮತ್ತು ಸಿಇಒ ಗಕು ನಕಾನಿಶಿ ಹೇಳಿದರು.

ಹೋಂಡಾದ ಜಾಗತಿಕ ಕಾರ್ಯತಂತ್ರದಲ್ಲಿ ಭಾರತವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಭವಿಷ್ಯದಲ್ಲಿ ವಿದ್ಯುದ್ದೀಕೃತ ವಾಹನಗಳು ಸೇರಿದಂತೆ ತನ್ನ ಇತ್ತೀಚಿನ ಮತ್ತು ಸುಧಾರಿತ ತಂತ್ರಜ್ಞಾನ ಮಾದರಿಗಳನ್ನು ತರಲು ಎಚ್‌ಸಿಐಎಲ್ ಬದ್ಧವಾಗಿದೆ ಎಂದರು.

ಗ್ರೇಟರ್ ನೋಯ್ಡಾ ಸ್ಥಾವರವು ವರ್ಷಕ್ಕೆ ಒಂದು ಲಕ್ಷ ಯೂನಿಟ್​ಗಳ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು. ಸುಮಾರು 5,500 ಜನರು ಕೆಲಸ ಮಾಡುವ ತಪುಕರ ಘಟಕವು ವರ್ಷಕ್ಕೆ 1.8 ಲಕ್ಷ ಯೂನಿಟ್​ಗಳನ್ನು ಹೊರ ತರುತ್ತದೆ.

ABOUT THE AUTHOR

...view details