ನವದೆಹಲಿ :ದ್ವಿಚಕ್ರ ವಾಹನ ದೈತ್ಯ ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಹೆಚ್‌ಎಂಎಸ್‌ಐ) ಕಂಪನಿಯು ಮಾರುಕಟ್ಟೆಯ ಸವಾಲಿನ ಪರಿಸ್ಥಿತಿಗಳ ನಡುವೆ ಖಾಯಂ ನೌಕರರಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್‌ಎಸ್) ಆರಂಭಿಸಿದೆ.
ಈ ವಿಆರ್‌ಎಸ್ ಜನವರಿ 5ರಿಂದ 23ರವರೆಗೆ ನಡೆಯಲಿದೆ. ನಿರ್ದೇಶಕ ಮಟ್ಟದ ಅಧಿಕಾರಿಗಳನ್ನು ಹೊರತುಪಡಿಸಿ ಖಾಯಂ ನೌಕರರಿಗೆ ಅನ್ವಯವಾಗುತ್ತದೆ ಎಂದು ಕಂಪನಿಯ ಆಡಳಿತ ಮಂಡಳಿ ನೌಕರರಿಗೆ ಕಳುಹಿಸಿದ ಸಂವಹನದಲ್ಲಿ ತಿಳಿಸಲಾಗಿದೆ.
2021ರ ಜನವರಿ 31ರಂತೆ ಕಂಪನಿಯೊಂದಿಗೆ 10 ವರ್ಷ ಪೂರೈಸಿದ ಅಥವಾ 40ವರ್ಷಕ್ಕಿಂತ ಮೇಲ್ಪಟ್ಟ ಖಾಯಂ ಉದ್ಯೋಗಿಗಳು ವಿಆರ್‌ಎಸ್ ಆಯ್ಕೆ ಮಾಡಬಹುದು. ನಿರ್ದೇಶಕರ ಶ್ರೇಣಿಯ ಅಧಿಕಾರಿಗಳು ಸಂವಹನದ ಪ್ರಕಾರ ಯೋಜನೆಯ ಭಾಗವಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಹಣದ ಅಭಾವ ನೀಗಿಸಲು ಸರ್ಕಾರ ಆರ್‌ಬಿಐನಿಂದ ಸಾಲ ಪಡೆಯಲಿ: ವಿತ್ತ ತಜ್ಞ ಡಾ.ಸಿಂಗ್
ಈ ಯೋಜನೆಯಡಿ ಹಿರಿಯ ವ್ಯವಸ್ಥಾಪಕ ಉಪಾಧ್ಯಕ್ಷರು ಮತ್ತು ಖಾಯಂ ಕೆಲಸಗಾರರು ಗರಿಷ್ಠ 72 ಲಕ್ಷ ರೂ., ವ್ಯವಸ್ಥಾಪಕರು 67 ಲಕ್ಷ ರೂ., ಉಪ ವ್ಯವಸ್ಥಾಪಕರು (48 ಲಕ್ಷ ರೂ.), ಸಹಾಯಕ ವ್ಯವಸ್ಥಾಪಕರು (36 ಲಕ್ಷ ರೂ.), ಹಿರಿಯ ಕಾರ್ಯನಿರ್ವಾಹಕ (31 ರೂ. ಲಕ್ಷ), ಕಾರ್ಯನಿರ್ವಾಹಕ (27 ಲಕ್ಷ ರೂ.) ಮತ್ತು ಸಹಾಯಕ ಕಾರ್ಯನಿರ್ವಾಹಕ (15 ಲಕ್ಷ ರೂ.) ಹಣ ಪಡೆಯಲಿದ್ದಾರೆ.
ಯೋಜನೆ ಆರಿಸಿಕೊಳ್ಳುವ ಮೊದಲ 400 ಉದ್ಯೋಗಿಗಳಿಗೆ ಕಂಪನಿಯು 5 ಲಕ್ಷ ರೂ. ನೀಡಲಿದೆ. ಉದ್ಯೋಗಿಗಳಿಗೆ ಕಳುಹಿಸಿದ ಸಂವಹನದ ಪ್ರಕಾರ, ಕೋವಿಡ್-19 ಮತ್ತು ಆರ್ಥಿಕತೆಯ ಕುಸಿತದಿಂದಾಗಿ ಮಾರಾಟವು ಕುಸಿದಿದ್ದು, ಭಾರತೀಯ ವಾಹನ ಉದ್ಯಮವು ಸವಾಲಿನ ಸಮಯ ಎದುರಿಸುತ್ತಿದೆ. ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ನಿರ್ವಹಣೆ ಕಾರ್ಯಾಚರಣೆ ಮತ್ತು ಉತ್ಪಾದನಾ ಚಟುವಟಿಕೆಗಳನ್ನು ಸುಗಮಗೊಳಿಸಲು ಇಂತಹ ನಿರ್ಧಾರಕ್ಕೆ ಬರಲಾಗಿದೆ.