ನವದೆಹಲಿ:ಭಾರತ್ ಸ್ಟೇಜ್ 6 ವಾಹನ ನೋಂದಣಿಯ ಗಡುವನ್ನು ಮೂರು ತಿಂಗಳು ಮುಂದೂಡುವಂತೆ ಕೋರಿ ದ್ವಿಚಕ್ರ ವಾಹನ ಕಂಪನಿ ಹೀರೋ ಮೋಟೊಕಾರ್ಪ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ದೇಶದಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಏಪ್ರಿಲ್ 1ರಿಂದ ಬಿಎಸ್ - 6 ಜಾರಿಗೆ ಬರುತ್ತಿದೆ. ಕೊರೊನಾ ವೈರಸ್ನಿಂದ ದೇಶದಲ್ಲಿ ಉದ್ಭವಿಸಿರುವ ಬೆಳವಣಿಗೆಯ ಹಿನ್ನೆಡೆಯನ್ನು ಗಮನದಲ್ಲಿ ಇರಿಸಿಕೊಂಡು, ಈಗಿನ ಮಾರ್ಚ್ 31ರ ಅಂತಿಮ ದಿನಾಂಕವನ್ನು ಮುಂದೂಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಕೋವಿಡ್ -19ರ ಕಾರಣದಿಂದಾಗಿ ಚಾಲ್ತಿಯಲ್ಲಿರುವ ಮಾರುಕಟ್ಟೆಯು ಗರಿಷ್ಠ ಪ್ರಮಾಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳ ಎದುರಿಸುತ್ತಿದೆ. ನಮ್ಮ ಉದ್ಯಮದ ಎಲ್ಲ ಅಂಶಗಳಿಗೆ ಇದು ಅಡ್ಡಿಯಾಗಿರುವುದರಿಂದ ನಾವು ಮೂರು ತಿಂಗಳ ಅವಧಿಗೆ ವಿಸ್ತರಣೆಗಾಗಿ ಪ್ರಾರ್ಥಿಸಿದ್ದೇವೆ ಕಂಪನಿಯು ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
"ಕೋವಿಡ್-19 ಅನ್ನು ನೈಸರ್ಗಿಕ ವಿಪತ್ತಿನ ಪ್ರಕರಣವೆಂದು ಪರಿಗಣಿಸಬೇಕು. ಬಲವಂತವಾಗಿ ಅಗಾದ ಪ್ರಮಾಣ ಮೀರಿದೆ ಎಂದು ಹಣಕಾಸು ಸಚಿವಾಲಯ ಘೋಷಿಸಿದೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
ಏನಿದು ಭರತ್ ಸ್ಟೇಜ್ 6? ವಾಹನಗಳು ಹೊರ ಉಗುಳುವ ಹೊಗೆಯಲ್ಲಿರುವ ಮಾಲಿನ್ಯಕಾರಕಗಳ ಪ್ರಮಾಣಕ್ಕೆ ಮಿತಿ ವಿಧಿಸುವ ಪರಿಮಾಣವೇ ಭಾರತ್ ಸ್ಟೇಜ್ 6 (ಬಿಎಸ್-6). ಭಾರತ್ ಸ್ಟೇಜ್ ದೇಶದಲ್ಲಿ 2000ರಲ್ಲಿ (ಬಿಎಸ್–1) ಜಾರಿಗೆ ಬಂದಿತು. ಹಂತ- ಹಂತವಾಗಿ ಬಿಎಸ್–2, ಬಿಎಸ್–3 ಮತ್ತು ಬಿಎಸ್ – 4 ಜಾರಿಗೆ ಬಂದವು. ಈಗ ಬಿಎಸ್ – 4 ಜಾರಿಯಲ್ಲಿದೆ. ವಾಹನಗಳಿಂದಾಗುವ ವಾಯು ಮಾಲಿನ್ಯದ ಪ್ರಮಾಣವನ್ನು ಶೀಘ್ರವಾಗಿ ಇಳಿಕೆ ಮಾಡಬೇಕು ಎಂಬ ಉದ್ದೇಶದಿಂದ ಬಿಎಸ್ –5 ಜಾರಿ ಕೈಬಿಟ್ಟು, ನೇರವಾಗಿ ಬಿಎಸ್ – 6 ಅನುಷ್ಠಾನಕ್ಕೆ ತರಲಾಗುತ್ತಿದೆ.