ನವದೆಹಲಿ:ಹೀರೊ ಮೊಟೊಕಾರ್ಪ್ ಜುಲೈ ತಿಂಗಳಲ್ಲಿ 5.14 ಲಕ್ಷ ಯುನಿಟ್ ಮೋಟರ್ ಸೈಕಲ್ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.
ಈ ಹಿಂದಿನ ತಿಂಗಳಿಗಿಂತ ಶೇ 14ರಷ್ಟು ಬೆಳವಣಿಗೆ ವೃದ್ಧಿಸಿದ್ದು, ಸಗಟು ರವಾನೆಯು ಕಳೆದ ವರ್ಷದ ಇದೇ ತಿಂಗಳಿಗಿಂತ 95 ಪ್ರತಿಶತಕ್ಕಿಂತ ಅಧಿಕವಾಗಿದೆ ಎಂದು ಹೇಳಿದೆ.

ದೇಶಿಯ ಮಾರಾಟವು 2019ರ ಜುಲೈನಲ್ಲಿ 5.11 ಲಕ್ಷಕ್ಕೆ ಹೋಲಿಸಿದರೆ 5.07 ಲಕ್ಷ ಯೂನಿಟ್ಗಳಷ್ಟಾಗಿದೆ. 2020ರ ಜುಲೈನಲ್ಲಿ ರಫ್ತು 7,563 ಆಗಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ಇದು 24,436 ರಷ್ಟಿತ್ತು.
ಕಳೆದ ತಿಂಗಳು ಮೋಟರ್ ಸೈಕಲ್ ಮಾರಾಟವು 4.78 ಲಕ್ಷ ಮತ್ತು ಸ್ಕೂಟರ್ ಮಾರಾಟವು 35,843 ಯೂನಿಟ್ಗಳಷ್ಟಿದೆ. ಕಳೆದ ವರ್ಷದಲ್ಲಿ ಕ್ರಮವಾಗಿ 4.9 ಲಕ್ಷ ಮತ್ತು 45,752 ಗಳಷ್ಟಿತ್ತು.
ಹೀರೋ ಮೊಟೊಕಾರ್ಪ್ ಗ್ರಾಹಕರ ಭೇಟಿ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಸುರಕ್ಷತಾ ಕ್ರಮ ಮತ್ತು ಮಾರ್ಗಸೂಚಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಾಹನಗಳ ಬೇಡಿಕೆಯು ಉದ್ಯಮಕ್ಕೆ ಆಶಾದಾಯಕವಾಗಿ ಕಾಣುತ್ತಿದೆ. ದೇಶದ ಹಲವು ಭಾಗಗಳಲ್ಲಿನ ಮೈಕ್ರೋ-ಲಾಕ್‌ಡೌನ್‌ಗಳಿಂದ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.