ನವದೆಹಲಿ:ಎಚ್‌ಡಿಎಫ್‌ಸಿ ಲಿಮಿಟೆಡ್ 2020-21ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 5,724.23 ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,196.48 ಕೋಟಿ ರೂ.ಯಾಗಿತ್ತು.
ಕಂಪನಿಯ ಒಟ್ಟು ಆದಾಯ (ಏಕೀಕೃತ ಆಧಾರ) ಮೂರನೇ ತ್ರೈಮಾಸಿಕದಲ್ಲಿ 39,267.59 ಕೋಟಿ ರೂ.ಗೆ ಏರಿಕೆಯಾಗಿದ್ದು, 2019-20ರ ಇದೇ ಅವಧಿಯಲ್ಲಿ 29,073.19 ಕೋಟಿ ರೂ.ಯಷ್ಟಿತ್ತು.
2020ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಲಾಭದ ಸಂಖ್ಯೆಯನ್ನು ಹಿಂದಿನ ವರ್ಷದ ಅನುಗುಣವಾದ ತ್ರೈಮಾಸಿಕ ಅಥವಾ ಅವಧಿಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿದೆ.
ಜಿಆರ್ಯುಎಚ್ ಫೈನಾನ್ಸ್ ಅನ್ನು ಬಂಧನ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗಿತ್ತು. 2019ರ ಅಕ್ಟೋಬರ್ 17ರಿಂದ ವಿಲೀನ ಪ್ರಕ್ರಿಯೆ ಜಾರಿಗೆ ಬಂದಿದೆ.
ಇದನ್ನೂ ಓದಿ: '7 ತಿಂಗಳಲ್ಲಿ BPCL, ಏರ್ ಇಂಡಿಯಾ ಷೇರು ಮಾರಿ, ಅಕ್ಟೋಬರ್ಗೆ LICಯ ಐಪಿಒ ಬಿಡುಗಡೆ'
2020ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವೈಯಕ್ತಿಕ ವ್ಯವಹಾರದಲ್ಲಿ ಗಮನಾರ್ಹ ಚೇತರಿಕೆ ಹಾಗೂ ಬೆಳವಣಿಗೆ ಕಂಡು ಬಂದಿದೆ. 2020ರ ಏಪ್ರಿಲ್ 1ರಿಂದ 2020ರ ಡಿಸೆಂಬರ್ 31ರವರೆಗೆ ಒಂಬತ್ತು ತಿಂಗಳ ಆಧಾರದ ಮೇಲೆ ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್‌ನ ಪರಿಣಾಮ ಬೀರಿದೆ. ಆದ್ದರಿಂದ ಪ್ರಸ್ತುತ ಮತ್ತು ಹಿಂದಿನ ವರ್ಷದ ಸಂಖ್ಯೆಯನ್ನು ನೇರವಾಗಿ ಹೋಲಿಸಲಾಗುವುದಿಲ್ಲ ಎಂದಿದೆ.