ಕರ್ನಾಟಕ

karnataka

ETV Bharat / business

ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ ಗಳಿಕೆ ಏರಿಕೆ: ಶೇ 2ರಷ್ಟು ಜಿಗಿದ HDFC ಷೇರು ಮೌಲ್ಯ

ದೇಶದ ಅತಿದೊಡ್ಡ ಖಾಸಗಿ ವಲಯದ ಸಾಲದಾತ ಡಿಸೆಂಬರ್ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭದಲ್ಲಿ ಶೇ 14.36ರಷ್ಟು ಏರಿಕೆ ಕಂಡು 8,760 ಕೋಟಿ ರೂ.ಗೆ ತಲುಪಿದೆ. ಮೂರು ತಿಂಗಳ ಅವಧಿಯಲ್ಲಿ ನಿವ್ವಳ ಲಾಭವು ಶೇ 18.09ರಷ್ಟು ಏರಿಕೆ ಕಂಡು 8,758.29 ಕೋಟಿ ರೂ.ಗೆ ತಲುಪಿದೆ. ಮೂಲ ನಿವ್ವಳ ಬಡ್ಡಿ ಆದಾಯದಲ್ಲಿ ಶೇ 15.1ರಷ್ಟು ಬೆಳವಣಿಗೆಯ ಹಿನ್ನೆಲೆಯಲ್ಲಿ 16,317 ಕೋಟಿ ರೂ.ನಷ್ಟಾಗಿದೆ.

HDFC
ಎಚ್​ಡಿಎಫ್​ಸಿ

By

Published : Jan 18, 2021, 1:24 PM IST

ನವದೆಹಲಿ:ಡಿಸೆಂಬರ್ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭದಲ್ಲಿ ಕಂಪನಿಯು ಶೇ 14.36ರಷ್ಟು ಏರಿಕೆ ಕಂಡ ನಂತರ ಎಚ್‌ಡಿಎಫ್‌ಸಿ ಬ್ಯಾಂಕಿನ ಷೇರುಗಳು ಸೋಮವಾರ ಶೇ 2ರಷ್ಟು ಏರಿಕೆ ಕಂಡಿದೆ.

ಈ ಷೇರು ಶೇ 2.49 ರಷ್ಟು ಜಿಗಿದು 52 ವಾರಗಳ ಗರಿಷ್ಠ 1,503 ರೂ.ಗೆ ತಲುಪಿದೆ. ಎನ್‌ಎಸ್‌ಇಯಲ್ಲಿ ಇದು ಶೇ 2.46ರಷ್ಟು ಏರಿಕೆಯಾಗಿ 1,502.85 ರೂ.ಗೆ ತಲುಪಿದ್ದು, ಒಂದು ವರ್ಷದ ಗರಿಷ್ಠ ಬೆಲೆಯಾಗಿದೆ.

ಇದನ್ನೂ ಓದಿ: ಸ್ಯಾಮ್​ಸಂಗ್ ಕಂಪನಿಯ ಭಾವಿ ಉಪಾಧ್ಯಕ್ಷನಿಗೆ ಎರಡೂವರೆ ವರ್ಷ ಜೈಲು: ಆತ ಮಾಡಿದ್ದೇನು?

ದೇಶದ ಅತಿದೊಡ್ಡ ಖಾಸಗಿ ವಲಯದ ಸಾಲದಾತ ಡಿಸೆಂಬರ್ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭದಲ್ಲಿ ಶೇ 14.36ರಷ್ಟು ಏರಿಕೆ ಕಂಡು 8,760 ಕೋಟಿ ರೂ.ಗೆ ತಲುಪಿದೆ. ಮೂರು ತಿಂಗಳ ಅವಧಿಯಲ್ಲಿ ನಿವ್ವಳ ಲಾಭವು ಶೇ 18.09ರಷ್ಟು ಏರಿಕೆ ಕಂಡು 8,758.29 ಕೋಟಿ ರೂ.ಗೆ ತಲುಪಿದೆ. ಮೂಲ ನಿವ್ವಳ ಬಡ್ಡಿ ಆದಾಯದಲ್ಲಿ ಶೇ 15.1ರಷ್ಟು ಬೆಳವಣಿಗೆಯ ಹಿನ್ನೆಲೆಯಲ್ಲಿ 16,317 ಕೋಟಿ ರೂ.ಗಳಷ್ಟಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಡಿಸೆಂಬರ್ ತ್ರೈಮಾಸಿಕದಲ್ಲಿ ತನ್ನ ಫಲಿತಾಂಶಗಳನ್ನು ಘೋಷಿಸಿದ ಮೊದಲ ಪ್ರಮುಖ ಸಾಲದಾತವಾಗಿದೆ.

ಒಟ್ಟು ಅನುತ್ಪಾದಕ ಆಸ್ತಿ (ಎನ್‌ಪಿಎ) ಅನುಪಾತವು ಒಟ್ಟು ಆಸ್ತಿಯ ಶೇ 0.81ರಷ್ಟು ಮತ್ತು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 1.42ರಷ್ಟು ಮತ್ತು ಸೆಪ್ಟೆಂಬರ್​ ತ್ರೈಮಾಸಿಕದ ಕೊನೆಯಲ್ಲಿ ಶೇ 1.08ರಷ್ಟಿತ್ತು ಎಂದು ಬ್ಯಾಂಕ್ ತೋರಿಸಿದೆ.

ABOUT THE AUTHOR

...view details