ಕರ್ನಾಟಕ

karnataka

ETV Bharat / business

ಗ್ರಾಹಕರ ಮನೆ ಬಾಗಲಿಗೆ ಎಟಿಎಂ : ಹೆಚ್‌ಡಿಎಫ್‌ಸಿಯಿಂದ ಮೊಬೈಲ್ ATM ಶುರು!

ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಎಟಿಎಂ ಮತ್ತು ನೈರ್ಮಲ್ಯೀಕರಣಕ್ಕಾಗಿ ಕ್ಯೂನಲ್ಲಿ ಇರುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದೆ..

HDFC Bank
HDFC Bank

By

Published : May 26, 2021, 4:21 PM IST

ಬೆಂಗಳೂರು : ನಗರದಲ್ಲಿನ ಕೋವಿಡ್​-19 ಸಂಬಂಧಿತ ನಿರ್ಬಂಧಗಳ ವೇಳೆ ಗ್ರಾಹಕರಿಗೆ ನೆರವಾಗಲು ಹೆಚ್‌ಡಿಎಫ್‌ಸಿ ಬ್ಯಾಂಕ್ ಮೊಬೈಲ್ ಸ್ವಯಂಚಾಲಿತ ಟೆಲ್ಲರ್ ಯಂತ್ರ (ಎಟಿಎಂ) ನಿಯೋಜಿಸಿದೆ.

ನಿರ್ಬಂಧಿತ ಅಥವಾ ಲಾಕ್​ಡೌನ್​ ಪ್ರದೇಶಗಳಲ್ಲಿ ಮೊಬೈಲ್ ಎಟಿಎಂಗಳು ಸಾರ್ವಜನಿಕರು ತಮ್ಮ ಪ್ರದೇಶದಿಂದ ಹಣವನ್ನು ಹಿಂತೆಗೆದುಕೊಳ್ಳುವ ಅಗತ್ಯವನ್ನು ನಿವಾರಿಸುತ್ತದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವರ್ಷ ಬ್ಯಾಂಕ್ ಮೊಬೈಲ್ ಎಟಿಎಂಗಳನ್ನು ನಿಯೋಜಿಸಿರುವ 25ನೇ ನಗರ ಬೆಂಗಳೂರು. ನಗರದ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮೊಬೈಲ್ ಎಟಿಎಂ ನಿಯೋಜನೆಗಾಗಿ ಸ್ಥಳಗಳನ್ನು ಗುರುತಿಸಲಾಗುತ್ತಿದೆ.

ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಎಟಿಎಂ ಮತ್ತು ನೈರ್ಮಲ್ಯೀಕರಣಕ್ಕಾಗಿ ಕ್ಯೂನಲ್ಲಿ ಇರುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: ಯುರೋಪ್​ನಾದ್ಯಂತ ಟಿಸಿಎಸ್​ ಕಂಪನಿ ಪಾರುಪತ್ಯ: ಮುಂಬೈನಲ್ಲಿ ಗೂಳಿ ಮೆರೆದಾಟ

ಮೊಬೈಲ್ ಎಟಿಎಂ ಬಳಸಿ ಗ್ರಾಹಕರು 15ಕ್ಕೂ ಹೆಚ್ಚು ರೀತಿಯ ವಹಿವಾಟು ನಡೆಸಬಹುದು. ಇದು ಒಂದು ನಿರ್ದಿಷ್ಟ ಅವಧಿಗೆ ಪ್ರತಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಎಟಿಎಂ ಒಂದು ದಿನದಲ್ಲಿ 3 ರಿಂದ 4 ನಿಲ್ದಾಣಗಳನ್ನು ಒಳಗೊಂಡಿರುತ್ತದೆ.

ನಮ್ಮ ಮೊಬೈಲ್ ಎಟಿಎಂ ಸೌಲಭ್ಯವು ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ನಗದು ಮತ್ತು ಇತರ ಬ್ಯಾಂಕಿಂಗ್ ಸೇವೆಗಳಿಗೆ ತಮ್ಮ ಮನೆ ಬಾಗಿಲಲ್ಲಿ ತಮ್ಮ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಶಾಖಾ ಬ್ಯಾಂಕಿಂಗ್ ಮುಖ್ಯಸ್ಥ ಮಧುಸೂಧನ್ ಹೆಗ್ಡೆ ಹೇಳಿದ್ದಾರೆ.

ABOUT THE AUTHOR

...view details