ನವದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್ನ ಸಿಇಒ/ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಯಶಸ್ವಿಯಾಗಿ ಪೂರೈಸಿದ ಆದಿತ್ಯ ಪುರಿ ಅವರ ಬಳಿಕದ ಆ ಸ್ಥಾನವನ್ನು ತುಂಬವವರ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ತಿಳಿಸಿದೆ.
ಉನ್ನತ ಹುದ್ದೆಗಳ ಸ್ಥಾನಕ್ಕೆ ಮೂವರ ಹೆಸರುಗಳನ್ನು ಅಂತಿಮಗೊಳಿಸಿಲಾಗಿದೆ. ಅಧಿಕೃತ ಘೋಷಣೆಗೆ ಆರ್‌ಬಿಐ ಅನುಮತಿಗಾಗಿ ಎದುರು ನೋಡಲಾಗುತ್ತಿದೆ. ಒಮ್ಮೆ ಆರ್ಬಿಐನಿಂದ ಅನುಮೋದನೆ ಸಿಕ್ಕ ಬಳಿಕ ಅವರ ಹೆಸರು ಅಧಿಕೃತವಾಗಿ ಬಹಿರಂಗ ಪಡಿಸಲಾಗುತ್ತದೆ ಎಂದು ಹೇಳಿದೆ.
ಆದಿತ್ಯ ಪುರಿ ಅವರು ಕಳೆದ 25 ವರ್ಷಗಳಿಂದ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ಬ್ಯಾಂಕ್, ಆಸ್ತಿಯ ಗುಣಮಟ್ಟದ ಮೇಲೆ ಕಟ್ಟುನಿಟ್ಟಿನ ಹಿಡಿತ ಸಾಧಿಸಿದ್ದರಿಂದ ಇದು ಅತಿದೊಡ್ಡ ಸಾಲದಾತನಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಮಂಡಳಿಯು ಶೋಧನಾ ಸಮಿತಿಯನ್ನು ರಚಿಸಿತ್ತು. ಉನ್ನತ ಹುದ್ದೆಗೆ ಸೂಕ್ತವಾದ ಅಭ್ಯರ್ಥಿಗಳನ್ನು ಆ ಸಮಿತಿ ಶಿಫಾರಸು ಮಾಡಿದೆ.
ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಎಂಡಿ/ ಸಿಇಒ) ಹುದ್ದೆಗೆ ಆದ್ಯತೆಯ ಕ್ರಮದಲ್ಲಿ ಮೂರು ಅಭ್ಯರ್ಥಿಗಳ ಹೆಸರನ್ನು ಬ್ಯಾಂಕ್ನ ನಿರ್ದೇಶಕರ ಮಂಡಳಿ ಇಂದು (ಶನಿವಾರ) ಅಂತಿಮಗೊಳಿಸಿದೆ ಎಂದು ಬ್ಯಾಂಕ್ ಫೈಲಿಂಗ್ನಲ್ಲಿ ತಿಳಿಸಿದೆ.
ಮಾಧ್ಯಮ ವರದಿಯೊಂದ ಪ್ರಕಾರ, ಶಶಿಧರ್ ಜಗದೀಶನ್, ಕೈಜಾದ್ ಭರೂಚಾ ಮತ್ತು ಸುನಿಲ್ ಗರ್ಗ್ ಅವರ ಹೆಸರು ಕೇಳಿಬರುತ್ತಿವೆ. ಜಗದೀಶನ್ ಮತ್ತು ಭರೂಚಾ ಬ್ಯಾಂಕ್ನ ಆಂತರಿಕ ಅಭ್ಯರ್ಥಿಗಳಾಗಿದ್ದರೆ, ಗರ್ಗ್ ಅಮೆರಿಕದ ಬ್ಯಾಂಕಿಂಗ್‌ನ ಸಿಟಿಗ್ರೂಪ್ ಜೊತೆ ಕೆಲಸ ಮಾಡುತ್ತಿದ್ದಾರೆ.
ಗರ್ಗ್ ಅವರು ಸಿಟಿ ಕಮರ್ಷಿಯಲ್ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದರೆ. ಜಗದೀಶನ್ ಎಚ್‌ಡಿಎಫ್‌ಸಿ ಬ್ಯಾಂಕ್ನಲ್ಲಿ ಹಣಕಾಸು, ಮಾನವ ಸಂಪನ್ಮೂಲ, ಕಾನೂನು ಮತ್ತು ಕಾರ್ಯದರ್ಶಿಯ ಕಾರ್ಯಗಳ ಹೆಚ್ಚುವರಿ ನಿರ್ದೇಶಕರಾಗಿದ್ದಾರೆ. ಭರೂಚಾ ಅವರು ಸಗಟು ಬ್ಯಾಂಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.