ಕರ್ನಾಟಕ

karnataka

ETV Bharat / business

HCLನಿಂದ 20 ಸಾವಿರ ಉದ್ಯೋಗಿಗಳ ನೇಮಕ: ಈಗಲೇ ಸಿದ್ಧರಾಗಿ.. - ಎಚ್​ಸಿಎಲ್​ ಟೆಕ್ನಾಲಜೀಯಲ್ಲಿ ಉದ್ಯೋಗ

ಮೂರನೇ ತ್ರೈಮಾಸಿಕದಲ್ಲಿ 6,500ಕ್ಕೂ ಹೆಚ್ಚು ಜನರನ್ನು ನೇಮಕ ಮಾಡಲಾಗಿದೆ. ದೊಡ್ಡ ಪ್ರಮಾಣದ ಬೇಡಿಕೆ ಹರಿದು ಬರುತ್ತಿರುವುದರಿಂದ ಆ ಬೇಡಿಕೆ ಪೂರೈಸಲು ನಾವು ಹೊಸಬರು ಮತ್ತು ಪ್ರತಿಭಾನ್ವಿತರನ್ನು ನೇಮಿಸಿಕೊಳ್ಳುತ್ತಲೇ ಇದ್ದೇವೆ ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷ ಮತ್ತು ಸಿಇಒ ಸಿ ವಿಜಯಕುಮಾರ್ ಹೇಳಿದರು.

HCL Tech
ಎಚ್​​ಸಿಎಲ್​

By

Published : Jan 15, 2021, 6:54 PM IST

ನವದೆಹಲಿ:ಐಟಿ ಸೇವೆಗಳ ಎಚ್‌ಸಿಎಲ್ ಟೆಕ್ನಾಲಜೀಸ್ ಮುಂದಿನ ಎರಡು ತ್ರೈಮಾಸಿಕಗಳಲ್ಲಿ ಸುಮಾರು 20,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

2020ರ ಕ್ಯಾಲೆಂಡರ್ ವರ್ಷದಲ್ಲಿ 10 ಬಿಲಿಯನ್ ಡಾಲರ್​ ಮೈಲಿಗಲ್ಲು ದಾಟಿದ ನೋಯ್ಡಾ ಮೂಲದ ಕಂಪನಿಯು 2020ರ ಡಿಸೆಂಬರ್ 31ರ ಕೊನೆಯಲ್ಲಿ 1,59,682 ಉದ್ಯೋಗಿಗಳನ್ನು ಹೊಂದಿದೆ.

ಒಟ್ಟು ನೇಮಕಾತಿ 12,422 ಜನರನ್ನು ಕಂಡರೆ, 2020ರ ಡಿಸೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಸೇರ್ಪಡೆ 6,597 ಜನರಷ್ಟಿತ್ತು. ಐಟಿ ಸೇವೆಗಳು ಶೇ 10.2ರಷ್ಟಾಗಿದೆ.

ಮೂರನೇ ತ್ರೈಮಾಸಿಕದಲ್ಲಿ 6,500ಕ್ಕೂ ಹೆಚ್ಚು ಜನರನ್ನು ನೇಮಕ ಮಾಡಲಾಗಿದೆ. ದೊಡ್ಡ ಪ್ರಮಾಣದ ಬೇಡಿಕೆ ಹರಿದು ಬರುತ್ತಿರುವುದರಿಂದ ಆ ಬೇಡಿಕೆ ಪೂರೈಸಲು ನಾವು ಹೊಸಬರು ಮತ್ತು ಪ್ರತಿಭಾನ್ವಿತರನ್ನು ನೇಮಿಸಿಕೊಳ್ಳುತ್ತಲೇ ಇದ್ದೇವೆ ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷ ಮತ್ತು ಸಿಇಒ ಸಿ ವಿಜಯಕುಮಾರ್ ಹೇಳಿದರು.

ಇದನ್ನೂ ಓದಿ: 2020ರಲ್ಲಿ ಹೋಂಡಾ ಕಾರುಗಳ ಮಾರಾಟದಲ್ಲಿ ಸೆಡಾನ್ ಸಿಟಿ ಶೈನಿಂಗ್!

ಬೇಡಿಕೆಯ ಆಧಾರದ ಮೇಲೆ ಮುಂದಿನ 4-6 ತಿಂಗಳಲ್ಲಿ ಸುಮಾರು 20,000 ಜನರನ್ನು ನೇಮಕ ಮಾಡಬೇಕೆಂದು ನಾನು ನಿರೀಕ್ಷಿಸುತ್ತೇನೆ. ಮುಂಬರುವ ತ್ರೈಮಾಸಿಕದಲ್ಲಿ ಕಂಪನಿಯು ಯಾವುದೇ ವೀಸಾ ಸಂಬಂಧಿತ ಸಮಸ್ಯೆಗಳನ್ನು ನಿರೀಕ್ಷಿಸುತ್ತದೆಯೇ ಎಂದು ಕೇಳಿದಾಗ, ವಿಜಯಕುಮಾರ್ ಅವರು ಅಮೆರಕದಲ್ಲಿ ಕಂಪನಿಯ ಮುಖ್ಯ ಲೆಕ್ಕದಲ್ಲಿ ಶೇ 69.8ರಷ್ಟು ಸ್ಥಳೀಯರನ್ನು ಒಳಗೊಂಡಿದೆ ಎಂದರು.

ನಾವು ಸೇರಿದಂತೆ ಅನೇಕ ಕಂಪನಿಗಳು ಸ್ಥಳೀಯ ನೇಮಕಾತಿಯನ್ನು ಹೆಚ್ಚಿಸುವ ಮೂಲಕ ವೀಸಾದ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ. ಸ್ಥಳೀಕರಣದ ಅನುಪಾತದ ಕೊನೆಯ ತ್ರೈಮಾಸಿಕದಲ್ಲಿ ಶೇ 67ರಿಂದ 70ಕ್ಕೆ ಏರಿದೆ. ಆದ್ದರಿಂದ, ನಮ್ಮ ವೀಸಾಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ಹೇಳಿದರು.

ಕಳೆದ ಕೆಲವು ತಿಂಗಳಿಂದ ಎಚ್‌ಸಿಎಲ್ ಟೆಕ್ನಾಲಜೀಸ್, ಶ್ರೀಲಂಕಾ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ತನ್ನ ಸೌಲಭ್ಯ ಸ್ಥಾಪಿಸಲು ಹೂಡಿಕೆ ಮಾಡಿದೆ. ಕಳೆದ ವರ್ಷ ಜೂನ್‌ನಲ್ಲಿ ಶ್ರೀಲಂಕಾದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತು. ಮುಂದಿನ 18 ತಿಂಗಳಲ್ಲಿ 1,500ಕ್ಕೂ ಹೆಚ್ಚು ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಜಿಸಿದೆ ಎಂದು ತಿಳಿಸಿದರು.

ABOUT THE AUTHOR

...view details