ನವದೆಹಲಿ: ಫ್ಯೂಚರ್ ರಿಟೇಲ್ ಲಿಮಿಟೆಡ್ ತನ್ನ ವ್ಯವಹಾರ ಮಾರಾಟ ಮಾಡಲು ರಿಲಯನ್ಸ್ ರಿಟೇಲ್ ಜೊತೆ 24,713 ಕೋಟಿ ರೂ. ಒಪ್ಪಂದ ಮುಂದುವರಿಸುವುದನ್ನು ತಡೆಯುವ ಏಕ ನ್ಯಾಯಾಧೀಶರ ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ತಡೆ ಹಿಡಿದಿದೆ. ಅಮೆರಿಕ ಮೂಲದ ಇಕಾಮರ್ಸ್ ದೈತ್ಯ ಅಮೆಜಾನ್ ಒಪ್ಪಂದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಅಮೆಜಾನ್ಗೆ ಫ್ಯೂಚರ್ ಗ್ರೂಪ್‌ನ ಮೇಲ್ಮನವಿಯ ಬಗ್ಗೆ ನೋಟಿಸ್ ನೀಡಿತು. ಏಪ್ರಿಲ್ 30ರಂದು ಹೆಚ್ಚಿನ ವಿಚಾರಣೆಗೆ ನ್ಯಾಯಪೀಠವು ಮುಂದೂಡಿದೆ.