ನವದೆಹಲಿ: ಕೇಂದ್ರ ಸರ್ಕಾರವು ಮುಂದಿನ 3-4 ದಿನಗಳಲ್ಲಿ ತೀವ್ರ ನಷ್ಟದಲ್ಲಿರುವ ಏರ್ ಇಂಡಿಯಾ ಖಾಸಗೀಕರಣದ ಷೇರು ಖರೀದಿಗೆ ಆಸಕ್ತಿ (ಇಒಐ) ಮತ್ತು ಷೇರು ಖರೀದಿ ಒಪ್ಪಂದದ (ಎಸ್ಪಿಎ) ಪ್ರಕ್ರಿಯೆ ಜಾರಿಗೆ ಬರಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
87ರ 'ಮಹಾರಾಜ'ಗೆ ವಿದಾಯದ ವೇಳೆ.. 3-4 ದಿನದಲ್ಲಿ 'ಏರ್ ಇಂಡಿಯಾ' ಷೇರು ಮಾರಾಟಕ್ಕೆ..
ಕೇಂದ್ರ ಸಚಿವರುಗಳ ಗುಂಪಿನ (ಜಿಒಎಂ) ಮುಖ್ಯಸ್ಥರಾದ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಜನವರಿ 7ರಂದು ನಡೆದ ಸಭೆಯಲ್ಲಿ ಇಒಐ ಮತ್ತು ಎಸ್ಪಿಎಗೆ ಅನುಮೋದನೆ ನೀಡಲಾಗಿತ್ತು. ಷೇರು ಖರೀದಿಗೆ ಆಸಕ್ತಿ ಮತ್ತು ಷೇರು ಖರೀದಿ ಒಪ್ಪಂದವು ಮುಂದಿನ ಮೂರು-ನಾಲ್ಕು ದಿನಗಳಲ್ಲಿ ನಡೆಯಲಿದೆ.
ಕೇಂದ್ರ ಸಚಿವರುಗಳ ಗುಂಪಿನ (ಜಿಒಎಂ) ಮುಖ್ಯಸ್ಥರಾದ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಜನವರಿ 7ರಂದು ನಡೆದ ಸಭೆಯಲ್ಲಿ ಇಒಐ ಮತ್ತು ಎಸ್ಪಿಎಗೆ ಅನುಮೋದನೆ ನೀಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಷೇರು ಖರೀದಿಗೆ ಆಸಕ್ತಿ ಮತ್ತು ಷೇರು ಖರೀದಿ ಒಪ್ಪಂದವು ಮುಂದಿನ ಮೂರು-ನಾಲ್ಕು ದಿನಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.ಏರ್ ಇಂಡಿಯಾ 2018-19ರಲ್ಲಿ ಒಟ್ಟು 8,556 ಕೋಟಿ ರೂ. ನಷ್ಟ ಅನುಭವಿಸಿದೆ. ಒಟ್ಟಾರಿ ನಷ್ಟದ ಪ್ರಮಾಣವು ₹80,000 ಕೋಟಿಯಷ್ಟಿದೆ. ನಷ್ಟದ ಸುಳಿಯಲ್ಲಿರುವ ಸಂಸ್ಥೆಯನ್ನು ಖಾಸಗೀಕರಣಕ್ಕೆ ಒಳಪಡಿಸಲು ಕಳೆದ ಹಲವು ತಿಂಗಳಿಂದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಯಾವುದೇ ಕಂಪನಿಗಳು ಖರೀದಿಸಲು ಆರಂಭದಲ್ಲಿ ಮುತುವರ್ಜಿ ವಹಿಸಿರಲಿಲ್ಲ.