ನವದೆಹಲಿ: ಸರ್ಕಾರಿ ಸ್ವಾಮ್ಯದ ದೇಶದ ಎರಡನೇ ಅತಿದೊಡ್ಡ ತೈಲ ಶುದ್ಧೀಕರಣ ಮತ್ತು ಮಾರಾಟ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ (ಬಿಪಿಸಿಎಲ್) ಶೇ. 52.98ರಷ್ಟು ಷೇರುಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಬಿಡ್ಗೆ ಆಹ್ವಾನಿಸಿದೆ.
ಈ ಖಾಸಗೀಕರಣ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ಭಾಗವಹಿಸುವಂತಿಲ್ಲ. 10 ಬಿಲಿಯನ್ ಡಾಲರ್ (₹ 74,000 ಕೋಟಿ) ನಿವ್ವಳ ಮೌಲ್ಯ ಹೊಂದಿರುವ ಯಾವುದೇ ಖಾಸಗಿ ಕಂಪನಿಗಳು ಬಿಡ್ ಸಲ್ಲಿಸಬಹುದು. ನಾಲ್ಕು ಸಂಸ್ಥೆಗಳಿಗಿಂತ ಹೆಚ್ಚಿನ ಒಕ್ಕೂಟ ಸಹ ಬಿಡ್ನಲ್ಲಿ ಪಾಲ್ಗೊಳ್ಳುವ ಅವಕಾಶ ಇರುವುದಿಲ್ಲ ಎಂದು ಹೇಳಿದೆ.
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಬಿಪಿಸಿಎಲ್‌ನ ಮಾರಾಟಕ್ಕೆ ಮೇ 2 ಒಳಗೆ ಬಿಡ್ಗಳನ್ನು ಆಹ್ವಾನಿಸಿದೆ. ಬಿಪಿಸಿಎಲ್‌ನ 114. 91 ಕೋಟಿ ಈಕ್ವಿಟಿ ಷೇರುಗಳಲ್ಲಿ ಸರ್ಕಾರ ಹೊಂದಿರುವ ಶೇ 52. 98ರಷ್ಟು ಸಂಪೂರ್ಣ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಪ್ರಸ್ತಾಪಿಸಿದೆ.