ನವದೆಹಲಿ: ದೇಶದ ಏಕಕಾಲದಲ್ಲಿ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡುವುದರಿಂದ ವಿದ್ಯುತ್ ಗ್ರಿಡ್ ಅಸ್ಥಿರತೆಯ ನಿಯಂತ್ರಿಸಲು ಮುಂದಾಗಿದೆ.
ಒಂದೇ ಬಾರಿಗೆ ವಿದ್ಯುತ್ ದೀಪಗಳು ಸ್ವಿಚ್ ಆಫ್ ಮಾಡಿ, ಮತ್ತೆ ಏಕಕಾಲದಲ್ಲಿ ಆನ್ ಮಾಡುವುದರಿಂದ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಯಾವುದೇ ಹಾನಿಯಾಗದಂತೆ ಹಾಗೂ ಬೇಡಿಕೆಯ ವ್ಯತ್ಯಾಸವನ್ನು ನಿಭಾಯಿಸಲು ಸಾಕಷ್ಟು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ.
ಏಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ, ಮನೆಗಳ ಮಹಡಿಗಳಲ್ಲಿ ನಿಂತು ಮೇಣದ ಹತ್ತಿ, ದೀಪ, ಮೊಬೈಲ್ ಲೈಟ್ ಹಾಗೂ ಟಾರ್ಟ್ ಹಿಡಿದು 9 ನಿಮಿಷಗಳ ಕಾಲ ಬೆಳಕು ಚೆಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಿ ಎಂದು ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ವಿಡಿಯೋ ಮೂಲಕ ಕರೆ ನೀಡಿದ್ದರು.
ಮೂರು ವಾರಗಳ ಕಾಲ ದೇಶಾದ್ಯಂತ ಲಾಕ್ಡೌನ್ ವಿಧಿಸಲಾಗಿದೆ. ಕೊರೊನಾ ವೈರಸ್ ಬಿಕ್ಕಟ್ಟಿನ ಕತ್ತಲೆಯನ್ನು ಮೇಣದ ಬತ್ತಿ ಮತ್ತು ಟಾರ್ಚ್ ಲೈಟ್ ಬೆಳಕಿನ ಮೂಲಕ ಹೊಡೆದೊಡಿಸುವಂತೆ ರೂಪಕವಾಗಿ ಪ್ರಧಾನಿ ಕರೆ ನೀಡಿದ್ದರು. ಅನೇಕ ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ಹಠಾತ್ ಕುಸಿತದ ಸಾಧ್ಯತೆಯನ್ನು ಎದುರಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲು ವಿದ್ಯುತ್ ವಿತರಕರಿಗೆ ಸೂಚಿಸಲಾಗಿದೆ. ಈಗಾಗಲೇ ಹೆಚ್ಚಿನ ವ್ಯವಹಾರಗಳು ಸ್ಥಗಿತಗೊಳಿಸಿದ್ದರಿಂದ ಶೇ 25 ರಷ್ಟು ಬೇಡಿಕೆ ಕುಸಿದು 125.81 ಗಿಗಾವಾಟ್‌ಗೆ ತಲುಪಿದೆ.