ನವದೆಹಲಿ:ದೇಶದ ಪ್ರವರ್ತಕ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ ಪೇಟಿಎಂ ಮತ್ತು ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿ ಗೂಗಲ್ ನಡುವಿನ ಸಾರ್ವಜನಿಕ ದ್ವೇಷವನ್ನು ಕೇಂದ್ರ ಸರ್ಕಾರದ ಗಮನವನ್ನು ಸೆಳೆದಿದ್ದು, ಈ ಬೆಳವಣಿಗೆಯ ಬಗ್ಗೆ ನಿಗಾ ಇಟ್ಟಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಈಟಿವಿ ಭಾರತಗೆ ತಿಳಿಸಿದ್ದಾರೆ.
ಅಭಿವೃದ್ಧಿ ಹಾಗೂ ಈಗ ನಡೆಯುತ್ತಿರುವ ಅದರ ಬೆಳವಣಿಗೆಯ ಬಗ್ಗೆ ನಿಗಾ ಇಡುವುದು ನಮಗೆ ತಿಳಿದಿದೆ. ಈ ವಿಷಯವು ನಮ್ಮ ಪರಿಗಣನೆಗೆ ಬಂದಿದೆ. ಆದರೆ, ಈ ಹಂತದಲ್ಲಿ ಇದನ್ನು ಚರ್ಚಿಸುವುದು ಸೂಕ್ತವಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರದ (ಡಿಪಿಐಐಟಿ) ಜಂಟಿ ಕಾರ್ಯದರ್ಶಿ ಅನಿಲ್ ಅಗ್ರವಾಲ್ ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಮತ್ತು ಶಕ್ತಿಶಾಲಿ ತಂತ್ರಜ್ಞಾನ ಕಂಪನಿಯಾದ ಆಲ್ಫಾಬೆಟ್ ಇಂಕ್ ಒಡೆತನದ ಗೂಗಲ್ ಮತ್ತು ಭಾರತದಲ್ಲಿ ದೇಶಿಯವಾಗಿ ಬೆಳೆದ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ ಪೇಟಿಎಂ, ಕಳೆದ ತಿಂಗಳು ಗೂಗಲ್‌ನ ಪ್ಲೇ ಸ್ಟೋರ್‌ನಿಂದ ಪೇಟಿಎಂ ಅನ್ನು ತೆಗೆದುಹಾಕಿದ ನಂತರ ಹದಿನೈದು ದಿನಗಳಿಂದ ಬಹಿರಂಗ ಜಗಳದಲ್ಲಿ ತೊಡಗಿಸಿಕೊಂಡಿವೆ.
ಡಿಜಿಟಲ್ ಸೇವೆಗಳ ಮಾರಾಟ ಮತ್ತು ಗೂಗಲ್ ಪೇ ಬಳಕೆಗಾಗಿ ಅಪ್ಲಿಕೇಷನ್ ಡೆವಲಪರ್‌ನಿಂದ ಭಾರಿ ಶುಲ್ಕ ವಿಧಿಸುವ ಗೂಗಲ್‌ನ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಆರಂಭಿಕ ಯುನಿಕಾರ್ನ್ ಪೇಟಿಎಂ ಭಾರತೀಯ ಡೆವಲಪರ್‌ಗಳಿಗಾಗಿ ತನ್ನದೇ ಆದ ಆ್ಯಂಡ್ರಾಯ್ಡ್ ಮಿನಿ ಆಪ್ ಸ್ಟೋರ್ ಅನ್ನು ಪ್ರಾರಂಭಿಸುವುದಾಗಿ ಭಾನುವಾರ ಪ್ರಕಟಿಸಿದೆ.
ಗೂಗಲ್ ಪ್ಲೇ ಸ್ಟೋರ್ ನೀತಿಗಳ ಉಲ್ಲಂಘನೆಯ ಆರೋಪದ ಮೇಲೆ ಪೇಟಿಎಂ ಮೊಬೈಲ್ ಅಪ್ಲಿಕೇಷನ್ ಅನ್ನು ತನ್ನ ಸ್ಟೋರ್‌ನಿಂದ ತೆಗೆದುಹಾಕಿದ ಗೂಗಲ್ ನಿರ್ಧಾರದ ಹದಿನೈದು ದಿನಗಳ ನಂತರ ಈ ಬೆಳವಣಿಗೆ ನಡೆದಿವೆ.
ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಅಮಾನತುಗೊಳಿಸಿದ ಯುಪಿಐ ಕ್ಯಾಶ್ ಬ್ಯಾಕ್ ಆಫರ್ ಮತ್ತು ಪೇಟ್‌ಎಂನ ಸ್ಕ್ರ್ಯಾಚ್ ಕಾರ್ಡ್ ಕೊಡುಗೆ ಅನುಸರಿಸಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಪೇಟಿಎಂ ಆ್ಯಪ್ ಅನ್ನು ಮರು ಸ್ಥಾಪಿಸಿದೆ. ಭಾರತದ ಡಿಜಿಟಲ್ ವಲಯದಲ್ಲಿ ಗೂಗಲ್‌ನ ಪ್ರಾಬಲ್ಯ ಸುಮಾರು ಶೇ 95ರಷ್ಟಿದೆ. ಭಾರತೀಯ ಸ್ಮಾರ್ಟ್ ಫೋನ್‌ಗಳು ಗೂಗಲ್‌ನ ಆಪರೇಟಿಂಗ್ ಸಿಸ್ಟಮ್ ಆ್ಯಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಇದು ಸರ್ಚ್ ಎಂಜಿನ್ ದೈತ್ಯರಿಗೆ ದೇಶದ ಡಿಜಿಟಲ್ ಪರಿಸರ ವ್ಯವಸ್ಥೆಯ ಮೇಲೆ ಅಭೂತಪೂರ್ವ ಪ್ರಾಬಲ್ಯ ನೀಡುತ್ತದೆ.