ನವದೆಹಲಿ:ಗೂಗಲ್ ಪೇ ಗೌಪ್ಯತೆ ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡುವುದಾಗಿ ಗೂಗಲ್ ಇಂಕ್ ತಿಳಿಸಿದ್ದು, ತಮ್ಮದೇ ಆದ ವಹಿವಾಟಿನ ಡೇಟಾದ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಡುತ್ತಿದೆ.
ಮುಂದಿನ ವಾರದಿಂದ ಗೂಗಲ್ ಪೇ ಅಪ್ಲಿಕೇಷನ್ ಹೊಸ ಅಪ್ಡೇಟ್ ಹೊರತರುತ್ತಿದೆ. ಬಳಕೆದಾರರಿಗೆ ಅಪ್ಲಿಕೇಷನ್‌ನಲ್ಲಿನ ಫೀಚರ್ಗಳನ್ನು ವೈಯಕ್ತೀಕರಿಸಲು ತಮ್ಮ ಗೂಗಲ್ ಪೇ ಚಟುವಟಿಕೆಯನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ನಿಯಂತ್ರಣವನ್ನು ಒದಗಿಸುತ್ತದೆ.
ಎಲ್ಲಾ ಬಳಕೆದಾರರು ಗೂಗಲ್ ಪೇ ಅಪ್ಲಿಕೇಷನ್‌ನ ಮುಂದಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡಿದ ತಕ್ಷಣ ನಿಯಂತ್ರಣವನ್ನು ಆನ್ ಅಥವಾ ಆಫ್ ಮಾಡಲು ಬಯಸುತ್ತೀರಾ ಎಂಬ ಆಯ್ಕೆ ಕೇಳಲಾಗುತ್ತದೆ.
ಗೌಪ್ಯತೆ ಈಗಾಗಲೇ ನಮಗೆ ಪ್ರಮುಖ ಆದ್ಯತೆಯಾಗಿದೆ. ನೀವು ಗೂಗಲ್ ಪೇನಲ್ಲಿ ಏನನ್ನಾದರೂ ಮಾಡಿದರೆ, ಅದು ಗೂಗಲ್ ಪೇನಲ್ಲಿ ಉಳಿಯುತ್ತದೆ. ನಿಮ್ಮ ಗೂಗಲ್ ಪೇ ಚಟುವಟಿಕೆಯನ್ನು ನಿರ್ವಹಿಸಲು ನಾವು ಹೊಸ ನಿಯಂತ್ರಣ ಸ್ಥಾಪಿಸುತ್ತಿದ್ದೇವೆ ಎಂದು ಗೂಗಲ್ ಪೇ ಉಪಾಧ್ಯಕ್ಷ ಉತ್ಪನ್ನ ಅಂಬರೀಶ್ ಕೆಂಗೆ ಸುದ್ದಿ ಸಂಸ್ಥೆಗೆ ತಿಳಿಸಿದರು.