ಕರ್ನಾಟಕ

karnataka

ETV Bharat / business

ಹತ್ತಿರದ ಕಿರಾಣಿ ಅಂಗಡಿಗೆ ಕರೆದೊಯ್ಯುವ ಗೂಗಲ್ ಪೇ​ 'ನಿಯರ್ ​ಬೈ ಸ್ಪಾಟ್​' - ಅಗತ್ಯ ಸರಕು ಮಾರಾಟ ಮಳಿಗೆ

ಕೋವಿಡ್​ 19 ನಿಯಂತ್ರಣಕ್ಕೆ ಲಾಕ್​ಡೌನ್ ವಿಧಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಳಕೆದಾರರ ಸ್ನೇಹಿಯಾಗಿ ಗೂಗಲ್​ 'ನಿಯರ್‌ ಬೈ ಸ್ಪಾಟ್‌' ಸೇವೆ ಆರಂಭಿಸಿದ್ದು, ಈ ಮೂಲಕ ಬಳಕೆದಾರ ತನ್ನ ಹತ್ತಿರದ ಕಿರಾಣಿ ಅಂಗಡಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

Google Pay
ನಿಯರ್​ಬೈ ಸ್ಪಾಟ್

By

Published : Apr 14, 2020, 3:19 PM IST

ನವದೆಹಲಿ:ಗೂಗಲ್‌ ಪೇ ಡಿಜಿಟಲ್​ ಪ್ಲಾಟ್​ಫಾರ್ಮ್ 'ನಿಯರ್‌ ಬೈ ಸ್ಪಾಟ್‌' ಸೇವೆ ಆರಂಭಿಸಿದ್ದು, ಈ ಮೂಲಕ ಬಳಕೆದಾರ ಹತ್ತಿರದ ಕಿರಾಣಿ ಅಂಗಡಿ ಸೇರಿದಂತೆ ಅಗತ್ಯ ಸರಕುಗಳ ಮಾರಾಟ ಮಳಿಗೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ಕೋವಿಡ್​ 19 ನಿಯಂತ್ರಣಕ್ಕೆ ಲಾಕ್​ಡೌನ್ ವಿಧಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದೇಶಿಸಲಾಗಿದೆ. ಈ ನೂತನ ಸೇವೆ ಬೆಂಗಳೂರಿನಲ್ಲಿ ಈಗಾಗಲೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೈದರಾಬಾದ್, ಚೆನ್ನೈ, ಮುಂಬೈ, ಪುಣೆ ಮತ್ತು ದೆಹಲಿಯಲ್ಲಿ ಶುರುವಾಗಲಿದೆ ಎಂದು ತನ್ನ ಬ್ಲಾಗ್​ನಲ್ಲಿ ಬರೆದುಕೊಂಡಿದೆ.

ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಡಿಜಿಟಲ್ ಪಾವತಿ ಈ ಹಿಂದಿಗಿಂತ ಪ್ರಸ್ತುತ ದಿನಗಳಲ್ಲಿ ಹೆಚ್ಚು ಮಹತ್ವದ್ದಾಗಿವೆ. ಕೋವಿಡ್​-19ಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಸಹ ಇದರಲ್ಲಿ ಒಳಗೊಂಡಿರುತ್ತದೆ ಎಂದು ಕಂಪನಿ ತಿಳಿಸಿದೆ.

ಪಿಎಂ ಕೇರ್ಸ್​, ಸೀಡ್ಸ್, ಗಿವ್ ಇಂಡಿಯಾ, ಯುನೈಟೆಡ್ ವೇ ಮತ್ತು ಚಾರಿಟೀಸ್ ಏಡ್ ಫೌಂಡೇಷನ್‌ನಂತಹ ಎನ್‌ಜಿಒಗಳಿಗೆ ವೈದ್ಯಕೀಯ ಕಾರ್ಯಕರ್ತರಿಗೆ ರಕ್ಷಣಾತ್ಮಕ ಸಾಧನಗಳನ್ನು ಒದಗಿಸುವಂತಹ ಕಾರ್ಯಗಳಿಗೆ ಸಾರ್ವಜನಿಕರಿಂದ ದೇಣಿಗೆಯನ್ನು ತನ್ನ ಡಿಜಿಟಲ್​ ವೇ ಮೂಲಕ ಸಂಗ್ರಹಿಸುತ್ತಿದೆ.

ಗೂಗಲ್ ಪೇನಲ್ಲಿ ಪಿಎಂ-ಕೇರ್ಸ್‌ಗೆ ದೇಣಿಗೆಯಾಗಿ ಇದುವರೆಗೂ 105 ಕೋಟಿ ರೂ. ಸಂಗ್ರಹಿಸಿದೆ. ಇದರ ಮೊತ್ತ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ ಎಂದು ಹೇಳಿದೆ.

ABOUT THE AUTHOR

...view details