ಕರ್ನಾಟಕ

karnataka

ETV Bharat / business

ಗ್ಲಾಸ್ಗೋ ವಿವಿಗೆ 51 ಕೋಟಿ ರೂ. ದೇಣಿಗೆ ನೀಡಿದ ಭಾರತೀಯ ಉದ್ಯಮಿ ದಂಪತಿ -

ದೇಣಿಗೆ ಘೋಷಣೆ ಬಳಿಕ ಮಾತನಾಡಿದ ಬಯೊಕಾನ್ ಉಪಾಧ್ಯಕ್ಷ ಜಾನ್ ಶಾ, ವಿಶ್ವವಿದ್ಯಾನಿಲಯ ಪ್ರಮುಖ ವಿಸ್ತರಣಾ ಯೋಜನೆ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ನೆರವು ನೀಡಲು ಸಾಧ್ಯವಾಗಿರುವುದು ನನಗೆ ಸಂತಸ ತಂದಿದೆ. ನಾನು ಹಾಗೂ ಕಿರಣ್‌ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸುತ್ತಿರುವುದು ಹೆಮ್ಮೆ ಎಂದಿದ್ದಾರೆ.

ಚಿತ್ರ ಕೃಪೆ: ಟ್ವಿಟ್ಟರ್​

By

Published : Jul 11, 2019, 5:14 PM IST

ಲಂಡನ್​:ಸ್ಕಾಟ್ಲೆಂಡ್‌ನಲ್ಲಿರುವ ಗ್ಲಾಸ್ಗೊ ವಿಶ್ವವಿದ್ಯಾನಿಲಯಕ್ಕೆ ಬಯೊಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ ಹಾಗೂ ಅವರ ಪತಿ ಜಾನ್ ಶಾ ಅವರು 51.60 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ದೇಣಿಗೆ ಘೋಷಣೆ ಬಳಿಕ ಮಾತನಾಡಿದ ಬಯೊಕಾನ್ ಉಪಾಧ್ಯಕ್ಷ ಜಾನ್ ಶಾ, ವಿಶ್ವವಿದ್ಯಾನಿಲಯ ಪ್ರಮುಖ ವಿಸ್ತರಣಾ ಯೋಜನೆ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ನೆರವು ನೀಡಲು ಸಾಧ್ಯವಾಗಿರುವುದು ನನಗೆ ಸಂತಸ ತಂದಿದೆ. ನಾನು ಹಾಗೂ ಕಿರಣ್‌ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸುತ್ತಿರುವುದು ಹೆಮ್ಮೆ ಎಂದಿದ್ದಾರೆ.

ಬಯೊಕಾನ್ ಕಂಪನಿಯ ಯಶಸ್ಸಿನಿಂದಲೇ ದಾನ ನೀಡಲು ಸಾಧ್ಯವಾಗಿದ್ದು. ಗ್ಲಾಸ್ಗೊ ವಿಶ್ವವಿದ್ಯಾನಿಲಯದಲ್ಲಿ ಕೈಗೊಳ್ಳುವ ಸಂಶೋಧನೆ, ಬಯೊಕಾನ್‌ನ ಪ್ರಮುಖ ಆಸಕ್ತಿಗಳಾದ ಮಧುಮೇಹ ಹಾಗೂ ಕ್ಯಾನ್ಸರ್ ಚಿಕಿತ್ಸೆಯ ಪ್ರತಿನಿಧಿಸುವಂತಹದ್ದು ಎಂದರು.

For All Latest Updates

TAGGED:

ABOUT THE AUTHOR

...view details