ಕರ್ನಾಟಕ

karnataka

ETV Bharat / business

ಕಾರ್ಮಿಕರ ಕಾಲ್ನಡಿಗೆ, ಅವಘಡದಿಂದ ಎಚ್ಚತ್ತ ಕೇಂದ್ರ: ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೊಕಾಲ್ ಜಾರಿ

ಮಂಗಳವಾರ ಬೆಳಗ್ಗೆ ಬಿಹಾರದ ಭಾಗಲ್ಪುರದಲ್ಲಿ ಟ್ರಕ್ ಮತ್ತು ಬಸ್ ಡಿಕ್ಕಿಯಲ್ಲಿ ಒಂಬತ್ತು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಗೃಹ ಸಚಿವಾಲಯವು ವಲಸಿಗ ಕಾರ್ಮಿಕರನ್ನು ಸುರಕ್ಷಿತವಾಗಿ ಸಾಗಿಸಲು ಹೆಚ್ಚಿನ ರೈಲುಗಳನ್ನು ವ್ಯವಸ್ಥೆಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೊಕಾಲ್ (ಎಸ್ಒಪಿ) ಹೊರಡಿಸಿದೆ.

migrant workers
ವಲಸೆ ಕಾರ್ಮಿಕರು

By

Published : May 19, 2020, 4:38 PM IST

ನವದೆಹಲಿ: ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ರಸ್ತೆ ಅಥವಾ ರೈಲ್ವೆ ಹಳ್ಳಿಗಳ ಮೇಲೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿಗಳು) ಸೂಚಿಸಿದೆ.

ಮಂಗಳವಾರ ಬೆಳಗ್ಗೆ ಬಿಹಾರದ ಭಾಗಲ್ಪುರದಲ್ಲಿ ಟ್ರಕ್ ಮತ್ತು ಬಸ್ ಡಿಕ್ಕಿಯಲ್ಲಿ ಒಂಬತ್ತು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಗೃಹ ಸಚಿವಾಲಯವು ವಲಸಿಗ ಕಾರ್ಮಿಕರನ್ನು ಸುರಕ್ಷಿತವಾಗಿ ಸಾಗಿಸಲು ಹೆಚ್ಚಿನ ರೈಲುಗಳನ್ನು ವ್ಯವಸ್ಥೆಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೊಕಾಲ್ (ಎಸ್ಒಪಿ) ಹೊರಡಿಸಿದೆ.

ಯಾವುದೇ ವಲಸೆ ಕಾರ್ಮಿಕನು ತನ್ನ ಅಂತಿಮ ಸ್ಥಳ ತಲುಪಲು ರಸ್ತೆಗಳು ಅಥವಾ ರೈಲ್ವೆ ಹಳಿಗಳ ಮೇಲೆ ನಡೆಯಬಾರದು ಎಂದು ಎಸ್‌ಒಪಿ ಹೇಳಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ರಾಜ್ಯಗಳು ಮತ್ತು ಯುಟಿಗಳಿಗೆ ನೀಡಿದ ಸೂಚನೆಯಲ್ಲಿ ಕೊರೊನಾ ವೈರಸ್​​​​ ಭಯ ಮತ್ತು ಸಂಕಷ್ಟದಲ್ಲಿ ಸಿಕ್ಕಿಬಿದ್ದ ವಲಸಿಗ ಕಾರ್ಮಿಕರ ಸಂಕಷ್ಟವನ್ನು ತಗ್ಗಿಸಲು ಈ ಕೆಳಗಿನ ಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾದರೆ ನಾನು ಕೃತಜ್ಞನಾಗಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯಗಳು ಮತ್ತು ರೈಲ್ವೆ ಸಚಿವಾಲಯದ ನಡುವೆ ಸಕ್ರಿಯ ಸಮನ್ವಯದ ಮೂಲಕ ಹೆಚ್ಚಿನ ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಿಕೊಳ್ಳಬೇಕು. ನೈರ್ಮಲ್ಯ, ಆಹಾರ ಮತ್ತು ಆರೋಗ್ಯದ ಕಡೆ ಗಮನಹಿರಿಸಿ, ವಿಶ್ರಾಂತಿ ಸ್ಥಳಗಳಿಗೆ ವ್ಯವಸ್ಥೆ ಮಾಡಬೇಕು. ರೈಲು ಮತ್ತು ಬಸ್​​​​​​ಗಳ ನಿರ್ಗಮನದ ಬಗ್ಗೆ ಸ್ಪಷ್ಟತೆ ಇರಬೇಕು. ಈ ಸ್ಪಷ್ಟತೆಯ ಕೊರತೆ ಮತ್ತು ವದಂತಿಗಳು ಕಾರ್ಮಿಕರಲ್ಲಿ ಅಶಾಂತಿ ಮೂಡಿಸುತ್ತಿವೆ. ವಲಸೆ ಕಾರ್ಮಿಕರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ನಿರ್ದಿಷ್ಟ ಅವಶ್ಯಕತೆಗಳ ಬಗ್ಗೆ ವಿಶೇಷ ಗಮನ ನೀಡಬೇಕು ಎಂದು ಹೇಳಿದ್ದಾರೆ.

ABOUT THE AUTHOR

...view details