ಕರ್ನಾಟಕ

karnataka

ಚೀನಾದ ಒಂಟಿ ತೋಳ ಉದ್ಯಮಿ ಹಿಂದಿಕ್ಕಿ ನಂ.2 ಪಟ್ಟಕ್ಕೇರಿದ ಗೌತಮ್ ಅದಾನಿ

By

Published : May 21, 2021, 4:03 PM IST

ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಅದಾನಿಯ ನಿವ್ವಳ ಮೌಲ್ಯ 66.5 ಬಿಲಿಯನ್ ಡಾಲರ್ ಆಗಿದ್ದರೆ, ಜಾಂಗ್ ಅವರ ನಿವ್ವಳ ಮೌಲ್ಯ 63.6 ಬಿಲಿಯನ್ ಡಾಲರ್ ಆಗಿದೆ. ಇದರ ಒಟ್ಟು ಮೌಲ್ಯವು ಈ ವರ್ಷ 32.7 ಬಿಲಿಯನ್ ಡಾಲರ್​ ಹೆಚ್ಚಾಗಿದೆ..

Gautam Adani
Gautam Adani

ಮುಂಬೈ :ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಏಷ್ಯಾ ಕುಬೇರಾದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಅದಾನಿ ಅವರು ಚೀನಾದ ಲೋನ್ ವುಲ್ಫ್​(ಒಂಟಿ ತೋಳ) ಝಾಂಗ್ ಶನ್ಶನ್ ಅವರನ್ನು ಹಿಂದಿಕ್ಕುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ತಿಂಗಳುಗಳಿಂದ ಹೆಚ್ಚುತ್ತಿವೆ. ಈ ವರ್ಷದ ಫೆಬ್ರವರಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಏಷ್ಯಾದ ಉದ್ಯಮಿ ಎನಿಸಿಕೊಂಡರು.

ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಅದಾನಿಯ ನಿವ್ವಳ ಮೌಲ್ಯ 66.5 ಬಿಲಿಯನ್ ಡಾಲರ್ ಆಗಿದ್ದರೆ, ಜಾಂಗ್ ಅವರ ನಿವ್ವಳ ಮೌಲ್ಯ 63.6 ಬಿಲಿಯನ್ ಡಾಲರ್ ಆಗಿದೆ. ಇದರ ಒಟ್ಟು ಮೌಲ್ಯವು ಈ ವರ್ಷ 32.7 ಬಿಲಿಯನ್ ಡಾಲರ್​ ಹೆಚ್ಚಾಗಿದೆ.

ಅದೇ ಅವಧಿಯಲ್ಲಿ ಅಂಬಾನಿಯ ಸಂಪತ್ತು 175.5 ಮಿಲಿಯನ್ ಡಾಲರ್​ ಇಳಿದು 76.5 ಬಿಲಿಯನ್​ಗೆ ತಲುಪಿದೆ. ಪ್ರಸ್ತುತ, ಮುಖೇಶ್ ವಿಶ್ವದ 13ನೇ ಸ್ಥಾನ ಮತ್ತು ಗೌತಮ್ ಅದಾನಿ 14ನೇ ಸ್ಥಾನದಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ಝಾಂಗ್‌ನ ಎರಡು ಕಂಪನಿಗಳು ಷೇರು ವಿನಿಮಯ ಕೇಂದ್ರಗಳಲ್ಲಿ ಸಾರ್ವಜನಿಕವಾಗಿ ವಿಶ್ವದ ಆರನೇ ಶ್ರೀಮಂತರಾಗಿದ್ದರು.

ABOUT THE AUTHOR

...view details