ನವದೆಹಲಿ :2020ರ ಹಣಕಾಸು ವರ್ಷದಲ್ಲಿ ಕಂಪನಿ ಮತ್ತು ವಿದೇಶಿ ನಿಧಿ ದೇಣಿಗೆಗೆ ಹೋಲಿಸಿದರೆ ವೈಯಕ್ತಿಕವಾಗಿ ಲೋಕೋಪಕಾರಿ ಧನಸಹಾಯ ಮಾಡಿದವರ ಕೊಡುಗೆ ಗಮನಾರ್ಹವಾಗಿ ಹೆಚ್ಚಳಗೊಂಡಿದೆ ಎಂದು 2021ರ ದಸ್ರಾ &ಕಂಪನಿ ಹಾಗೂ ಬೈನ್ ಇಂಡಿಯಾ ಲೋಕೋಪಕಾರಿ ವರದಿಯಲ್ಲಿ ತಿಳಿದು ಬಂದಿದೆ.
ವೈಯಕ್ತಿಕ ಲೋಕೋಪಕಾರಿ ಧನಸಹಾಯವು 2019ರ ಹಣಕಾಸು ವರ್ಷದಲ್ಲಿನ 21,000 ಕೋಟಿ ರೂ. ಪೈಕಿ 2020ರಲ್ಲಿ ಶೇ.42ರಷ್ಟು 30,000 ಕೋಟಿ ರೂ. ಹೆಚ್ಚಳವಾಗಿದೆ. ಬಹುಪಾಲು ಕುಟುಂಬ ಲೋಕೋಪಕಾರಿಗಳಿಂದ ಬಂದಿದೆ.
5 ಕೋಟಿ ರೂ.ಗಳ ದೇಣಿಗೆ ನೀಡಿದ್ದವರದ್ದು, ಕಾರ್ಪೊರೇಟ್ಗಳಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಹಿಂದಿನ ವರ್ಷಕ್ಕಿಂತ 2020ರಲ್ಲಿ 12,000 ಕೋಟಿ ರೂ.ಏರಿಕೆಯಾಗಿದೆ.
ಈ ಹೆಚ್ಚಳದಿಂದಾಗಿ ಒಟ್ಟು ಖಾಸಗಿ ಧನಸಹಾಯವು ಶೇ.23ರಷ್ಟು ಹೆಚ್ಚಳವಾಗಿದೆ. 2020 ವಿತ್ತೀಯ ವರ್ಷದಲ್ಲಿ 64,000 ಕೋಟಿ ರೂ.ಯಷ್ಟಾಗಿದೆ. ಖಾಸಗಿ ದೇಣಿಗೆಯಲ್ಲಿ ಒತ್ತಡ ಎದುರಿಸುತ್ತಿರುವ ದೇಶೀಯ ಕಂಪನಿಗಳ ಪಾಲು ಶೇ.29ರಿಂದ 28ಕ್ಕೆ ಇಳಿದಿದೆ. ಇದರ ಒಟ್ಟಾರೆ ಕೊಡುಗೆ ಕೇವಲ 3,000 ಕೋಟಿ ರೂ.ಗಳಿಂದ 18,000 ಕೋಟಿ ರೂ.ಗೆ ಏರಿದೆ.