ಕರ್ನಾಟಕ

karnataka

ETV Bharat / business

ಚನ್ನಮ್ಮ ಸರ್ಕಲ್​ To ಚಾಂದನಿ ಚೌಕ್​ಗೆ ನೇರ ವಿಮಾನ... ಫ್ಲೈಟ್​ ಟೈಮಿಂಗ್​, ಟಿಕೆಟ್​ ದರ ಹೀಗಿದೆ! - ಹಿಂಡನಗ ವಿಮಾನ ನಿಲ್ದಾಣ

ರಾಷ್ಟ್ರರಾಜಧಾನಿ ದೆಹಲಿಯಿಂದ 50 ಕಿ.ಮೀ. ದೂರದಲ್ಲಿ ಇರುವ ಗಾಜಿಯಾಬಾದ್​ ಹಿಂಡನ್​ ವಿಮಾನ ನಿಲ್ದಾಣವು ತನ್ನ ವಾಣಿಜ್ಯ ಹಾರಾಟ ಸೇವೆಯನ್ನು ನವೆಂಬರ್ 6 ರಿಂದ ಆರಂಭಿಸಿದೆ. ಸ್ಟಾರ್ ಏರ್​ ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತು ಹಿಂಡನ್ ನಡುವೆ ತಡೆರಹಿತ ವಿಮಾನ ಹಾರಾಟ ಸೇವೆ ಆರಂಭಿಸಿದೆ. ಈ ಎರಡು ತಾಣಗಳ ನಡುವೆ ಸ್ಟಾರ್ ಏರ್ ವಾರಕ್ಕೆ 3 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.

ಸಾಂದರ್ಭಿಕ ಚಿತ್ರ

By

Published : Nov 7, 2019, 9:57 AM IST

ನವದೆಹಲಿ: ಉಡಾನ್​ ಯೋಜನೆಯ ಭಾಗವಾಗಿ ದೇಶಿ ವಿಮಾನ ಸೇವೆಯಲ್ಲಿ ಹುಬ್ಬಳಿ ಹಾಗೂ ಉತ್ತರ ಪ್ರದೇಶದ ಹಿಂಡನ್ ನಡುವೆ ನೇರ ವಾಣಿಜ್ಯ ವಿಮಾನ ಹಾರಾಟ ಸೇವೆ ಆರಂಭವಾಗಿದೆ.

ರಾಷ್ಟ್ರರಾಜಧಾನಿ ದೆಹಲಿಯಿಂದ 50 ಕಿ.ಮೀ. ದೂರದಲ್ಲಿ ಇರುವ ಗಾಜಿಯಾಬಾದ್​ ಹಿಂಡನ್​ ವಿಮಾನ ನಿಲ್ದಾಣವು ತನ್ನ ವಾಣಿಜ್ಯ ಹಾರಾಟ ಸೇವೆಯನ್ನು ನವೆಂಬರ್ 6 ರಿಂದ ಆರಂಭಿಸಿದೆ. ಸ್ಟಾರ್ ಏರ್​ ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತು ಹಿಂಡನ್ ನಡುವೆ ತಡೆರಹಿತ ವಿಮಾನ ಹಾರಾಟ ಸೇವೆ ಆರಂಭಿಸಿದೆ. ಈ ಎರಡು ತಾಣಗಳ ನಡುವೆ ಸ್ಟಾರ್ ಏರ್ ವಾರಕ್ಕೆ 3 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.

ಏಕಮುಖಿ ಮಾರ್ಗವಾಗಿ ₹ 3,699 ಟಿಕೆಟ್​ ಬುಕಿಂಗ್ ಅನ್ನು ವಿಮಾನಯಾನ ಸಂಸ್ಥೆ ಪ್ರಾರಂಭಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.05ಕ್ಕೆ ಹೊರಟು ಫ್ಲೈಟ್​ ಮಧ್ಯಾಹ್ನ 3.45ಕ್ಕೆ ಹಿಂಡನ್ ವಿಮಾನ ನಿಲ್ದಾಣ ತಲುಪಲಿದೆ. ಹಿಂಡನ್ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ವಿಮಾನವು ಸಂಜೆ 4.10ಕ್ಕೆ ಹೊರಟು ಸಂಜೆ 6.50ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಈ ವಿಮಾನಗಳು ಬುಧವಾರ ಮತ್ತು ಗುರುವಾರ ಸೇವೆಗೆ ಲಭ್ಯವಿರುವುದಿಲ್ಲ.

ಶನಿವಾರ ಹುಬ್ಬಳ್ಳಿಯಿಂದ ಸ್ಟಾರ್ ಏರ್ ವಿಮಾನ ಬೆಳಗ್ಗೆ 11.50ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಹಿಂಡನ್ ವಿಮಾನ ನಿಲ್ದಾಣವನ್ನು ತಲುಪಲಿದೆ. ಸ್ಟಾರ್ ಏರ್ ವಿಮಾನವು ಮಧ್ಯಾಹ್ನ 3 ಗಂಟೆಗೆ ಹಿಂಡನ್ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 5.40ಕ್ಕೆ ಹುಬ್ಬಳ್ಳಿಗೆ ಬಂದು ಸೇರಲಿದೆ.

ABOUT THE AUTHOR

...view details