ಬೆಂಗಳೂರು:ಇ- ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಕಂಪನಿಯು ದೇಶಾದ್ಯಂತ 700 ನಗರಗಳಲ್ಲಿನ 27 ಸಾವಿರ ಕಿರಾಣಗಳನ್ನು ತನ್ನ ಪೂರೈಕೆ ಜಾಲದೊಂದಿಗೆ ಸೇರ್ಪಡೆ ಮಾಡಿಕೊಂಡಿದೆ.
ಮುಂದೆ ಬರಲಿರುವ ಸಾಲು- ಸಾಲು ಹಬ್ಬಗಳ ಬಿಗ್ ಬಿಲಿಯನ್ ದಿನಗಳಲ್ಲಿ ಹೆಚ್ಚಿನ ಗ್ರಾಹಕರನ್ನು ತಲುಪಲು ಫ್ಲಿಪ್ಕಾರ್ಟ್ ಕಿರಾಣಗಳ ಸೇರ್ಪಡೆಗೆ ಮುಂದಾಗಿದೆ. ಪ್ರಸ್ತುತ ಇರುವ 160 ಮಿಲಿಯನ್ ಗ್ರಾಹಕರಿಗೆ ವ್ಯಕ್ತಿಗತವಾದ ಇ- ಕಾಮರ್ಸ್ ಅನುಭವದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಹೊಸ- ಹೊಸ ಪ್ರದೇಶಗಳ ಗ್ರಾಹಕರನ್ನು ತಲುಪುವ ಮಹತ್ವಕಾಂಕ್ಷೆಯನ್ನು ಇರಿಸಿಕೊಂಡಿದೆ. ಶೇ 100ರಷ್ಟು ಪಿನ್ ಕೋಡ್ ಹೊಂದಿರುವ ಪ್ರದೇಶಗಳ ಗ್ರಾಹಕರನ್ನು ತಲುಪಲು ಕಿರಾಣಗಳು ನೆರವಾಗಲಿವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.