ಬೆಂಗಳೂರು: ಫ್ಲಿಪ್ಕಾರ್ಟ್ ತನ್ನ ದಿನಸಿ ಸೇವೆಗಳನ್ನು ದೇಶವ್ಯಾಪಿ ಮಾರುಕಟ್ಟೆ ಮೂಲಕ 50ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ. ಈ ವಿಸ್ತರಣೆಯಿಂದಾಗಿ 7 ಮೆಟ್ರೋ ನಗರಗಳು ಮತ್ತು 40ಕ್ಕೂ ಹೆಚ್ಚು ಸುತ್ತಮುತ್ತಲಿನ ನಗರಗಳಿಗೆ ಗುಣಮಟ್ಟದ ದಿನಸಿ ಉತ್ಪನ್ನಗಳು ದೊರೆಯಲಿವೆ.
ಅತ್ಯುತ್ತಮ ಉಳಿತಾಯ ಮತ್ತು ಕೊಡುಗೆಗಳು, ತ್ವರಿತ ವಿತರಣೆ ಹಾಗೂ ತಡೆರಹಿತ ದಿನಸಿ ಶಾಪಿಂಗ್ ಅನುಭವಗಳು ಗ್ರಾಹಕರಿಗೆ ದೊರೆಯಲಿವೆ. ಕಳೆದ ಹಲವು ವರ್ಷಗಳಲ್ಲಿ ಫ್ಲಿಪ್ಕಾರ್ಟ್ ದಿನಸಿ ಸೇವೆಗಳನ್ನು ಕ್ಷಿಪ್ರವಾಗಿ ವಿಸ್ತರಣೆ ಮಾಡಲು ಹೂಡಿಕೆ ಮಾಡುತ್ತಾ ಬಂದಿದ್ದು, ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡಿದೆ.
ಕೊಲ್ಕತ್ತಾ, ಪುಣೆ ಮತ್ತು ಅಹ್ಮದಾಬಾದ್ನಂತಹ ಮೆಟ್ರೋ ನಗರಗಳಲ್ಲಿನ ಫ್ಲಿಪ್ಕಾರ್ಟ್ನ ಪ್ರತ್ಯೇಕ ದಿನಸಿ ಫುಲ್ ಫಿಲ್ಮೆಂಟ್ ಸೆಂಟರ್ಗಳ ನೆರವಿನಿಂದ ಗ್ರಾಹಕರಿಗೆ ಅತ್ಯುತ್ತಮವಾದ ಗ್ರಾಸರಿ ಸೇವೆಗಳನ್ನು ಒದಗಿಸಲಾಗುತ್ತದೆ. ಫ್ಲಿಪ್ಕಾರ್ಟ್ ಮೆಟ್ರೋ ನಗರಗಳಲ್ಲದೇ ಮೈಸೂರು, ವಾರಂಗಲ್, ಕಾನ್ಪುರ, ಅಲಹಾಬಾದ್, ಆಲಿಘರ್, ಜೈಪುರ, ಚಂಡೀಘಡ, ರಾಜ್ ಕೋಟ್, ವಡೋದರ, ವೆಲ್ಲೂರು, ತಿರುಪತಿ ಮತ್ತು ದಮನ್ ನಂತಹ ನಗರಗಳಿಗೂ ಈ ಸೇವೆಯನ್ನು ಒದಗಿಸುತ್ತಿದೆ.
ಕೊರೊನಾ ಸಾಂಕ್ರಾಮಿಕವು ಲಕ್ಷಾಂತರ ಜನರು ಇ-ಕಾಮರ್ಸ್ ಶಾಪಿಂಗ್, ಅನುಕೂಲಕರ ಹಾಗೂ ಡಿಜಿಟಲ್ ವ್ಯವಹಾರಗಳತ್ತ ಕಡೆಗೆ ಒಲವು ತೋರುವಂತೆ ಮಾಡಿದೆ. ಇದು ಇ-ಗ್ರಾಸರಿಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಬರುವಂತೆ ಮಾಡಿದೆ. ಕೇವಲ ಮೆಟ್ರೋ ನಗರಗಳಲ್ಲದೇ, 2 ನೇ ಶ್ರೇಣಿಯ ನಗರಗಳಿಂದಲೂ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.
ಇದನ್ನೂ ಓದಿ: 2021ರಲ್ಲಿ 26 ಬಾರಿ ಜಿಗಿದ ಪೆಟ್ರೋಲ್, ಡೀಸೆಲ್ನ ಇಂದಿನ ದರ ಹೀಗಿದೆ...
ಫ್ಲಿಪ್ಕಾರ್ಟ್ನ ಜನರಲ್ ಮರ್ಚೆಂಡೈಸ್ ಮತ್ತು ಫರ್ನಿಚರ್, ಗ್ರಾಸರಿ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಟ್ ಮನೀಶ್ ಕುಮಾರ್ ಮಾತನಾಡಿ, ಬಳಕೆದಾರರಿಂದ ಗುಣಮಟ್ಟದ ಆಹಾರ ಮತ್ತು ಗೃಹೋಪಯೋಗಿ ಪೂರೈಕೆಗಳಿಗೆ ಬೇಡಿಕೆ ಹೆಚ್ಚಾಗುವುದರೊಂದಿಗೆ ಗ್ರಾಸರಿ ವಿಭಾಗವು ಅತ್ಯಂತ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ವಿಭಾಗದಲ್ಲಿ ಒಂದೆನಿಸಿದೆ. ಇದೇ ಹಾದಿಯಲ್ಲಿ ನಾವು ದೇಶಾದ್ಯಂತ ನಮ್ಮ ಗ್ರಾಸರಿ ಕಾರ್ಯಾಚರಣೆಗಳಿಗೆ ಹೂಡಿಕೆ ಪ್ರಮಾಣವನ್ನು ಹೆಚ್ಚು ಮಾಡಿದ್ದೇವೆ. ನಮ್ಮ ಪರಿಸರ ವ್ಯವಸ್ಥೆಯ ಪಾಲುದಾರಿಕೆಗಳನ್ನು ಮತ್ತಷ್ಟು ಬಲಗೊಳಿಸಿದ್ದೇವೆ. ಇದರ ಮೂಲಕ ವಿಸ್ತಾರವಾದ ಉತ್ಪನ್ನಗಳ ಆಯ್ಕೆ, ಹೇರಳವಾದ ಸಪ್ಲೈ ಚೇನ್ ಮತ್ತು ಸುಲಲಿತ ಇನ್-ಆ್ಯಪ್ ಅನುಭವಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದರು.
ಕಳೆದೊಂದು ವರ್ಷದಲ್ಲಿ ನಾವು 2ನೇ ಶ್ರೇಣಿಯ ನಗರಗಳಲ್ಲಿ ಆನ್‌ಲೈನ್ ಮೂಲಕ ದಿನಸಿಗೆ ಬೇಡಿಕೆ ಹೆಚ್ಚಾಗಿರುವುದನ್ನು ಕಂಡಿದ್ದೇವೆ. ಮನೆಯಲ್ಲೇ ಇದ್ದುಕೊಂಡು ಗ್ರಾಹಕರು ಸಂಪರ್ಕರಹಿತವಾದ ಶಾಪಿಂಗ್ಗೆ ಆದ್ಯತೆ ನೀಡುತ್ತಿರುವುದು ಹೆಚ್ಚಾಗಿದೆ. ಇದೇ ಟ್ರೆಂಡ್ ಇನ್ನೂ ಮುಂದುವರಿಯಬಹುದು ಎಂದು ನಾವು ಭಾವಿಸಿದ್ದೇವೆ ಮತ್ತು ಭಾರತದಲ್ಲಿ ಇ-ಗ್ರಾಸರಿ ವಿಭಾಗ ಸದೃಢವಾಗಿ ಬೆಳೆಯಲು ಅವಕಾಶ ಸಿಕ್ಕಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಫ್ಲಿಪ್ಕಾರ್ಟ್ 200ಕ್ಕೂ ಹೆಚ್ಚು ವಿಭಾಗಗಗಳಲ್ಲಿ 7000ಕ್ಕೂ ಅಧಿಕ ಗ್ರಾಸರಿ ಉತ್ಪನ್ನಗಳನ್ನು ಹೊಂದಿದೆ. ಗೃಹೋಪಯೋಗಿ ಪೂರೈಕೆಗಳು, ಸ್ಟಾಪಲ್ಸ್, ಅಟ್ಟಾ, ದಾಲ್, ಖಾದ್ಯತೈಲ, ತುಪ್ಪ, ಸ್ನ್ಯಾಕ್ಸ್ & ಬೆವರೇಜಸ್, ಕಾನ್ಫೆಕ್ಷನರಿ, ಪರ್ಸನಲ್ ಕೇರ್, ಡೈರಿ & ಮೊಟ್ಟೆ ಸೇರಿದಂತೆ ಇನ್ನೂ ಅನೇಕ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದೆ.