ಕರ್ನಾಟಕ

karnataka

ಅಮೆಜಾನ್​ನಲ್ಲಿ ಜನಾಂಗೀಯ ತಾರತಮ್ಯ, ಲೈಂಗಿಕ ಕಿರುಕುಳ: ಐವರು ಮಹಿಳೆಯರ ದೂರು

ಮಹಿಳೆಯರು ತಮ್ಮ 20ರ ದಶಕದ ಆರಂಭದಿಂದ 60ರ ದಶಕದ ಮಧ್ಯಭಾಗದಲ್ಲಿ ಅಮೆರಿಕದ ನಾನಾ ಜಿಲ್ಲಾ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಮೊಕದ್ದಮೆಯಲ್ಲಿ 'ಬಿಳಿಯ ವ್ಯವಸ್ಥಾಪಕರು' ಪ್ರತೀಕಾರ ತೀರಿಸಿಕೊಂಡರು ಎಂದು ಆರೋಪಿಸಿದ್ದಾರೆ. ಜನಾಂಗ, ಲಿಂಗ ಅಥವಾ ಲೈಂಗಿಕ ಕಿರುಕುಳ ಅಥವಾ ತಾರತಮ್ಯದ ಬಗ್ಗೆ ದೂರು ನೀಡಿದ್ದು ರೀಕೋಡ್ ವರದಿ ಮಾಡಿದೆ.

By

Published : May 20, 2021, 3:31 PM IST

Published : May 20, 2021, 3:31 PM IST

Amazon
Amazon

ಸ್ಯಾನ್ ಫ್ರಾನ್ಸಿಸ್ಕೋ: ಇ-ಕಾಮರ್ಸ್ ದೈತ್ಯದಲ್ಲಿ ಕಾರ್ಪೊರೇಟ್ ಕಾರ್ಯ ಅಥವಾ ಗೋದಾಮಿನ ನಿರ್ವಹಣೆಯಲ್ಲಿ ಕೆಲಸ ಮಾಡಿದ ಐವರು ಮಹಿಳೆಯರು ಸಲ್ಲಿಸಿದ ಪ್ರತ್ಯೇಕ ತಾರತಮ್ಯ ಮತ್ತು ಪ್ರತೀಕಾರದ ಮೊಕದ್ದಮೆಗಳಿಂದ ಅಮೆಜಾನ್‌ಗೆ ಹೊಡೆತ ಬಿದ್ದಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಮಹಿಳೆಯರು ತಮ್ಮ 20ರ ದಶಕದ ಆರಂಭದಿಂದ 60ರ ದಶಕದ ಮಧ್ಯಭಾಗದಲ್ಲಿ ಅಮೆರಿಕದ ನಾನಾ ಜಿಲ್ಲಾ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಮೊಕದ್ದಮೆಯಲ್ಲಿ 'ಬಿಳಿಯ ವ್ಯವಸ್ಥಾಪಕರು' ಪ್ರತೀಕಾರ ತೀರಿಸಿಕೊಂಡರು ಎಂದು ಆರೋಪಿಸಿದ್ದಾರೆ. ಜನಾಂಗ, ಲಿಂಗ ಅಥವಾ ಲೈಂಗಿಕ ಕಿರುಕುಳ ಅಥವಾ ತಾರತಮ್ಯದ ಬಗ್ಗೆ ದೂರು ನೀಡಿದ್ದು ರೀಕೋಡ್ ವರದಿ ಮಾಡಿದೆ.

ಓದಿ: ಕೊರೊನಾ ವೈರಸ್​, ಲಸಿಕೆ ಸಂಬಂಧಿತ ಪ್ರಕಟಣೆ ದೇಶಾದ್ಯಂತ ವಿಸ್ತರಿಸಿದ ಫೇಸ್​​ಬುಕ್​!

ಮಹಿಳೆಯರಲ್ಲಿ ಮೂವರು ಇನ್ನೂ ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಇಬ್ಬರು ಕಂಪನಿ ತೊರೆದಿದ್ದಾರೆ.

ಅಮೆಜಾನ್‌ನ ಎಲ್ಲಾ ಹಂತದ ಮಹಿಳೆಯರು ಮತ್ತು ಉದ್ಯೋಗಿಗಳು ಕಿರುಕುಳ ಮತ್ತು ತಾರತಮ್ಯದ ಬಗ್ಗೆ ತಮ್ಮ ದೂರುಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎಂದು ವಿಗ್ಡೋರ್ ಎಲ್‌ಎಲ್‌ಪಿ ಪಾಲುದಾರರಾದ ಲಾರೆನ್ಸ್ ಎಂ. ಪಿಯರ್ಸನ್ ಮತ್ತು ಷಾರ್ಲೆಟ್ ನ್ಯೂಮನಾ ಬ್ಲ್ಯಾಕ್ ಅಮೆಜಾನ್ ವ್ಯವಸ್ಥಾಪಕರನ್ನು ಪ್ರತಿನಿಧಿಸುವ ಜೀನ್ ಎಂ. ಕ್ರಿಸ್ಟೇನ್ಸೆನ್ ಹೇಳಿದ್ದಾರೆ.

ABOUT THE AUTHOR

...view details