ಕರ್ನಾಟಕ

karnataka

ETV Bharat / business

ಎಲ್ಐಸಿಯ ಐಪಿಒ ವ್ಯವಹಾರಿಕ ಸಲಹೆಗೆ ಬಿಡ್​ ಆಹ್ವಾನಿಸಿದ ವಿತ್ತ ಸಚಿವಾಲಯ

ಬಿಡ್​ ಸಲ್ಲಿಕೆಗೆ ಐಪಿಒ/ಸ್ಟಾಟರ್ಜಿಕ್​ ಹೂಡಿಕೆ/ಸ್ಟಾಟರ್ಜಿಕ್​ ಮಾರಾಟ/ಎಂ&ಎ ಚಟುವಟಿಕೆ/ಖಾಸಗಿ ಷೇರು ಹೂಡಿಕೆ ವಹಿವಾಟಿಗೆ ಸಲಹಾ ಸೇವೆಗಳನ್ನು ಒದಗಿಸಿದ್ದ ಕನಿಷ್ಠ 3 ವರ್ಷಗಳ ಅನುಭವವಿರಬೇಕು.

LIC IPO
ಎಲ್ಐಸಿ ಐಪಿಒ

By

Published : Jun 19, 2020, 5:13 PM IST

ನವದೆಹಲಿ: ಎಲ್ಐಸಿ ಹೂಡಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಹಣಕಾಸು ಸಚಿವಾಲಯವು ಸಲಹಾ ಸಂಸ್ಥೆ, ಹೂಡಿಕೆ ಬ್ಯಾಂಕರ್​ ಮತ್ತು ಹಣಕಾಸು ಸಂಸ್ಥೆಗಳಿಂದ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಸ್ತಾಪದ ಬಗ್ಗೆ ಸಲಹೆ ನೀಡಲು ಬಿಡ್​ ಆಹ್ವಾನಿಸಿದೆ.

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಲ್‌ಐಸಿಐ) ಆರಂಭಿಕ ಸಾರ್ವಜನಿಕ ಕೊಡುಗೆಗೆ ಪೂರ್ವಸಿದ್ಧತಾ ಪ್ರಕ್ರಿಯೆಗಳಲ್ಲಿ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಗೆ (ಡಿಐಪಿಎಎಂ) ನೆರವಾಗಲು, ಇಬ್ಬರು ಪೂರ್ವ ಐಪಿಒ ವಹಿವಾಟು ಸಲಹೆಗಾರರನ್ನು ಸೇರಿಸಿಕೊಳ್ಳಲು ಸರ್ಕಾರ ಪ್ರಸ್ತಾಪಿಸಿದೆ.

ಪೂರ್ವಸಿದ್ಧತಾ ಪ್ರಕ್ರಿಯೆಗಳಲ್ಲಿ ಡಿಐಪಿಎಎಂ ಪ್ರಕ್ರಿಯೆಗೆ ನೆರವಾಗಲು ಹೆಸರಾಂತ ವೃತ್ತಿಪರ ಸಲಹಾ ಸಂಸ್ಥೆ/ಹೂಡಿಕೆ ಬ್ಯಾಂಕರ್​/ವ್ಯಾಪಾರಿ ಬ್ಯಾಂಕರ್​/ ಹಣಕಾಸು ಸಂಸ್ಥೆ/ ಬ್ಯಾಂಕ್​ಗಳಿಂದ ಎರಡು ಪೂರ್ವ ಐಪಿಒ ವಹಿವಾಟು ಸಲಹೆಗಾರರನ್ನಾಗಿ ತೊಡಗಿಸಿಕೊಳ್ಳಲು ಸರ್ಕಾರ ಪ್ರಸ್ತಾಪಿಸಿದೆ. ಐಪಿಒ ಪೂರ್ವ ವಹಿವಾಟು ಸಲಹೆಗಾರರನ್ನು ತೊಡಗಿಸಿಕೊಳ್ಳಲು ಹಣಕಾಸು ಸಚಿವಾಲಯವು ವಿನಂತಿಯ ಪ್ರಸ್ತಾವನೆಯಲ್ಲಿ (ಆರ್‌ಎಫ್‌ಪಿ) ಹೇಳಿದೆ.

ಸಲಹೆಗಾರರು ತಮ್ಮ ಬಿಡ್‌ಗಳನ್ನು ಶುಕ್ರವಾರದಿಂದ 2020ರ ಜುಲೈ 13ರವರೆಗೆ ಸಲ್ಲಿಸಬಹುದು. ಜುಲೈ 14ರಂದು ಡಿಐಪಿಎಎಂನ ಬಿಡ್‌ ತೆರೆದುಕೊಳ್ಳಲಿದೆ.

ಬಿಡ್​ ಸಲ್ಲಿಕೆಗೆ ಐಪಿಒ/ಸ್ಟಾಟರ್ಜಿಕ್​ ಹೂಡಿಕೆ/ಸ್ಟಾಟರ್ಜಿಕ್​ ಮಾರಾಟ/ಎಂ&ಎ ಚಟುವಟಿಕೆ/ಖಾಸಗಿ ಷೇರು ಹೂಡಿಕೆ ವಹಿವಾಟಿಗೆ ಸಲಹಾ ಸೇವೆಗಳನ್ನು ಒದಗಿಸಿದ್ದ ಕನಿಷ್ಠ 3 ವರ್ಷಗಳ ಅನುಭವವಿರಬೇಕು.

ABOUT THE AUTHOR

...view details