ಕರ್ನಾಟಕ

karnataka

ETV Bharat / business

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ನಿರ್ಣಾಯಕ ಹಂತ ತಲುಪಿದೆ: ಮುಖೇಶ್ ಅಂಬಾನಿ​ - Pandit Deendayal University Convocation

ಕೋವಿಡ್​-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಒಂದು ನಿರ್ಣಾಯಕ ಹಂತ ಪ್ರವೇಶಿಸಿದೆ. ಈ ಹಂತದಲ್ಲಿ ನಮ್ಮ ಕಾವಲುಗಾರರನ್ನು ನಿರಾಸೆಗೊಳಿಸಲು ನಾವು ಶಕ್ತರಾಗಿಲ್ಲ. ಭಾರತವು ಪುರಾತನ ಭೂಮಿಯಾಗಿದ್ದು, ಈ ಹಿಂದೆ ಅನೇಕ ಪ್ರತಿಕೂಲಗಳನ್ನು ಎದುರಿಸಿದೆ. ಪ್ರತಿ ಬಾರಿಯೂ ಸಂಕಷ್ಟ ಎದುರಿಸಿದಾಗ ಹೆಚ್ಚು ಬಲಶಾಲಿಯಾಗಿ ಹೊರಹೊಮ್ಮಿದ್ದೇವೆ ಎಂದು ಮುಖೇಶ್ ಅಂಬಾನಿ ಹೇಳಿದರು.

Modi Ambani
ಮೋದಿ ಅಂಬಾನಿ

By

Published : Nov 21, 2020, 5:45 PM IST

ಮುಂಬೈ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತವು ನಿರ್ಣಾಯಕ ಹಂತ ಪ್ರವೇಶಿಸಿದೆ. ಈ ಹಂತದಲ್ಲಿ ಭದ್ರತಾಗಾರರನ್ನು ನಿರಾಸೆಗೊಳಿಸಲು ಸಾಧ್ಯವಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.

ಸರ್ಕಾರ ಕೈಗೊಂಡ ದಿಟ್ಟ ಸುಧಾರಣೆಗಳು ಮುಂದಿನ ವರ್ಷಗಳಲ್ಲಿ ಶೀಘ್ರವೇ ಚೇತರಿಕೆ ಹಾಗೂ ತ್ವರಿತ ಪ್ರಗತಿಗೆ ಕಾರಣವಾಗಲಿವೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗಾಂಧಿ ನಗರದ ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್​-19 ಪ್ರಕರಣಗಳ ಮಧ್ಯೆ ಈ ಹೇಳಿಕೆ ಬಂದಿದ್ದು, ಅಹಮದಾಬಾದ್‌ನಂತಹ ವಾಣಿಜ್ಯ ನಗರ ಮತ್ತು ರಾಷ್ಟ್ರ ರಾಜಧಾನಿಯ ಕೆಲವು ಭಾಗದಲ್ಲಿ ನಿರ್ಬಂಧ ಸಾರ್ವಜನಿಕರ ಚಟುವಟಿಗಳಿಗೆ ಕೆಲ ನಿರ್ಬಂಧ ಹೇರಲು ಅಧಿಕಾರಿಗಳು ಮುಂದಾಗಿದ್ದಾರೆ.

ಕೋವಿಡ್​-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಒಂದು ನಿರ್ಣಾಯಕ ಹಂತ ಪ್ರವೇಶಿಸಿದೆ. ಈ ಹಂತದಲ್ಲಿ ನಮ್ಮ ಕಾವಲುಗಾರರನ್ನು ನಿರಾಸೆಗೊಳಿಸಲು ನಾವು ಶಕ್ತರಾಗಿಲ್ಲ. ಭಾರತವು ಪುರಾತನ ಭೂಮಿಯಾಗಿದ್ದು, ಈ ಹಿಂದೆ ಅನೇಕ ಪ್ರತಿಕೂಲಗಳನ್ನು ಎದುರಿಸಿದೆ. ಪ್ರತಿ ಬಾರಿಯೂ ಸಂಕಷ್ಟ ಎದುರಿಸಿದಾಗ ಹೆಚ್ಚು ಬಲಶಾಲಿಯಾಗಿ ಹೊರಹೊಮ್ಮಿದೆ. ಸ್ಥಿತಿಸ್ಥಾಪಕತ್ವದ ಗುಣವು ನಮ್ಮ ಜನರಲ್ಲಿ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ ಎಂದರು.

ಕೋವಿಡ್​ ನಂತರದ ಯುಗದಲ್ಲಿ ಸ್ಫೋಟಕ ಮತ್ತು ಅತ್ಯಂತ ಗಮನಾರ್ಹ ಬೆಳವಣಿಗೆಯನ್ನು ಎದುರು ನೋಡುತ್ತಿದ್ದೇವೆ. ಪದವೀಧರರಾದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಭರವಸೆ ಮತ್ತು ಆತ್ಮವಿಶ್ವಾಸದಿಂದ ಹೊರಬರಲು ಕರೆ ನೀಡಿದರು.

ಮುಂದಿನ ಬೆಳವಣಿಗೆಯು ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತದೆ. ಮುಂದಿನ ಎರಡು ದಶಕಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಮುಖೇಶ್ ಅಂಬಾನಿ ಅಭಿಪ್ರಾಯಪಟ್ಟರು.

ABOUT THE AUTHOR

...view details