ಕರ್ನಾಟಕ

karnataka

ETV Bharat / business

ಚೀನಾದ 'ಪಬ್ಜಿ'ಗೆ 'ಫೌಜ್' ಟಕ್ಕರ್​: ಜಾಗತಿಕ ಮಟ್ಟಕ್ಕೇರಿದ ಇಂಡಿಯಾ ಮೇಡ್​ 'FAU-G' ವಿಡಿಯೋ ಗೇಮ್​! - ಫೌಜಿ ಗೇಮ್​ ಲಾಂಚ್

ಚೀನಾ ಮೂಲದ ಪಬ್ಜಿಗೆ ಪರ್ಯಾಯವಾಗಿ ಆ್ಯಕ್ಷನ್ ಗೇಮ್ 'ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್' ಅಥವಾ ಫೌಜಿಯನ್ನು ಭಾರತದ 72ನೇ ಗಣರಾಜ್ಯೋತ್ಸವದಂದು ಬಿಡುಗಡೆ ಮಾಡಲಾಯಿತು. ಆದರೆ, ಇದು ಆಂಡ್ರಾಯ್ಡ್ ಸಾಧನಗಳಿಗೆ ಮಾತ್ರ ಲಭ್ಯವಿದೆ. ಗೇಮ್​ನ ಐಒಎಸ್ ಆವೃತ್ತಿ ಇನ್ನೂ ಬಿಡುಗಡೆಯಾಗಿಲ್ಲ. ಇದು ಐಒಎಸ್ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬುದರ ಕುರಿತು ಪ್ರಸ್ತುತ ಯಾವುದೇ ಸ್ಪಷ್ಟನೆ ಇಲ್ಲ.

FAU-G
FAU-G

By

Published : Feb 6, 2021, 6:31 PM IST

ನವದೆಹಲಿ:ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ದೇಶೀಯ ವಾರ್ ಗೇಮ್ ಫೌಜಿ ಜಾಗತಿಕ ಮಟ್ಟಕ್ಕೆ ಸಾಗಿದೆ. ಈಗ ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಿಶ್ವಾದ್ಯಂತ ಡೌನ್ಲೋಡ್​ ಮಾಡಲು ಲಭ್ಯವಾಗಲಿದೆ.

ಚೀನಾ ಮೂಲದ ಪಬ್ಜಿಗೆ ಪರ್ಯಾಯವಾಗಿ ಆ್ಯಕ್ಷನ್ ಗೇಮ್ 'ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್' ಅಥವಾ ಫೌಜಿಯನ್ನು ಭಾರತದ 72ನೇ ಗಣರಾಜ್ಯೋತ್ಸವದಂದು ಬಿಡುಗಡೆ ಮಾಡಲಾಯಿತು. ಆದರೆ, ಇದು ಆಂಡ್ರಾಯ್ಡ್ ಸಾಧನಗಳಿಗೆ ಮಾತ್ರ ಲಭ್ಯವಿದೆ. ಗೇಮ್​ನ ಐಒಎಸ್ ಆವೃತ್ತಿ ಇನ್ನೂ ಬಿಡುಗಡೆಯಾಗಿಲ್ಲ. ಇದು ಐಒಎಸ್ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬುದರ ಕುರಿತು ಪ್ರಸ್ತುತ ಯಾವುದೇ ಸ್ಪಷ್ಟನೆ ಇಲ್ಲ.

ಬೆಂಗಳೂರು ಮೂಲದ ಎನ್‌ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದ ಫೌಜಿ ಈಗ ವಿಶ್ವದಾದ್ಯಂತ ಲಭ್ಯವಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಿದ ಫಿಯರ್ ಫ್ರೀ​ ಫೌಜಿ ಜಾಗತಿಕವಾಗಿ ಲಗ್ಗೆಯಿಟ್ಟು, ಈಗ ವಿಶ್ವದಾದ್ಯಂತ ಲಭ್ಯವಿದೆ ಎಂದು ಡೆವಲಪರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 15 ರಾಷ್ಟ್ರಗಳಿಗೆ ಕೊರೊನಾ ಲಸಿಕೆ ಪೂರೈಕೆ, ಇನ್ನೂ 25 ದೇಶಗಳಿಂದ ಬೇಡಿಕೆ: ಜೈ ಶಂಕರ್

ಇದರೊಂದಿಗೆ ಮೊಬೈಲ್ ಸ್ಮಾರ್ಟ್‌ಫೋನ್ ಗೇಮ್ ಈಗ ಭಾರತದ ಹೊರಗಿನ ಜನರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್ಲೋಡ್​ ಮಾಡಲು ಲಭ್ಯವಿರುತ್ತದೆ. ಅವರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್​ ಅನ್ನು ಡೌನ್‌ಲೋಡ್ ಮಾಡಬಹುದು.

ಭದ್ರತಾ ನಿಯಮ ಉಲ್ಲಂಘಿಸಿದ ಆಪಾದನೆಯಡಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲದ ಜನಪ್ರಿಯ ವಿಡಿಯೋ ಗೇಮಿಂಗ್ ಆ್ಯಪ್​ ಪಬ್ಜಿಗೆ ಸೆಡ್ಡು ಹೊಡೆಯಲು ಬಾಲಿವುಡ್​ ನಟ ಅಕ್ಷಯ್ ಕುಮಾರ್ ಅವರ ತಂಡ ಅಭಿವೃದ್ಧಿಪಡಿಸಿದೆ.

ABOUT THE AUTHOR

...view details