ಬೀಜಿಂಗ್: 2019ರಲ್ಲಿ ಬಿಡುಗಡೆಯಾದ ಹುವಾಯ್ ಮೇಟ್ ಎಕ್ಸ್ ಫೋಲ್ಡಬಲ್ ಫೋನ್‌ನ ಮುಂದಿನ ಸರಣಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹುವಾಯ್ ದೃಢಪಡಿಸಿದೆ.
ದುರದೃಷ್ಟವಶಾತ್ ಮೇಟ್ ಎಕ್ಸ್ ಪೋಲ್ಡೆಬಲ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಉತ್ಪನ್ನದಷ್ಟು ಭರವಸೆ ಮತ್ತು ಜನಪ್ರಿಯತೆ ಪಡೆಯಲಿಲ್ಲ. ಹೊಸ ಹ್ಯಾಂಡ್‌ಸೆಟ್ ಅನ್ನು ಹುವಾಯ್ 'ಮೇಟ್ ಎಕ್ಸ್ 2' ಎಂದು ಹೆಸರಿಸಿದ್ದು, ಬಿಡುಗಡೆ ದಿನಾಂಕವನ್ನು ಫೆಬ್ರವರಿ 22ಕ್ಕೆ ನಿಗದಿಪಡಿಸಿದೆ.
ಮೇಟ್ ಎಕ್ಸ್ 2 ಸ್ಯಾಮ್‌ಸಂಗ್ ಗ್ಯಾಲಕ್ಸಿ ಪೋಲ್ಡೆಬಲ್ ಮಾದರಿಯ ವಿನ್ಯಾಸ ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಮಾರುಕಟ್ಟೆಗೆ ಬಂದ ಮೇಲೆ ಅದರ ಫೀಚರ್ ತಿಳಿದುಬರಲಿದೆ.
ಮಡಚಬಹುದಾದ ಸ್ಮಾರ್ಟ್ಫೋನ್ನಲ್ಲಿ ವಿಶಾಲ ಪರದೆಯ ಗಾತ್ರ, ಹೆಚ್ಚು ಶಕ್ತಿಶಾಲಿ ಪ್ರೊಸೆಸರ್ ಕಿರಿನ್ 9000, ಅಪ್‌ಗ್ರೇಡ್ ಕ್ಯಾಮರಾ ಮತ್ತು ಸ್ಟೈಲಸ್ ವಿಶೇಷತೆ ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಫೋನ್ ಕಳೆದ ವರ್ಷವೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚೀನಾ ಮೊಬೈಲ್ ತಯಾರಕರ ವಿರುದ್ಧ ಅಮೆರಿಕ ನಿರ್ಬಂಧಗಳನ್ನು ಹೇರಿದ ನಂತರ ವಿಳಂಬವಾಯಿತು ಎಂದು ವರದಿ ತಿಳಿಸಿದೆ.