ನವದೆಹಲಿ:ಕೇಂದ್ರ ಸರ್ಕಾರ ದೇಶೀಯ ವಾಹನ ತಯಾರಕರನ್ನು ಇ- ವಾಹನಗಳತ್ತ ಮುಖಮಾಡುವಂತೆ ಪ್ರೋತ್ಸಾಹ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡ ರಿಸಾಲಾ ಎಲೆಕ್ಟ್ರಿಕ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ಎವೊಲೆಟ್ ಶ್ರೇಣಿಯ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ.
ರಿಸಾಲಾ ಪರಿಚಯಿಸಿದ ನೂತನ ಶ್ರೇಣಿಯಲ್ಲಿ ಪೊಲೊ, ಡರ್ಬಿ, ಪೋನಿ ಮತ್ತು ವಾರಿಯರ್ ಹೆಸರಿನಲ್ಲಿ ರಸ್ತೆಗೆ ಇಳಿದಿವೆ. ಡರ್ಬಿ ಸ್ಕೂಟರ್ ಜಲ ನಿರೋಧಕ ಬಿಎಲ್‌ಡಿಸಿ ಮೋಟರ್ನೊಂದಿಗೆ ಎರಡು ಮಾಡೆಲ್ಗಳಲ್ಲಿ ಬಂದಿದೆ. ಡರ್ಬಿ ಇಝೆಡ್ 60 ವಿ/30 ಎಚ್ನ ವಿಆರ್‌ಎಲ್‌ಎ ಬ್ಯಾಟರಿ ಮತ್ತು ಡರ್ಬಿ ಕ್ಲಾಸಿಕ್ 60 ವಿ/30 ಎಎಚ್ನ ಲೀಥಿಯಂ-ಅಯಾನ್ ಬ್ಯಾಟರಿಹೊಂದಿದೆ. ಈ ಸ್ಕೂಟರ್‌ಗಳ ಬೆಲೆಯು ₹ 39,000 ಆರಂಭವಾಗಿ ಗರಿಷ್ಠ ₹ 60,000 ವರೆಗೂ ಲಭ್ಯವಿದೆ.
ಪೋನಿ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಎರಡು ಮಾಡೆಲ್ಗಳಲ್ಲಿ ಲಭ್ಯವಿದೆ. ಪೊಲೊ ಪೋನಿ ಇಝೆಡ್ 48 ವಿ/24 ಎಎಚ್ನ ವಿಆರ್ಎಲ್ ಬ್ಯಾಟರಿ ಮತ್ತು ಪೊಲೊ ಪೋನಿ ಕ್ಲಾಸಿಕ್ 48ವಿ/24 ಎಚ್ ಲೀಥಿಯಂ- ಅಯಾನ್ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಝೆಡ್ ದರ ₹ 39,499 ಇದ್ದರೆ ಪೋನಿ ಕ್ಲಾಸಿಕ್ ₹ 49,499ಯಲ್ಲಿ ವಾಹನ ಪ್ರಿಯರಿಗೆ ಸಿಗಲಿದೆ.
ಪೊಲೊ ಪೋನಿ ಶ್ರೇಣಿಯ ಸ್ಕೂಟರ್ಗಳು ಒಂದು ಬಾರಿ ಬ್ಯಾಟರಿ ಚಾರ್ಜ್ ಮಾಡಿದರೆ ಗಂಟೆಗೆ 25 ಕಿ.ಮೀ. ವೇಗದಲ್ಲಿ 65 ಕಿ.ಮೀ. ದೂರ ಕ್ರಮಿಸಬಹುದು. ಪೊಲೊ ಶ್ರೇಣಿಯ ಇಝೆಡ್ಗಳು ಕೂಡ ಇದೇ ಸಾಮರ್ಥ್ಯವನ್ನು ಹೊಂದಿದೆ.