ಕರ್ನಾಟಕ

karnataka

ETV Bharat / business

ಪ್ರತಿ ಉದ್ಯಮಿ ಧೀರೂಭಾಯಿ, ಬಿಲ್​ ಗೇಟ್ಸ್​ ಆಗಬಹುದು... ಹೇಗೆ ಅಂತ ಮುಖೇಶ್ ಅಂಬಾನಿ, ನಾದೆಲ್ಲಾ ಹೇಳ್ತಾರೆ ನೋಡಿ!

ಭಾರತದಲ್ಲಿನ ಪ್ರತಿಯೊಬ್ಬ ಉದ್ಯಮಿಯೂ ಧೀರೂಭಾಯಿ ಅಂಬಾನಿ ಅಥವಾ ಬಿಲ್ ಗೇಟ್ಸ್​ ಆಗುವಂತಹ ಸಂಭಾವ್ಯ ಸಾಮರ್ಥ್ಯ ಹೊಂದಿದ್ದಾನೆ ಎನ್ನುತ್ತಾ ಮುಖೇಶ್ ಅಂಬಾನಿ, ಎಂಟರ್​ಪ್ರಿನುವರ್​ ಆಗಬೇಕು ಎಂಬ ಕನಸುಗಾರರಿಗೆ ಉತ್ತೇಜನ ತುಂಬಿದರು. ಮತ್ತೊಂದೆಡೆ, ಮೈಕ್ರೋಸಾಫ್ಟ್​ ಧ್ಯೇಯವು ಒಂದು ಸಂಸ್ಥೆಯು ಸ್ವತಂತ್ರವಾಗಲು ಸಹಾಯ ಮಾಡುವುದೇ ಹೊರತೂ ಇನ್ನೊಂದರ ಮೇಲೆ ಅವಲಂಬಿತವಲ್ಲ ಎಂದು ಸತ್ಯ ನಾದೆಲ್ಲಾ ತಾವೂ ಬೆಂಬಲ ನೀಡುವುದಾಗಿ ಫ್ಯೂಚರ್ ಡಿಕೋಡೆಡ್​​ ಸಮ್ಮೇಳನದಲ್ಲಿ ಘೋಷಿಸಿದರು.

Mukesh Ambani , Satya Nadella
ಮುಖೇಶ್ ಅಂಬಾನಿ, ಸತ್ಯ ನಾದೆಲ್ಲಾ

By

Published : Feb 24, 2020, 11:44 PM IST

ಮುಂಬೈ: 'ಅಭಿನಂದನೆಗಳು ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ, ಜಾಗತಿಕ ಅಗ್ರ ಸಂಸ್ಥೆಯೊಂದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದಕ್ಕೆ..'

ಹೀಗೆ ಹೇಳಿದ್ದು, ರಿಲಿಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (ಆರ್​ಐಎಲ್​) ಮುಖ್ಯಸ್ಥ ಮುಖೇಶ್ ಅಂಬಾನಿ. ಜಿಯೋ ಮತ್ತು ಮೈಕ್ರೋಸಾಫ್ಟ್​ ನಡುವೆ ದಶಕದ ಜಂಟಿ ಉದ್ಯಮಕ್ಕೆ ವೇದಿಕೆ ಆಗಿದ್ದು ಫ್ಯೂಚರ್ ಡಿಕೋಡೆಡ್​​ ಸಮ್ಮಿಟ್​. ದೇಶದ ಉದ್ಯಮಿ ಗಾತ್ರವನ್ನು ಹೆಚ್ಚಿಸುವ ಇರಾದೆಯೊಂದಿಗೆ ದಶಕದ ಒಪ್ಪಂದಕ್ಕೆ ಉಭಯ ಕಂಪನಿಗಳು ಮುಂದಾಗಿವೆ.

ಭಾರತದಲ್ಲಿನ ಪ್ರತಿಯೊಬ್ಬ ಉದ್ಯಮಿಯೂ ಧೀರೂಭಾಯಿ ಅಂಬಾನಿ ಅಥವಾ ಬಿಲ್ ಗೇಟ್ಸ್​ ಆಗುವಂತಹ ಸಂಭಾವ್ಯ ಸಾಮರ್ಥ್ಯ ಹೊಂದಿದ್ದಾನೆ ಎನ್ನುತ್ತಾ ಮುಖೇಶ್ ಅಂಬಾನಿ, ಎಂಟರ್ಪ್ರಿನುವರ್​​ ಆಗಬೇಕು ಎಂಬ ಕನಸುಗಾರರಿಗೆ ಉತ್ತೇಜನ ತುಂಬಿದರು.

ಭಾರತ ಕಳೆದ ಎರಡು ದಶಕದಲ್ಲಿ ಮಹತ್ತರವಾಗಿ ರೂಪಾಂತರಗೊಂಡಿದೆ. 1990ರ ದಶಕದಲ್ಲಿ 300 ಬಿಲಿಯನ್ ಡಾಲರ್ ಆರ್ಥಿಕತೆ 2020ರ ವೇಳೆಗೆ 3 ಟ್ರಿಲಿಯನ್ ಡಾಲರ್​ ಆರ್ಥಿಕತೆಗೆ ತಲುಪಿದೆ. ಭಾರತ ವಿಶ್ವದ 3ನೇ ಅಗ್ರಗಣ್ಯ ಆರ್ಥಿಕ ರಾಷ್ಟ್ರವಾಗುವ ಹಾದಿಯಲ್ಲಿದೆ ಎಂದು ಆಕಾಂಕ್ಷೆಯ ಮಾತುಗಳನ್ನಾಡಿದರು.

ತಂತ್ರಜ್ಞಾನದ ಬಳಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಮನಸ್ಥಿತಿ ಈಗಾಗಲೇ ಭಾರತದಲ್ಲಿದೆ. ಆದರೆ, ಜಿಯೋ ಮತ್ತು ಮೈಕ್ರೋಸಾಫ್ಟ್ ನಡುವಿನ ಪಾಲುದಾರಿಕೆಯು ಮುಂಬರಲಿರುವ ಸಂಸ್ಥೆಗಳಿಗೆ ತಮ್ಮ ವ್ಯವಹಾರಗಳನ್ನು ಅಳೆಯಲು ಮತ್ತು ಡಿಜಿಟಲ್ ಸಾಧನೆ ಪಡೆಯಲು ನೆರವಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಮೈಕ್ರೋಸಾಫ್ಟ್​ ಧ್ಯೇಯವು ಒಂದು ಸಂಸ್ಥೆಯು ಸ್ವತಂತ್ರವಾಗಲು ಸಹಾಯ ಮಾಡುವುದೇ ಹೊರತು ಇನ್ನೊಂದರ ಮೇಲೆ ಅವಲಂಬಿತವಲ್ಲ. ತಮ್ಮದೇ ಆದ ಕೃತಕ ಬುದ್ಧಿಮತ್ತೆ ಮತ್ತು ಇತರೆ ತಾಂತ್ರಿಕ ಸಾಮರ್ಥ್ಯಗಳ ತಂತ್ರಜ್ಞಾನದ ತೀವ್ರತೆಯನ್ನು ನಿರ್ಮಿಸಿಕೊಡುವುದು ನಮ್ಮ ಆದ್ಯತೆ ಆಗಿರಲಿದೆ ಎಂದು ಮುಖೇಶ್ ಅಂಬಾನಿಯವರ ಉತ್ತೇಜನದ ಮಾತುಗಳಿಗೆ ನಾದೆಲ್ಲಾ, ತಮ್ಮ ತಂತ್ರಜ್ಞಾನದ ಸಹಾಯಸ್ತ ಕುರಿತು ಭರವಸೆ ನೀಡಿದರು.

ಮುಂದಿನ ದಶಕದಲ್ಲಿ ಸಂಸ್ಥೆಗಳು ಹೆಚ್ಚು ಉತ್ಪಾದಕರನ್ನು ನೇಮಿಸಿಕೊಳ್ಳುವ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ತಯಾರಿಸುವಲ್ಲಿ ನಮ್ಮ ಹೂಡಿಕೆ ಇದ್ದೇ ಇರುತ್ತದೆ. ಸಂಪೂರ್ಣ ಟೂಲ್‌ಚೇನ್ ಅನ್ನು ಅದು ನಿರ್ಮಿಸುತ್ತದೆ. ಜನ, ಪ್ರದೇಶ ಮತ್ತು ವಸ್ತುಗಳಲ್ಲಿ ಡಿಜಿಟಲೀಕರಣದ ಬಳಕೆ ಯಥೇಚ್ಛ ಆಗುತ್ತಿರುವುದು ಮುಂದಿನ 10 ವರ್ಷಗಳಲ್ಲಿ ಜಾತ್ಯತೀತ ಪ್ರವೃತ್ತಿ ವ್ಯಾಖ್ಯಾನಿಸುತ್ತದೆ ಎಂಬುವಂತಿದೆ ಎನ್ನುತ್ತಲೇ ಸಮ ಸಮಾಜದ ಆಸೆಯ ಈಡೇರಿಕೆಗೆ ತಂತ್ರಜ್ಞಾನ ಬುನಾದಿ ಆಗಲಿದೆ ಎಂದರು.

ABOUT THE AUTHOR

...view details