ಕರ್ನಾಟಕ

karnataka

ETV Bharat / business

ಇಪಿಎಫ್​ ಕಾಯ್ದೆ ನಿಯಮಗಳು ಖಾಸಗಿ ಭದ್ರತಾ ಸಂಸ್ಥೆಗಳಿಗೂ ಅನ್ವಯಿಸುತ್ತವೆ: ಸುಪ್ರೀಂ - ಖಾಸಗಿ ಭದ್ರತಾ ಸಂಸ್ಥೆಗಳು

ಖಾಸಗಿ ಭದ್ರತಾ ಏಜೆನ್ಸಿಗಳ (ನಿಯಂತ್ರಣ) ಕಾಯ್ದೆ, 2005ರ ನಿಬಂಧನೆಗಳು ಸಂಸ್ಥೆಯು ಭದ್ರತಾ ಸಿಬ್ಬಂದಿಯ ಉದ್ಯೋಗದಾತ ಎಂದು ಸ್ಪಷ್ಟಪಡಿಸುತ್ತದೆ. ಅದರಿಂದ ವೇತನ ನೀಡಲಾಗುತ್ತದೆ ಎಂದು ಹೇಳಿ, ಭದ್ರತಾ ರಕ್ಷಕರನ್ನು ಒದಗಿಸಲು ಮಾತ್ರವೇ ಇದು ಅನುಕೂಲವಾಗಿದೆ ಎಂಬ ಸಂಸ್ಥೆಯ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.

SC
ಎಸ್​ಸಿ

By

Published : Dec 2, 2020, 11:02 PM IST

ನವದೆಹಲಿ:ನೌಕರರ ಭವಿಷ್ಯ ನಿಧಿ ಕಾಯ್ದೆಯ ನಿಬಂಧನೆಗಳು ಗ್ರಾಹಕರಿಗೆ ಸಿಬ್ಬಂದಿ ಸೇವೆ ಒದಗಿಸುವ ಖಾಸಗಿ ಭದ್ರತಾ ಸಂಸ್ಥೆಗಳಿಗೂ ಅನ್ವಯವಾಗುತ್ತವೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ಸೂರ್ಯ ಕಾಂತ್ ಅವರಿದ್ದ ನ್ಯಾಯಪೀಠವು ಕಂಪನಿಯು ತನ್ನ ಗ್ರಾಹಕರಿಗೆ ತರಬೇತಿ ಮತ್ತು ದಕ್ಷ ಭದ್ರತಾ ಸಿಬ್ಬಂದಿ ಒದಗಿಸುವ ಆಧಾರದ ಮೇಲೆ ಬೀಡುವ ವಿಶೇಷ ಮತ್ತು ತಜ್ಞರ ಸೇವೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿತು.

ಖಾಸಗಿ ಭದ್ರತಾ ಏಜೆನ್ಸಿಗಳ (ನಿಯಂತ್ರಣ) ಕಾಯ್ದೆ, 2005ರ ನಿಬಂಧನೆಗಳು ಸಂಸ್ಥೆಯು ಭದ್ರತಾ ಸಿಬ್ಬಂದಿಯ ಉದ್ಯೋಗದಾತ ಎಂದು ಸ್ಪಷ್ಟಪಡಿಸುತ್ತದೆ. ಅದರಿಂದ ವೇತನ ನೀಡಲಾಗುತ್ತದೆ ಎಂದು ಹೇಳಿ, ಭದ್ರತಾ ರಕ್ಷಕರನ್ನು ಒದಗಿಸಲು ಮಾತ್ರವೇ ಇದು ಅನುಕೂಲವಾಗಿದೆ ಎಂಬ ಸಂಸ್ಥೆಯ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.

"ಕ್ಲೈಂಟ್ ಮೇಲ್ಮನವಿಗೆ ಒಪ್ಪಂದದಡಿಯಲ್ಲಿ ಹಣ ಪಾವತಿಸುತ್ತಾರೆ. ಮೇಲ್ಮನವಿ ಅಂತಹ ಭದ್ರತಾ ಸಿಬ್ಬಂದಿಯ ವೇತನ ಒಪ್ಪಂದದ ಮೊತ್ತದಿಂದ ಪಾವತಿಸುತ್ತಾನೆ. ಅದು ಗ್ರಾಹಕನನ್ನು ಭದ್ರತಾ ಸಿಬ್ಬಂದಿಯ ಉದ್ಯೋಗದಾತರನ್ನಾಗಿ ಮಾಡುವುದಿಲ್ಲ ಅಥವಾ ಭದ್ರತೆಯನ್ನು ಮಾಡುವುದಿಲ್ಲ. ಕಾವಲುಗಾರರು ಕ್ಲೈಂಟ್​ನ ನೌಕರರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ABOUT THE AUTHOR

...view details