ಕರ್ನಾಟಕ

karnataka

ETV Bharat / business

ನಾವೇನೂ ಗುಲಾಮರಲ್ಲ, ಕೆಲವೇ ವಾರಗಳಲ್ಲಿ ಏರ್​ ಇಂಡಿಯಾ ಖಾಸಗೀಕರಣ: ವಿಮಾನಯಾನ ಸಚಿವ

ಏರ್ ಇಂಡಿಯಾ ಪ್ರಥಮ ದರ್ಜೆಯ ವಿಮಾನಯಾನ ಸಂಸ್ಥೆಯಾಗಿದ್ದು, ಖಾಸಗೀಕರಣ ಮಾಡುವುದರ ಬಗ್ಗೆ ಭಿನ್ನ ಅಭಿಪ್ರಾಯಗಳಿಲ್ಲ. ನಾವು ಯಾವುದೇ ಕಾಲಮಿತಿಯಲ್ಲಿ ಇರಲು ನಾವೇನು ಗುಲಾಮರಲ್ಲ. ನಾವು ಆದಷ್ಟು ಸಾಧ್ಯವೋ ಅಷ್ಟು ವೇಗವಾಗಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ವಿಮಾನಯಾನ ಸಚಿವ ಹರ್ದೀಪ್ ಪುರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Air India
ಏರ್​ ಇಂಡಿಯಾ

By

Published : Dec 31, 2019, 5:38 PM IST

ನವದೆಹಲಿ: ಇನ್ನೂ ಕೆಲವೇ ವಾರಗಳಲ್ಲಿ ಏರ್​ ಇಂಡಿಯಾ ಖಾಸಗಿಕರಣದ ಭಾಗವಾಗಿ ತನ್ನ ಪ್ರಥಮ ಹೆಜ್ಜೆ ಇರಿಸಲಿದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಪುರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏರ್ ಇಂಡಿಯಾ ಖಾಸಗೀಕರಣಗೊಳಿಸಲು ಸಚಿವಾಲಯದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಸಚಿವಾಲಯ ವಾಯುಯಾನ ಸಂಬಂಧಿತ ಸಚಿವಾಲಯ ಆಗಿರುವುದರಿಂದ ಹೂಡಿಕೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಏರ್ ಇಂಡಿಯಾ ಪ್ರಥಮ ದರ್ಜೆಯ ವಿಮಾನಯಾನ ಸಂಸ್ಥೆಯಾಗಿದ್ದು, ಖಾಸಗೀಕರಣ ಮಾಡುವುದರ ಬಗ್ಗೆ ಭಿನ್ನ ಅಭಿಪ್ರಾಯಗಳಿಲ್ಲ. ನಾವು ಯಾವುದೇ ಕಾಲಮಿತಿಯಲ್ಲಿ ಇರಲು ನಾವೇನು ಗುಲಾಮರಲ್ಲ. ನಾವು ಆದಷ್ಟು ಸಾಧ್ಯವೋ ಅಷ್ಟು ವೇಗವಾಗಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ನಾನು ಈ ಮೊದಲೇ ಹೇಳಿದ್ದೆ, ನಮಗೆ ಇದು ಒಂದು ಆಯ್ಕೆಯಲ್ಲ. ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಬೇಕಾಗಿದೆ. ಕೆಲವು ಸಾಲ ಚಾಲಿತವಾಗಿರುತ್ತದೆ. ನಮಗೆ ಅದನ್ನು ನಿಯಂತ್ರಿಸುವ ಯಾವುದೇ ಯೋಜನೆ ಇಲ್ಲ ಎಂದು ಪುರಿ ಹೇಳಿದರು.

ABOUT THE AUTHOR

...view details