ನವದೆಹಲಿ:ನೊವೆಲ್ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಉದ್ಯಮಿಗಳು ಮತ್ತು ಬಂಡವಾಳಶಾಹಿ ಸಾಹಸೋದ್ಯಮಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸ್ತಾವನೆಯೊಂದನ್ನು ಬರೆದಿದ್ದಾರೆ.
ಅರ್ಬನ್ ಕಂಪನಿಯ ಸಹ ಸಂಸ್ಥಾಪಕ ಕುನಾಲ್ ಷಾ ಮತ್ತು ಕುನಾಲ್ ಬಹ್ಲ್ (ಸ್ನ್ಯಾಪ್‌ಡೀಲ್) ಸೇರಿದಂತೆ 51 ಸ್ಟಾರ್ಟ್ಅಪ್ ಮತ್ತು ವ್ಯವಹಾರಗಳ ಸಾಹಸೋದ್ಯಮಿ ಬಂಡವಾಳಶಾಹಿಗಳು ಹಾಗೂ ಇತರ ಉದ್ಯಮಿಗಳು ಒಗ್ಗೂಡಿ ಈ ಪ್ರಸ್ತಾವನೆ ಸಿದ್ಧಪಡಿಸಿ ಹಲವು ಸಲಹೆಗಳನ್ನು ನೀಡಿದ್ದಾರೆ.
ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಜಪಾನ್‌ನಂತಹ ಮುಂಚೂಣಿ ಹಾಗೂ ಬಲಿಷ್ಠವಾಗಿ ಕಾರ್ಯನಿರ್ವಹಿಸುವ ದೇಶಗಳು ತಡವಾಗಿ ಎಚ್ಚೆತ್ತುಕೊಂಡ ರಾಷ್ಟ್ರಗಳಿಗೆ ಹೋಲಿಸಿದರೆ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಅರಬ್, ಇಟಲಿ, ಫ್ರಾನ್ಸ್ ಮತ್ತು ಅಮೆರಿಕ ಸಮರ್ಥವಾಗಿವೆ ಎಂದು ಉಲ್ಲೇಖಿಸಿದ್ದಾರೆ.
ಮುಖ್ಯವಾಗಿ ಪರಿಣಾಮ ಬೀರುವ ನಗರಗಳಲ್ಲಿ 144ನೇ ಸೆಕ್ಷನ್ ಜಾರಿಯೊಂದಿಗೆ ಸರ್ಕಾರ, 2-3 ವಾರಗಳ ಲಾಕ್‌ಡೌನ್ ಅನ್ನು ಈಗಿನಿಂದಲೇ ವಿಧಿಸಬೇಕು. ನಂತರ ಎರಡನೇ ಲಾಕ್‌ಡೌನ್‌ಗೆ ಸಿದ್ಧವಾಗಬೇಕು. ಪ್ರಯಾಣದ ಮೇಲಿನ ನಿರ್ಬಂಧಗಳು ಮುಂದುವರಿಯಬೇಕು. ನಮಗೆ ಇನ್ನೂ ಹೆಚ್ಚಿನ ಅಗತ್ಯವಿರಬಹುದಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದಿದ್ದಾರೆ.