ಕರ್ನಾಟಕ

karnataka

ETV Bharat / business

ಇಎಂಐ ಮುಂದೂಡುವ ನೆಪದಲ್ಲಿ ವಂಚನೆ: ಒಟಿಪಿ ನಂ. ಕೊಟ್ಟರೆ ನಿಮ್ಮ ಅಕೌಂಟ್​ನ ದುಡ್ಡು ಮಾಯ - ಭಾರತದಲ್ಲಿನ ವಂಚನೆ

ಗೃಹ ಸಾಲ, ವಾಹನ ಸಾಲ ಒಳಗೊಂಡಂತೆ ಬ್ಯಾಂಕ್‌ ಸಾಲಗಳ ಸಂಬಂಧ ಇಎಂಐ ಅನ್ನು ಮೂರು ತಿಂಗಳ ಕಾಲ ಮುಂದೂಡುವ ಅವಕಾಶವನ್ನು ರಿಸರ್ವ್‌ ಬ್ಯಾಂಕ್‌ ನೀಡಿದೆ. ಜನರು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು, ಅಗತ್ಯವಿದ್ದಲ್ಲಿ ಇಎಂಐ ಮುಂದೂಡಬಹುದು. ಆದರೆ, ಜನರ ಅವಶ್ಯಕತೆ ಮತ್ತು ಮುಗ್ಧತೆಯನ್ನು ಈ ಸಂದರ್ಭದಲ್ಲೂ ಸೈಬರ್‌ ಕ್ರಿಮಿನಲ್‌ಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

cyber fraud
ಆನ್​ಲೈನ್ ವಂಚಕರು

By

Published : Apr 9, 2020, 7:14 PM IST

ನವದೆಹಲಿ: ಲಾಕ್​ಡೌನ್​ನಿಂದ ಆರ್​ಬಿಐ ತಾತ್ಕಾಲಿಕವಾಗಿ ಇಎಂಐ ಪಾವತಿಯನ್ನು ನಿಷೇಧಿಸಿದೆ. ದುಷ್ಕರ್ಮಿಗಳು ಇದನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಸಾಧ್ಯತೆ ಇದೆ. ಬ್ಯಾಂಕ್​ಗಳ ಹೆಸರಿನಲ್ಲಿ ಯಾರಾದರೂ ಕರೆ ಮಾಡಿ ಒಟಿಪಿ ಮತ್ತು ಇತರೆ ಮಾಹಿತಿ ಕೇಳಿದರೆ ನೀಡಬಾರದು ಎಂದು ಪ್ರಮುಖ ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡಿವೆ.

ಕಳೆದ ಕೆಲವು ದಿನಗಳಿಂದ ಎಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಇತರ ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್ ಮತ್ತು ಇ-ಮೇಲ್‌ಗಳನ್ನು ವಂಚನೆಯ ಬಗ್ಗೆ ಕಳುಹಿಸಿವೆ.

ಆನ್​ಲೈನ್ ವಂಚಕರು ಇಎಂಐ ವಿನಾಯಿತಿ ನೀಡುವುದಾಗಿ ಬ್ಯಾಂಕ್​ಗಳ ಪ್ರತಿನಿಧಿ ಹೆಸರಿನಲ್ಲಿ ವಂಚಿಸುವ ಸಾಧ್ಯತೆ ಇದೆ. ಇದು ಹೊಸ ಸೈಬರ್​ ವಂಚನೆ ವಿಧಾನವಾಗಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಎಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಇ-ಮೇಲ್​ ಮೂಲಕ ಎಚ್ಚರಿಕೆ ನೀಡಿದೆ.

ಇಎಂಐ ಪಾವತಿಗಳನ್ನು ಮುಂದೂಡಿಕೆಗೆ ನೆರವಾಗಲು ನಿಮ್ಮ ಬ್ಯಾಂಕಿಂಗ್ ಖಾತೆಗಳಿಗೆ ಸಂಬಂಧಿಸಿದ ಒಟಿಪಿ, ಸಿವಿವಿ, ಪಾಸ್‌ವರ್ಡ್ ಅಥವಾ ಪಿನ್ ಅನ್ನು ಹಂಚಿಕೊಳ್ಳಲು ವಿನಂತಿಸಲು ನಿಮ್ಮನ್ನು ಸಂಪರ್ಕಿಸಬಹುದು.

ಜಾಗರೂಕರಾಗಿರಿ! ವಿವರಗಳನ್ನು ಹಂಚಿಕೊಂಡರೆ ಹಣಕಾಸಿನ ನಷ್ಟಕ್ಕೆ ಕಾರಣವಾಗುವ ನಿಮ್ಮ ಬ್ಯಾಂಕಿಂಗ್ ಮಾಹಿತಿ ಅನಗತ್ಯ ಪ್ರವೇಶ ಪಡೆಯಬಹುದು. ಇಎಂಐ ಮುಂದೂಡಿಕೆ ವಂಚನೆಗಳ ಬಗ್ಗೆ ಎಚ್ಚರವಹಿಸಿ ಎಂದು ಎಕ್ಸಿಸ್ ಬ್ಯಾಂಕ್ ಹೇಳಿದೆ.

ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, ಹೊಸ ಶೈಲಿಯ ಸೈಬರ್ ಅಪರಾಧವನ್ನು ವಂಚಕರು ಆರಂಭಿಸಿದ್ದಾರೆ. ಜನರು ಈ ಬಗ್ಗೆ ಎಚ್ಚರಿಕೆ ಮತ್ತು ಜಾಗೃತರಾಗಿರಿ ಎಂದು ಟ್ವಿಟ್ಟರ್​ ಮೂಲಕ ತಿಳಿಸಿದೆ.

ABOUT THE AUTHOR

...view details