ಸ್ಯಾನ್ಫ್ರಾನ್ಸಿಸ್ಕೋ :2020ರ ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಬಹು ದಿನಗಳಿಂದ ಜಗತ್ತಿನ ನಂಬರ್ 1 ಸಿರಿವಂತ ಸ್ಥಾನದಲ್ಲಿದ್ದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಎಲೋನ್ ಮಸ್ಕ್ ಹಿಂದಿಕ್ಕಿದ್ದರು. ಆದರೆ, ಕೆಲ ದಿನಗಳವರೆಗೆ ಅಗ್ರಪಟ್ಟ ಬಿಟ್ಟು ಕೊಟ್ಟಿದ್ದರು. ಈಗ ಮತ್ತೆ ಅಗ್ರ ಶ್ರೇಯಾಂಕಕ್ಕೆ ಮರಳಿದ್ದಾರೆ ಮಸ್ಕ್.
ಟೆಸ್ಲಾ ಷೇರುಗಳ ಮೌಲ್ಯ ರಾತ್ರೋರಾತ್ರಿ ಶೇ.2ರಷ್ಟು ಏರಿಕೆಯಾಗಿದೆ. ಇದು ಅದರ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಅವರನ್ನು ಮತ್ತೆ ವಿಶ್ವದ ಶ್ರೀಮಂತರನ್ನಾಗಿ ಮಾಡಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಎಲೋನ್ ಮಸ್ಕ್‌ನ ಒಟ್ಟು ಸಂಪತ್ತು 182 ಬಿಲಿಯನ್ ಡಾಲರ್ನಷ್ಟಾಗಿದೆ. ಅಮೆಜಾನ್‌ನ ಜೆಫ್ ಬೆಜೋಸ್‌ಗಿಂತ ಸ್ವಲ್ಪ ಮುಂದಿದ್ದು, ಇವರ ಸಂಪತ್ತು 181 ಬಿಲಿಯನ್ ಡಾಲರ್ನಷ್ಟಿದೆ.