ಕ್ಯಾಲಿಪೋರ್ನಿಯಾ: ಟೆಸ್ಲಾ ಮುಖ್ಯಸ್ಥ ಮತ್ತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಸೆರೆಹಿಡಿಯುವ ಅತ್ಯುತ್ತಮ ತಂತ್ರಜ್ಞಾನಕ್ಕಾಗಿ 100 ಮಿಲಿಯನ್ ಡಾಲರ್ (730 ಕೋಟಿ ರೂ.) ಬಹುಮಾನ ಘೋಷಿಸಿದ್ದಾರೆ.
ಮತ್ತು ಅನೇಕ ಟ್ವಿಟರ್ ಬಳಕೆದಾರರು ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದರು - ಮರವನ್ನು ನೆಡುತ್ತಾರೆ.
ಭೂಮಿ ಮೇಲಿನ ತಾಪಮಾನ ಹೊರಸೂಸುವಿಕೆ ಸೆರೆ ಹಿಡಿಯುವುದು ಹವಾಮಾನ ಬದಲಾವಣೆ ನಿಯಂತ್ರಿಸುವ ಹಲವು ಯೋಜನೆಗಳ ನಿರ್ಣಾಯಕ ಭಾಗವಾಗುತ್ತಿವೆ. ಆದರೆ ಇಲ್ಲಿಯವರೆಗೆ ತಂತ್ರಜ್ಞಾನದ ಮೇಲೆ ಬಹಳ ಕಡಿಮೆ ಪ್ರಗತಿಯನ್ನು ಸಾಧಿಸಲಾಗಿದೆ. ಇಂಗಾಲವನ್ನು ಗಾಳಿಯಿಂದ ಹೊರತೆಗೆಯುವ ಬದಲು ಹೊರಸೂಸುವಿಕೆ ಕಡಿತಗೊಳಿಸುವತ್ತ ಗಮನ ಹರಿಸಲಾಗಿದೆ.
ಅತ್ಯುತ್ತಮ ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನ ಸಾಧಿಸಿದವರಿಗೆ 100 ಮಿಲಿಯನ್ ಡಾಲರ್ ದೇಣಿಗೆ ನೀಡುತ್ತಿದ್ದೇನೆ ಎಂದು ಎಲಾನ್ ಮಸ್ಕ್ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಮುಂದಿನ ವಾರ ಈ ಬಗ್ಗೆ ವಿವರಗಳನ್ನು ನೀಡುವ ಭರವಸೆ ನೀಡಿದ್ದಾರೆ.
ಈ ಪ್ರಕಟಣೆಯು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿತು, ಬಹುಮಾನದ ಮೊತ್ತ ಕೇಳಿ ಹಲವು ನಿಬ್ಬೆರಗಾಗಿದ್ದಾರೆ. ಕೆಲವು ಗಂಟೆಗಳ ಹಿಂದೆ ಹಂಚಿಕೊಂಡಾಗಿನಿಂದ ಈ ಟ್ವೀಟ್ 3.06 ಲಕ್ಷ ಲೈಕ್, 21 ಸಾವಿರ ಪ್ರತಿಕ್ರಿಯೆ ಹಾಗೂ 36.9 ಸಾವಿರ ಮರು ಟ್ವೀಟ್ ಆಗಿದೆ. ಹೆಚ್ಚಿನವರು ಬಿಲಿಯನೇರ್‌ಗೆ ಮರಗಳನ್ನು ನೆಡುವಂತೆ ಒತ್ತಾಯಿಸಿದ್ದಾರೆ.